ಗ್ರಾಹಕರ ಗಮನಕ್ಕೆ: ಇಂದಿನಿಂದ 21 ದಿನಗಳ ಕಾಲ ಬೆಸ್ಕಾಂನ ಈ ಎಲ್ಲಾ ಸೇವೆಗಳಿಗೆ ಬ್ರೇಕ್!

ಗ್ರಾಹಕರ ಡೇಟಾವನ್ನು ಹೊಸ ಸಾಫ್ಟ್‌ವೇರ್‌ಗೆ ವರ್ಗಾಯಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜೂನ್ 10 ರಿಂದ 30 ರವರೆಗೆ ಬೆಸ್ಕಾಂನ ಎಲ್ಲಾ ಆನ್‌ಲೈನ್ ಸೇವೆಗಳನ್ನು 21 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಹೊಸ ಸಂಪರ್ಕ, ಹೆಸರು ಬದಲಾವಣೆ ಸೇವೆಗಳು ಲಭ್ಯವಿರುವುದಿಲ್ಲ. ಆದರೆ ಗ್ರಾಹಕರು ಫೋನ್‌ಪೇ, ಗೂಗಲ್ ಪೇ ಮೂಲಕ ಎಂದಿನಂತೆ ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ.

ಗ್ರಾಹಕರ ಗಮನಕ್ಕೆ: ಇಂದಿನಿಂದ 21 ದಿನಗಳ ಕಾಲ ಬೆಸ್ಕಾಂನ ಈ ಎಲ್ಲಾ ಸೇವೆಗಳಿಗೆ ಬ್ರೇಕ್!
ಇಂದಿನಿಂದ 21 ದಿನಗಳ ಕಾಲ ಬೆಸ್ಕಾಂನ ಈ ಎಲ್ಲಾ ಸೇವೆಗಳಿಗೆ ಬ್ರೇಕ್!
Image Credit source: gettyimages.com

Updated on: Jun 10, 2026 | 10:28 AM

ಬೆಂಗಳೂರು, ಜೂನ್ 10: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತನ್ನ ಗ್ರಾಹಕರಿಗೆ ಪ್ರಮುಖ ಮುನ್ಸೂಚನೆಯೊಂದನ್ನು ನೀಡಿದೆ. ಗ್ರಾಹಕರ ಡೇಟಾವನ್ನು ‘ಟೋಟಲ್ ರೆವಿನ್ಯೂ ಮ್ಯಾನೇಜ್‌ಮೆಂಟ್’ ಸಾಫ್ಟ್‌ವೇರ್‌ನಿಂದ ‘ಇಂಟಿಗ್ರೇಟೆಡ್ ಪವರ್ ಡೆವಲಪ್‌ಮೆಂಟ್ ಸ್ಕೀಮ್’ ತಂತ್ರಜ್ಞಾನಕ್ಕೆ ವರ್ಗಾಯಿಸುವ ಸಲುವಾಗಿ, ಬೆಸ್ಕಾಂ ಒದಗಿಸುವ ಎಲ್ಲಾ ಆನ್‌ಲೈನ್ ಸೇವೆಗಳನ್ನು ಜೂನ್ 10 ರಿಂದ ಜೂನ್ 30 ರವರೆಗೆ ಒಟ್ಟು 21 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಆದರೆ ಗೂಗಲ್ ಪೇ, ಫೊನ್ ಪೇ ಮುಖಾಂತರ ಗ್ರಾಹಕರು ಬಿಲ್ ಪಾವತಿಸಬಹುದಾಗಿದೆ.

ಮುಖ್ಯಾಂಶಗಳು

  • ಜೂನ್ 10 ರಿಂದ 30 ರವರೆಗೆ ಬೆಸ್ಕಾಂ ಆನ್‌ಲೈನ್ ಸೇವೆಗಳು ಇರುವುದಿಲ್ಲ.
  • ಸಾಫ್ಟ್‌ವೇರ್ ಡೇಟಾ ವರ್ಗಾವಣೆ ಪ್ರಕ್ರಿಯೆಗಾಗಿ ಈ ತಾಂತ್ರಿಕ ಸ್ಥಗಿತ ಅನಿವಾರ್ಯವಾಗಿದೆ.
  • ಗೂಗಲ್ ಪೇ, ಫೋನ್‌ಪೇ ಮೂಲಕ ಬಿಲ್ ಪಾವತಿಸಲು ಗ್ರಾಹಕರಿಗೆ ಅವಕಾಶವಿದೆ.

ಯಾವೆಲ್ಲಾ ಸೇವೆಗಳು ಲಭ್ಯವಿರುವುದಿಲ್ಲ?

ಈ 21 ದಿನಗಳ ಅವಧಿಯಲ್ಲಿ ಬೆಸ್ಕಾಂನ ಅಧಿಕೃತ ಪೋರ್ಟಲ್ ಹಾಗೂ ಆಪ್‌ಗಳ ಮೂಲಕ ಲಭ್ಯವಿರುವ ಈ ಕೆಳಗಿನ ಪ್ರಮುಖ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ.

  • ಹೊಸ ವಿದ್ಯುತ್ ಸಂಪರ್ಕಕ್ಕಾಗಿ (New Connection) ಅರ್ಜಿ ಸಲ್ಲಿಕೆ.
  • ಮಾಲೀಕತ್ವದ ಹೆಸರು ವರ್ಗಾವಣೆ (Name Transfer).
  • ಲೋಡ್ ಹೆಚ್ಚಳದ ವಿನಂತಿ (Load Enhancement Request).
  • ಬೆಸ್ಕಾಂ ಅಧಿಕೃತ ವೆಬ್‌ಸೈಟ್/ಗ್ರಾಹಕ ಪೋರ್ಟಲ್ ಮೂಲಕ ಆನ್‌ಲೈನ್ ಬಿಲ್ ಪಾವತಿ.

ಬೆಸ್ಕಾಂ ಅಧಿಕಾರಿಗಳ ಪ್ರಕಾರ, ಹಳೆಯ ಟಿಆರ್‌ಎಂ (TRM) ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಿ ಹೊಸ ಐಟಿ ಅಪ್ಲಿಕೇಶನ್‌ಗೆ ಸಂಪೂರ್ಣವಾಗಿ ಪರಿವರ್ತನೆಗೊಳ್ಳಲು ಈ ತಾಂತ್ರಿಕ ಪ್ರಕ್ರಿಯೆಯು ಅನಿವಾರ್ಯವಾಗಿದೆ.

ಇದನ್ನೂ ಓದಿ BESCOM Electricity Price Hike: ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್

ಬಿಲ್ ಪಾವತಿಗೆ ಪರ್ಯಾಯ ಮಾರ್ಗಗಳು

ಬೆಸ್ಕಾಂನ ಸ್ವಂತ ಆನ್‌ಲೈನ್ ಪೋರ್ಟಲ್‌ಗಳು ಕಾರ್ಯನಿರ್ವಹಿಸದಿದ್ದರೂ, ಗ್ರಾಹಕರು ತಮ್ಮ ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ಯಾವುದೇ ತೊಂದರೆಯಾಗುವುದಿಲ್ಲ. ಗ್ರಾಹಕರು ಪೇಮೆಂಟ್​ಗಾಗಿ ಫೋನ್ ಪೇ (PhonePe), ಗೂಗಲ್ ಪೇ (Google Pay) ಅಥವಾ ಅಮೆಜಾನ್ ಪೇ ಮುಂತಾದ ಯುಪಿಐ (UPI) ಮಾಧ್ಯಮಗಳ ಮೂಲಕ ಎಂದಿನಂತೆ ತಮ್ಮ ವಿದ್ಯುತ್ ಬಿಲ್‌ಗಳನ್ನು ಪಾವತಿಸಬಹುದಾಗಿದೆ. ಅಲ್ಲದೆ, ಸಾಫ್ಟ್‌ವೇರ್ ಅಪ್‌ಗ್ರೇಡ್ ಪ್ರಕ್ರಿಯೆಯಿಂದಾಗಿ ಗ್ರಾಹಕರ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:49 am, Wed, 10 June 26

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us