
ಬೆಂಗಳೂರು, ನವೆಂಬರ್ 16: ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಕ್ಷೇತ್ರವು ಭಾರತ ಸರ್ಕಾರದ ಸ್ವಚ್ಛ ವಾಯು ಸಮೀಕ್ಷೆಯಲ್ಲಿ 151ನೇ ಸ್ಥಾನ ಪಡೆದುಕೊಂಡಿದೆ. ಭಾರತ ಸರ್ಕಾರದ ಸ್ವಚ್ಛ ವಾಯು ಸರ್ವೇಕ್ಷಣ 2026ರಲ್ಲಿ ಅಡಿಯಲ್ಲಿ ಬೆಂಗಳೂರಿನ ಕೋರಮಂಗಲ ವಾರ್ಡ್-151 ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. ಬಿಟಿಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೋರಮಂಗಲ ವಾರ್ಡ್, 30 ಸಾವಿರಕ್ಕೂ ಅಧಿಕ ಜನಸಂಖ್ಯೆಯ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.
ಸ್ವಚ್ಛ ವಾಯು ಸಮೀಕ್ಷೆಯಲ್ಲಿ ಕೋರಮಂಗಲ ವಾರ್ಡ್ 151ನೇ ಸ್ಥಾನ ಪಡೆದಿದೆ. ಬಿಟಿಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ವಾರ್ಡ್‌ನಲ್ಲಿ ಸ್ವಚ್ಛ ಗಾಳಿ ಅಭಿಯಾನ, ಸುಸ್ಥಿರ ನಗರ ಚಟುವಟಿಕೆಗಳು, ಘನತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗಿದೆ. ಈ ಪ್ರಯತ್ನಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆತಿದೆ.
ಇನ್ನು ಈ ಕುರಿತಾಗಿ ಸಚಿವ ರಾಮಲಿಂಗಾರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ‘ಪ್ರಶಸ್ತಿ ಪಡೆಯಲು ಸಹಕರಿಸಿದ ಎಲ್ಲಾ ಅಧಿಕಾರಿಗಳು, ಪೌರಕಾರ್ಮಿಕರು ಮತ್ತು ನಾಗರಿಕರನ್ನು ಅಭಿನಂದಿಸಿರುವ ಅವರು, ಎಲ್ಲರ ಸಾಮೂಹಿಕ ಪ್ರಯತ್ನದಿಂದ ಕರ್ನಾಟಕಕ್ಕೆ ಈ ಗೌರವ ಲಭಿಸಿದೆ’ ಎಂದು ತಿಳಿಸಿದ್ದಾರೆ.
ಸ್ವಚ್ಛ ವಾಯು ಸರ್ವೇಕ್ಷಣ್ 2026ರಲ್ಲಿ ಕರ್ನಾಟಕದ ಮೂರು ವಾರ್ಡ್‌ಗಳು ವಿವಿಧ ಜನಸಂಖ್ಯೆ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿವೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪಿಂಕ್ ಲೈನ್ ಬೆಂಗಳೂರಿನ ಅಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲಾಗಲಿ: ಸಚಿವ ರಾಮಲಿಂಗಾರೆಡ್ಡಿ ಪೋಸ್ಟ್
ನಗರ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸುಧಾರಣೆ ಹಾಗೂ ಆರೋಗ್ಯಕರ ಜೀವನ ಪರಿಸರ ನಿರ್ಮಾಣಕ್ಕೆ ಬೆಂಗಳೂರು ಮತ್ತು ದಾವಣಗೆರೆ ನಗರಗಳ ಈ ಸಾಧನೆ ಪ್ರೇರಣೆಯಾಗಿದ್ದು, ಇತರ ನಗರ ಸ್ಥಳೀಯ ಸಂಸ್ಥೆಗಳೂ ಸ್ವಚ್ಛ ಗಾಳಿ ಮತ್ತು ಉತ್ತಮ ಜೀವನಮಟ್ಟಕ್ಕಾಗಿ ನವೀನ ಹಾಗೂ ಸುಸ್ಥಿರ ಕ್ರಮಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.