ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ಯು ಸೌರ ಮೇಲ್ಛಾವಣಿ ಯೋಜನೆಯನ್ನು ಘೋಷಣೆಯಾಗಿ ನಾಲ್ಕು ವರ್ಷಗಳ ನಂತರ ಅಂತಿಮವಾಗಿ ಕಾರ್ಯಗತಗೊಳಿಸಲು ಮುಂದಾಗಿದೆ. ನಾಲ್ಕು ವರ್ಷಗಳ ಹಿಂದೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಸೌರ ಮೇಲ್ಛಾವಣಿ ಯೋಜನೆಯನ್ನು ಘೋಷಿಸಿತ್ತು. ಬೆಸ್ಕಾಂ ಹೇಳಿಕೆಯ ಪ್ರಕಾರ, ಸೌರ ಫಲಕಗಳ ಮೂಲಕ ವಿದ್ಯುತ್ ಉತ್ಪಾದಿಸಲು ಆಸಕ್ತಿ ಹೊಂದಿರುವ ಗ್ರಾಹಕರು https://solarrooftop.gov.in/ ಮೂಲಕ ಅರ್ಜಿ ಸಲ್ಲಿಸಬಹುದು. ಇದುವರೆಗೆ 1,500 ಗ್ರಾಹಕರು ಅರ್ಜಿಗಳು ಬಂದಿವೆ.
ಬೆಸ್ಕಾಂನ ಪೋರ್ಟಲ್ ಬಳಸುವ ಗ್ರಾಹಕರು ಸಬ್ಸಿಡಿ ನಂತರದ ಮೊತ್ತವನ್ನು ಮಾತ್ರ ಮಾರಾಟಗಾರರಿಗೆ ಪಾವತಿಸಬೇಕಾಗುತ್ತದೆ. MNRE ಪೋರ್ಟಲ್ ಬಳಸುವವರು ಸಬ್ಸಿಡಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುವುದರಿಂದ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಕಾರ್ಯವಿಧಾನವನ್ನು ಸರಳಗೊಳಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಹೇಳಿದ್ದಾರೆ.
ಮಾರ್ಚ್ 2019ರಲ್ಲಿ MNRE ಸೌರ ಗೃಹ ಯೋಜನೆಯನ್ನು ಘೋಷಿಸಿ ಎಸ್ಕಾಮ್‌ಗಳನ್ನು ನೋಡಲ್ ಏಜೆನ್ಸಿಗಳಾಗಿ ನೇಮಿಸಿತು. MNRE ಮಾರ್ಗಸೂಚಿಗಳ ಪ್ರಕಾರ, ಗ್ರಾಹಕರಿಗೆ 3kW ವರೆಗೆ ಶೇ 40ರಷ್ಟು ಸಬ್ಸಿಡಿ ಮತ್ತು 3kW ಗಿಂತ ಹೆಚ್ಚಿನ ಅನುಸ್ಥಾಪನೆಗೆ ಶೇ 20 ಸಬ್ಸಿಡಿ ನೀಡಲಾಗುತ್ತದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:39 am, Sun, 11 December 22