ಬೆಂಗಳೂರು: ಹಳದಿ ಮೆಟ್ರೋ ಮಾರ್ಗ ಆರಂಭ ಬೆನ್ನಲ್ಲೇ ಉಚಿತ ಫೀಡರ್ ಬಸ್ ಸೇವೆ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೆಟ್ರೋ ಹಳದಿ ಮಾರ್ಗ ಆರಂಭ ಬೆನ್ನಲ್ಲೇ ಪ್ರಯಾಣಿಕರ ಅನುಕೂಲ ದೃಷ್ಟಿಯಿಂದ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಉಚಿತ ಫೀಡರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್‌ಗಳು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣ ಮತ್ತು ಪ್ರಮುಖ ಕಚೇರಿಗಳಿಗೆ ಸಂಪರ್ಕ ಹೊಂದಿದೆ.

ಬೆಂಗಳೂರು: ಹಳದಿ ಮೆಟ್ರೋ ಮಾರ್ಗ ಆರಂಭ ಬೆನ್ನಲ್ಲೇ ಉಚಿತ ಫೀಡರ್ ಬಸ್ ಸೇವೆ
ಉಚಿತ ಬಸ್​ ಸೇವೆ

Updated on: Aug 18, 2025 | 11:52 AM

ಬೆಂಗಳೂರು, ಆಗಸ್ಟ್​ 18: ಐಟಿ ಹಬ್​ ಎಲೆಕ್ಟ್ರಾನಿಕ್​ ಸಿಟಿಗೆ ಸಂಪರ್ಕಿಸುವ ಆರ್.ವಿ.ರಸ್ತೆ ಟು ಬೊಮ್ಮಸಂದ್ರ ಮಾರ್ಗದಲ್ಲಿ ಹಳದಿ ಮೆಟ್ರೋ (Metro Yellow Line) ಈಗಾಗಲೇ ಕಾರ್ಯಾರಂಭ ಮಾಡಿದೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕೆ ಇತ್ತೀಚೆಗೆ ಬಿಎಂಟಿಸಿ ಬಸ್​​ಗಳನ್ನು ಆರಂಭಿಸಿತ್ತು. ಇದೀಗ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ELCITA) ಉಚಿತ​ ಫೀಡರ್ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಆ ಮೂಲಕ ಈ ಮಾರ್ಗದಲ್ಲಿ ಆಫೀಸ್​ಗಳಿಗೆ ಹೋಗುವವರಿಗೆ ಸಹಕಾರಿಯಾಗಲಿದೆ.

ಉಚಿತ ಬಸ್​ ಸೇವೆ ಒದಗಿಸುವ ಮೂಲಕ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಕುರಿತಾಗಿ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.

ಉಚಿತ​ ಫೀಡರ್ ಬಸ್ ಸೇವೆಯೂ ಎಲೆಕ್ಟ್ರಾನಿಕ್​ ಸಿಟಿ ಮೆಟ್ರೋ ನಿಲ್ದಾಣ (EC1) ಮತ್ತು ಇನ್ಫೋಸಿಸ್, ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ (EC2) ದಿಂದ ಎಲೆಕ್ಟ್ರಾನಿಕ್​ ಸಿಟಿ ನಗರದಾದ್ಯಂತ ಪ್ರಮುಖ ಕಚೇರಿ ಕ್ಯಾಂಪಸ್‌ಗಳಿಗೆ ಸಂಪರ್ಕಿಸುತ್ತದೆ. ಆ ಮೂಲಕ ಮೆಟ್ರೋ ನಿಲ್ದಾಣಗಳಿಂದ ಆಫೀಸ್​ಗಳಿಗೆ ಹೋಗುವವರಿಗೆ ಅನುಕೂಲವಾಗಲಿದೆ. ಈ ಸೇವೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಲಭ್ಯವಿರಲಿದೆ. 

ಇದನ್ನೂ ಓದಿ: ಈ ಮೆಟ್ರೋ ಮಾರ್ಗದಲ್ಲಿ ಇಂದಿನಿಂದ ಬಿಎಂಟಿಸಿ ಫೀಡರ್ ಬಸ್​ಗಳ ಸಂಚಾರ

ನಮ್ಮ ಮೆಟ್ರೋ ಹಳದಿ ಮಾರ್ಗವು ಆರ್‌ವಿ ರಸ್ತೆ ಟು ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ. ಈ ಮಾರ್ಗದ ಮೆಟ್ರೋ ಸಂಚಾರ ಆರಂಭವಾದ ಕೆಲವೇ ದಿನಗಳಲ್ಲಿ ಈ ಉಚಿತ ಬಸ್​ ಸೇವೆ ನೀಡಲಾಗುತ್ತಿದೆ. ಆ ಮೂಲಕ ನಗರದ ದಕ್ಷಿಣ ಟೆಕ್ ಕಾರಿಡಾರ್‌ನಲ್ಲಿ ಸಾರ್ವಜನಿಕ ಸಾರಿಗೆ ಆಯ್ಕೆಗಳು ಗಮನಾರ್ಹವಾಗಿ ಹೆಚ್ಚಳವಾಗಿವೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗದ ವಿಶೇಷತೆಗಳೇನು? ಇಲ್ಲಿದೆ ವಿವರ, ಫೋಟೋಸ್​ ನೋಡಿ

ಇನ್ನು ಅದೇ ರೀತಿಯಾಗಿ ಆರ್.ವಿ.ರಸ್ತೆ ಟು ಬೊಮ್ಮಸಂದ್ರ ಮಾರ್ಗದಲ್ಲಿ ಇತ್ತೀಚೆಗೆ ಬಿಎಂಟಿಸಿ ಕೂಡ ತನ್ನ ಫೀಡರ್ ಬಸ್​ಗಳನ್ನು ರಸ್ತೆಗಿಳಿಸಿತ್ತು. ಆ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಅನುಕೂಲ ಮಾಡಿಕೊಟ್ಟಿತ್ತು. ಆಗಸ್ಟ್​ 11ರಿಂದ ಆರಂಭಗೊಂಡ ಬಿಎಂಟಿಸಿ ಫೀಡರ್ ಬಸ್ ಸೇವೆ, ಬೊಮ್ಮಸಂದ್ರದಿಂದ ಹೆಬ್ಬಗೋಡಿ ಹಾಗೂ ಕೋನಪ್ಪನ ಅಗ್ರಹಾರದಿಂದ ಎಲೆಕ್ಟ್ರಾನಿಕ್ ಮಾರ್ಗಗಳಲ್ಲಿ ಸಂಚಾರ ನಡೆಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:51 am, Mon, 18 August 25