ಬೆಂಗಳೂರಿನ ವಿದ್ಯುತ್ ಗ್ರಾಹಕರೇ ಗಮನಿಸಿ! ರಾಜಧಾನಿಯ ಎಲ್ಲ ಮನೆಗಳಿಗೆ ಬರಲಿದೆ ಹೊಸ ವಿದ್ಯುತ್ ಮೀಟರ್ – ಅದಕ್ಕೂ ಮುನ್ನ ಈ ಬರಹ ಓದಿ

BESCOM MD Mahantesh Bilagi: 2024ರ ವೇಳೆಗೆ ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಗ್ರಾಹಕರು ಡಿಜಿಟಲ್‌ ಮೀಟರ್‌ ಗೆ ಹಣ ಪಾವತಿಸಬೇಕಾಗಿಲ್ಲ ಎನ್ನುತ್ತಾರೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಂತೇಶ ಬೀಳಗಿ.

ಬೆಂಗಳೂರಿನ ವಿದ್ಯುತ್ ಗ್ರಾಹಕರೇ ಗಮನಿಸಿ! ರಾಜಧಾನಿಯ ಎಲ್ಲ ಮನೆಗಳಿಗೆ ಬರಲಿದೆ ಹೊಸ ವಿದ್ಯುತ್ ಮೀಟರ್ - ಅದಕ್ಕೂ ಮುನ್ನ ಈ ಬರಹ ಓದಿ
ರಾಜಧಾನಿಯ ಎಲ್ಲ ಮನೆಗಳಿಗೆ ಬರಲಿದೆ ಹೊಸ ವಿದ್ಯುತ್ ಮೀಟರ್
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 10, 2022 | 3:13 PM

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿನ (BMAZ) ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸುವ ಕಾರ್ಯ ನಡೆಯುತ್ತಿದೆ. ಈತನಕ ಒಟ್ಟು 6,22,418 ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಸ್ಟಾಟಿಕ್ ಡಿಜಿಟಲ್ ಮೀಟರ್ ಗೆ ಬದಲಾಯಿಸಲಾಗಿದೆ. ಹತ್ತು ವರ್ಷಗಳ ಹಿಂದೆ ಅಳವಡಿಸಿರುವ ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್ಎಮ್ಎಸ್ ಸ್ಟ್ಯಾಟಿಕ್ (Device Language Message Specification – DLMS) ಡಿಜಿಟಲ್ ಮಾಪನಗಳಿಗೆ ಬದಲಾಯಿಸುವ ಕಾರ್ಯ ಇದೇ ಜುಲೈ ತಿಂಗಳಲ್ಲಿ ಆರಂಭಗೊಂಡಿತ್ತು. ಅಕ್ಟೋಬರ್ 17ರ ತನಕ ನಗರದಲ್ಲಿ 2,85,941 ಹೊಸ ಡಿಜಿಟಲ್ ಮೀಟರ್ ಗಳನ್ನು (Digitalization) ಹಳೆಯ ಮೀಟರ್ ತೆಗೆದು ಈಗಾಗಲೇ ಬದಲಾಯಿಸಲಾಗಿದೆ. ಅದಾಗಿ 50 ದಿನಗಳಲ್ಲಿ 3,36,477 ಡಿಎಲ್ ಎಮ್ಎಸ್ ಡಿಜಿಟಲ್ ಮೀಟರ್ ಗಳನ್ನು (Meter Reading) ಬೆಸ್ಕಾಂ (BESCOM) ತನ್ನ ಗ್ರಾಹಕರ ಕಟ್ಟಡಗಳಿಗೆ ಅಳವಡಿಸಿದೆ.

ಯಾವ್ಯಾವ ವೃತ್ತಗಳಲ್ಲಿ ಎಷ್ಟೆಷ್ಟು ಮೀಟರ್ ಬದಲಾಯಿಸಲಾಗಿದೆ?

ಬೆಂಗಳೂರು ಮೆಟ್ರೋಪಾಲಿಟನ್‌ ಪ್ರದೇಶ ವಲಯದಲ್ಲಿ ಬರುವ ಬೆಸ್ಕಾಂನ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವೃತ್ತಗಳಲ್ಲಿ ಡಿಜಿಟಲ್‌ ಮೀಟರ್‌ ಅಳವಡಿಸಲಾಗುತ್ತಿದೆ. ಈ ವರ್ಷದ ಡಿಸೆಂಬರ್ 6ರ ವೇಳೆಗೆ ಉತ್ತರ ವೃತ್ತದಲ್ಲಿ – 1,78,722 ಕಟ್ಟಡಗಳಿಗೆ, ಪಶ್ಚಿಮ ವೃತ್ತದಲ್ಲಿ -1,73,085, ದಕ್ಷಿಣ ವೃತ್ತ- 87,408 ಮತ್ತು ಪೂರ್ವ ವೃತ್ತದ ವ್ಯಾಪ್ತಿಯಲ್ಲಿನ 1,83,203 ಸೇರಿ ಒಟ್ಟು 6,22,418 ಡಿಎಲ್‌ಎಮ್‌ ಎಸ್‌ ಸ್ಟ್ಯಾಟಿಕ್‌ ಸಿಂಗಲ್‌ ಫೇಸ್‌ ಮೀಟರ್‌ ಗಳನ್ನು ಅಳವಡಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಸ್ಟ್ಯಾಟಿಕ್ ಮೀಟರ್ ನಿಂದ ಗ್ರಾಹಕರಿಗೇನು ಉಪಯೋಗ?

ತಾವು ಬಳಸಿರುವ ವಿದ್ಯುತ್‌ ಪ್ರಮಾಣದ ಕುರಿತು ಗ್ರಾಹಕರಿಗೆ ನಿಖರ ಮಾಹಿತಿ ಸಿಗಲಿದೆ. ಜೊತೆಗೆ ತಾವು 2 ವರ್ಷದ ಹಿಂದಿನ ವರೆಗೆ ಬಳಸಿರುವ ವಿದ್ಯುತ್‌ ಬಳಕೆಯ ವಿವರಗಳನ್ನೂ ಡಿಜಿಟಲ್‌ ಸ್ಟ್ಯಾಟಿಕ್‌ ಮೀಟರ್‌ ಸಹಾಯದಿಂದ ಗ್ರಾಹಕರು ಉಪ ವಿಭಾಗ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. ಹೀಗೆ ಪಡೆದ ಮಾಹಿತಿಯನ್ನು ಬೆಸ್ಕಾಂ ಕಚೆರಿಯಿಂದ ಪಡೆದು ಅದನ್ನು ವಿದ್ಯುತ್ ಬಿಲ್ ಜೊತೆ ತುಲನೆ ಮಾಡಿ, ತಾವು ಈಗ ಬಳಸಿರುವ ವಿದ್ಯುತ್ ಪ್ರಮಾಣ ಸರಿಯಾಗಿದೆಯೇ ಎಂದು ತಿಳಿಯಬಹುದಾಗಿದೆ. ಮ್ಯಾಕಾನಿಕಲ್‌ ಮೀಟರ್‌ ಕೆಲವೊಮ್ಮೆ ತಾಂತ್ರಿಕ ದೋಷಕ್ಕೀಡಾಗಿ ವಿದ್ಯುತ್‌ ಬಳಕೆ ಪ್ರಮಾಣದ ಮಾಹಿತಿ ಸಿಗುತ್ತಿರಲಿಲ್ಲ. ಇದೀಗ ನಿಖರ ಮಾಹಿತಿ ಬೆಸ್ಕಾಂ ಗೆ ದೊರೆಯಲಿದೆ.

  1. ಹೊಸ ಡಿಜಿಟಲ್ ಮೀಟರ್ ಬದಲಾವಣೆ ಸಂಪೂರ್ಣ ಉಚಿತ : 2024ರ ವೇಳೆಗೆ ಎಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಗ್ರಾಹಕರು ಡಿಜಿಟಲ್‌ ಮೀಟರ್‌ ಗೆ ಹಣ ಪಾವತಿಸಬೇಕಾಗಿಲ್ಲ. ಏಜೆನ್ಸಿ ಕಡೆಯಿಂದ ಡಿಜಿಟಲ್‌ ಮೀಟರ್‌ ಇನ್‌ ಸ್ಟಾಲ್‌ ಮಾಡುವ ಸಂದರ್ಭದಲ್ಲಿ ಹಣಕ್ಕೆ ಬೇಡಿಕೆ ಇಟ್ಟರೆ ಬೆಸ್ಕಾಂ ಸಹಾಯವಾಣಿಗೆ (1912) ದೂರು ನೀಡಲು ಕೋರಲಾಗಿದೆ. ಅಲ್ಲದೆ ಉಪ ವಿಭಾಗ ಕಚೇರಿಗೆ ದೂರು ನೀಡಲು ವಿನಂತಿಸಲಾಗಿದೆ ಎನ್ನುತ್ತಾರೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಂತೇಶ ಬೀಳಗಿ.

ಮೀಟರ್ ಬದಲಾಯಿಸುವ ಕಾರ್ಯದಲ್ಲಿ ವಿಳಂಬ?

ಮೀಟರ್‌ ಅಳವಡಿಕೆ ಕಾರ್ಯವನ್ನು ರಾಜೇಶ್ವರಿ ಇಲೆಕ್ಟ್ರಿಕಲ್ಸ್‌ ಮತ್ತು ವಿ.ಆರ್. ಪಾಟೀಲ್‌ ಎಲೆಕ್ಟ್ರಿಕಲ್ಸ್‌ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಇದೀಗ ಸಿಂಗಲ್‌ ಫೇಸ್‌ ಡಿಜಿಟಲ್‌ ಮೀಟರ್‌ ಅಳವಡಿಸಲಾಗುತ್ತಿದ್ದು, 3 ಫೇಸ್‌ ಮಿಟರ್‌ ಅಳವಡಿಕೆ ಕಾರ್ಯವನ್ನು ಬೆಸ್ಕಾಂ ಇನ್ನಷ್ಟೆ ಕೈಗೆತ್ತಿಕೊಳ್ಳಲಿದೆ. ಡಿಜಿಟಲ್‌ ಮೀಟರ್‌ ಅಳವಡಿಕೆ ಕಾರ್ಯದ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದ್ದು, ಎರಡೂ ಕಂಪನಿಗಳಿಗೆ ದಿನಕ್ಕೆ ಸರಾಸರಿ 12000 ಸಿಂಗಲ್‌ ಫೇಸ್‌ ಮೀಟರ್‌ ಗಳನ್ನು ಅಳವಡಿಸಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ ಬೀಳಗಿ ಸೂಚನೆ ನೀಡಿದ್ದಾರೆ. ಆದರೆ ಡಿ.6ರ ದತ್ತಾಂಶವನ್ನು ಪರಿಶೀಲಿಸಿದಾಗ ಈ ಎರಡು ಸಂಸ್ಥೆಗಳು 6,491 ಮೀಟರ್ ಗಳನ್ನಷ್ಟೇ ಆ ದಿನ ಬದಲಾಯಿಸಿರುವುದು ಕಂಡು ಬಂದಿದೆ.

ಬೆಂಗಳೂರಿನಲ್ಲಿವೆ 17.68 ಲಕ್ಷ ವಿದ್ಯುತ್ ಮೀಟರ್ ಗಳು:

ಬೆಂಗಳೂರಿನ ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 17,68,000 (17.68 ಲಕ್ಷ) ಎಲೆಕ್ಟ್ರೊ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಡಿಜಿಟಲ್ ಮೀಟರ್ ಗೆ ಬದಲಾವಣೆ ಮಾಡುವ ಯೋಜನೆಗೆ ಒಟ್ಟು 116.69 ಕೋಟಿ ರೂ. ಹಣವನ್ನು ಬೆಸ್ಕಾಂ ವೆಚ್ಚ ಮಾಡುತ್ತಿದೆ. ಬೆಸ್ಕಾಂನ ಬೆಂಗಳೂರು ಗ್ರಾಮಾಂತರ ಪ್ರದೇಶ ಮತ್ತು ಚಿತ್ರದುರ್ಗ ಪ್ರದೇಶ ವಲಯಗಳಲ್ಲಿ ಸುಮಾರು 9 ಲಕ್ಷ ಡಿಜಿಟಲ್‌ ಮೀಟರ್‌ ಅಳವಡಿಕೆಗೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಹಕರಿಗೆ ತಾವು ಬಳಸುವ ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ತಿಳಿದುಕೊಳ್ಳಲು ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಡಿಜಿಟಲ್ ಮಾಪನಗಳಿಂದ ಸಾಧ್ಯವಾಗಲಿದೆ.

ಪ್ರತಿ ಸಿಂಗಲ್ ಫೇಸ್ – ತ್ರಿಫೇಸ್ ಮೀಟರ್ ಬೆಲೆ ಎಷ್ಟು?

ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಮೀಟರ್ ಗ್ರಾಹಕ ಸ್ನೇಹಿಯಾಗಿದ್ದು ಸಿಂಗಲ್ ಫೇಸ್ ಅಥವಾ 3 ಫೇಸ್ ಮೀಟರ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ವಿದ್ಯುತ್ ವೊಲ್ಟೇಜ್ ಮತ್ತು ಬಳಕೆ ಕುರಿತು ಮಾಹಿತಿ ಪಡೆಯಬಹುದಾಗಿದೆ. ಈ ಡಿಜಿಟಲ್ ಮೀಟರ್‌ ಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದ್ದು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಸಿಂಗಲ್ ಫೇಸ್ ಡಿಜಿಟಲ್ ಮೀಟರ್ ಗೆ ತೆರಿಗೆ, ವೈರಿಂಗ್‌ ಮತ್ತು ಅಳವಡಿಕೆ ವೆಚ್ಚ ಸೇರಿ 1,497 ರಿಂದ 1,507 ರೂಪಾಯಿ ಮತ್ತು 3 ಫೇಸ್ ಮೀಟರ್ ಗೆ 3,612 ರಿಂದ 3,652 ರೂಪಾಯಿಗಳಾಗಲಿದ್ದು ಈ ವೆಚ್ಚವನ್ನು ಬೆಸ್ಕಾಂ ಭರಿಸುತ್ತದೆ ಎಂದು ಬೆಸ್ಕಾಂ ತಿಳಿಸಿದೆ. (Source: bengaluruwire.com)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​