AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ್ತ್‌ಡೇ, ಪ್ರಿವೆಡ್ಡಿಂಗ್‌ ಶೂಟ್​​​​ಗೆ ಬಾಡಿಗೆಗೆ ಸಿಗುತ್ತೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌, ಬಾಡಿಗೆ ಎಷ್ಟು?

ಕಲ್ಯಾಣ ಮಂಟಪ ಅಥವಾ ರೆಸಾರ್ಟ್‌ಗಳಲ್ಲಿ ನಿಮ್ಮನೆಯ ವಿಶೇಷ ಸಮಾರಂಭ ಆಚರಿಸಿ ಬೋರ್‌ ಆಗಿದ್ದಲ್ಲಿ ಅಂಬಾರಿ ಬಸ್​​​​ಗಳಲ್ಲೂ ಸಹ ಸೆಲೆಬ್ರೆಶನ್ ಮಾಡಿಕೊಳ್ಳಬಹುದು.ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) 'ಅಂಬಾರಿ' ಡಬಲ್ ಡೆಕ್ಕರ್ ಬಸ್ ಅನ್ನು ಖಾಸಗಿ ಸೆಲಬ್ರೇಷನ್‌ ಹಾಗೂ ಪೋಟೋಶೂಟ್‌ಗಳಿಗಾಗಿ ಬುಕ್ ಮಾಡಬಹುದು. ಪ್ರೀ-ವೆಡ್ಡಿಂಗ್ ಫೋಟೋಶೂಟ್ ಬಯಸುವ ಜೋಡಿಗಳು ಈ ಓಪನ್-ಟಾಪ್ ಡಬಲ್ ಡೆಕ್ಕರ್ ಬಸ್ ಬಾಡಿಗೆಗೆ ಪಡೆಯಬಹುದಾಗಿದ್ದು, ಬೆಂಗಳೂರಿನ ಪ್ರಮುಖ 26 ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಲೇ ಸಂಭ್ರಮಾಚರಣೆ ಅಥವಾ ಶೂಟಿಂಗ್ ನಡೆಸಬಹುದಾಗಿದೆ. ಹೇಗೆ? ಎಷ್ಟು ಬಾಡಿಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬರ್ತ್‌ಡೇ, ಪ್ರಿವೆಡ್ಡಿಂಗ್‌ ಶೂಟ್​​​​ಗೆ  ಬಾಡಿಗೆಗೆ ಸಿಗುತ್ತೆ ಡಬಲ್‌ ಡೆಕ್ಕರ್‌ ಅಂಬಾರಿ ಬಸ್‌, ಬಾಡಿಗೆ ಎಷ್ಟು?
Ambaari Double Decker Bus
ಕಿರಣ್​ ಸೂರ್ಯ
| Edited By: |

Updated on: Aug 06, 2026 | 2:52 PM

Share

ಬೆಂಗಳೂರು, (ಆಗಸ್ಟ್ 06): ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಅನ್ನು(ambaari double decker buses)  ಈಗ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭಗಳು, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗಾಗಿ ಬುಕ್ ಮಾಡಬಹುದು. ಹೌದು…ಪ್ರವಾಸೋದ್ಯಮ ಇಲಾಖೆಯ ಅಂಬಾರಿ ಡಬಲ್ ಡೆಕರ್ ಬಸ್​​​​ಗಳು ಇನ್ಮುಂದೆ ಬೆಂಗಳೂರು ನಗರದಲ್ಲಿ ಓಡಾಡಲು ಸೀಮಿತವಾಗಿರುವುದಿಲ್ಲ. ಬದಲಾಗಿ ಪ್ರಿ ವೆಡ್ಡಿಂಗ್ ಶೂಟ್, ಬರ್ತ್​​​​ ಡೇ ಸೆಲೆಬ್ರೆಶನ್​​​ಗೆ ಬಸ್​​​​​ಗಳು ಬಾಡಿಗೆಗೆ ಸಿಗಲಿವೆ.

2026ರ ಜನವರಿಯಲ್ಲಿ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್‌ಗಳ ಸೇವೆಯನ್ನು ಪ್ರಾರಂಭಿಸಲಾಯಿತು. ಕೆಎಸ್‌ಟಿಡಿಸಿ (KSTDC) ನಿರ್ವಹಿಸುವ ಮೂರು ಬಸ್‌ಗಳು ಇದುವರೆಗೆ ಪ್ರವಾಸಿಗರಿಗೆ ನಗರ ಪರ್ಯಟನೆಯ ‘ಹಾಪ್-ಆನ್, ಹಾಪ್-ಆಫ್’ (Hop-on, Hop-off) ಸೇವೆಯನ್ನು ನೀಡುತ್ತಿದ್ದವು. ಇವು ರವೀಂದ್ರ ಕಲಾಕ್ಷೇತ್ರ, ಹಡ್ಸನ್ ಸರ್ಕಲ್, ಕಸ್ತೂರ್ಬಾ ರಸ್ತೆ, ಕಂಠೀರವ ಕ್ರೀಡಾಂಗಣ, ಕಬ್ಬನ್ ರಸ್ತೆ, ವಿಧಾನ ಸೌಧ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿದಂತೆ ಒಟ್ಟು 26 ಪ್ರಮುಖ ಆಕರ್ಷಣೀಯ ಸ್ಥಳಗಳನ್ನು ಸುತ್ತಿಬರುತ್ತವೆ.

ಇದನ್ನೂ ನೋಡಿ: ಲಾಲ್‌ಬಾಗ್​​ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

ಬಾಡಿಗೆ ಎಷ್ಟು?

ಇನ್ನು ಈ ಬಸ್ ಒಂದು ದಿನಕ್ಕೆ ವಾರದ ದಿನಗಳಲ್ಲಿ 32 ಸಾವಿರ ರೂಪಾಯಿ, ವಾರಾಂತ್ಯದಲ್ಲಿ 40 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಇನ್ನು ಸಮಾರಂಭಗಳು ಮತ್ತು ಪಾರ್ಟಿಗಳಿಗೆ 5 ಗಂಟೆಗಳ ಅವಧಿಗೆ ವಾರಾಂತ್ಯ (Sat-Sun): 28,000 + 5% GST, ವಾರದ ದಿನಗಳು (Mon-Fri 26,000 ರೂ. + 5% GST. ಒಂದು ವೇಳೆ ನಿಯಮಿತ ಸಮಯ ಮೀರಿದರೆ, ಇಡೀ ದಿನದ ದರ ಅನ್ವಯಿಸುತ್ತದೆ.

ಫೋಟೋಶೂಟ್‌ಗಳಿಗೆ (2 ಗಂಟೆಗಳ ಅವಧಿ)

  • ವಾರಾಂತ್ಯ (Sat-Sun): 16,000 ರೂಪಾಉಇ + 5% GST.
  • ವಾರದ ದಿನಗಳು (Mon-Fri):12,000 ರೂ. + 5% GST.
  • 2 ಗಂಟೆಗಿಂತ ಹೆಚ್ಚುವರಿ ಸಮಯಕ್ಕೆ ವಾರಾಂತ್ಯದಲ್ಲಿ ಪ್ರತಿ ಗಂಟೆಗೆ 7,000 ಹಾಗೂ ವಾರದ ದಿನಗಳಲ್ಲಿ ಪ್ರತಿ ಗಂಟೆಗೆ 6,000 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಇದು ಕೇವಲ ಹೆಚ್ಚುವರಿ ಆದಾಯ ಗಳಿಕೆಯಷ್ಟೇ ಅಲ್ಲ, ಬೆಂಗಳೂರಿನಂತಹ ನಗರದಲ್ಲಿ ಪ್ರವಾಸಿಗರಿಗೆ ಮತ್ತು ಜನರಿಗೆ ಆಚರಣೆ ಮಾಡಲು ಹೊಸ ಮತ್ತು ವಿಶಿಷ್ಟ ಆಯ್ಕೆಗಳನ್ನು ಒದಗಿಸುವ ಪ್ರಯತ್ನವಾಗಿದೆ.

ಕೆಎಸ್‌ಟಿಡಿಸಿ ಅಧಿಕಾರಿಯೊಬ್ಬರು,ಜನವರಿಯಿಂದ ಇದುವರೆಗೆ ಸುಮಾರು 20,000 ಜನರು ಈ ಹಾಪ್-ಆನ್, ಹಾಪ್-ಆಫ್ ಸೇವೆಯನ್ನು ಬಳಸಿಕೊಂಡಿದ್ದಾರೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ ಹಾಗೂ ವಾರದ ದಿನಗಳಲ್ಲೂ ಉತ್ತಮ ಸ್ಪಂದನೆ ಸಿಗುತ್ತಿದೆ. ತಂಪಾದ ವಾತಾವರಣವಿದ್ದಾಗ ಹೆಚ್ಚಿನವರು ಟಾಪ್‌ ಡೆಕ್‌ ಸೀಟುಗಳನ್ನೇ ಇಷ್ಟಪಡುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡು, ಈಗ ಸಾರ್ವಜನಿಕರಿಗೆ ಜನ್ಮದಿನದ ಆಚರಣೆಗಳು, ಕಾರ್ಪೊರೇಟ್ ಈವೆಂಟ್‌ಗಳು ಹಾಗೂ ಪ್ರೀ-ವೆಡ್ಡಿಂಗ್ ಫೋಟೋಶೂಟ್‌ಗಳಿಗೆ ಅಂಬಾರಿ ಬಸ್‌ಗಳನ್ನು ಕಾಯ್ದಿರಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ