ಬೆಂಗಳೂರು: ಮನುಷ್ಯತ್ವ ಇದ್ದವರಿಗೆ ಭಾರತ್ ಜೋಡೋ ಯಾತ್ರೆ ಮನ ಮುಟ್ಟುತ್ತದೆ ಎಂದು ಗೌರಿ ಲಂಕೇಶ್ ತಂಗಿ ಕವಿತಾ ಲಂಕೇಶ್ ಟಿವಿ 9ಗೆ ಹೇಳಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಂಚೆ ಭುವನಹಳ್ಳಿಯಲ್ಲಿ ಭಾರತ್ ಜೋಡೋ ಯಾತ್ರೆ ಪ್ರಯುಕ್ತ ರಾಹುಲ್ ಜೊತೆ ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್, ತಂಗಿ ಕವಿತಾ ಲಂಕೇಶ್ ಹೆಜ್ಜೆಹಾಕಿದರು. ಪಠ್ಯಪುಸ್ತಕಗಳಲ್ಲಿ ಚರಿತ್ರೆ ಬದಲಾವಣೆ ಮಾಡುವುದು ಒಳ್ಳೆಯದಲ್ಲ. ಇತಿಹಾಸವನ್ನೇ ತೆಗೆಯೋದು ಬಹಳ ಡೇಂಜರ್. ಸಮಾಜವನ್ನು ಅರ್ಥ ಮಾಡಿಕೊಂಡು ಬದುಕಲು ಚರಿತ್ರೆ ಬದಲಾಯಿಸಬಾರದು. ಓಟು ಬದಲಾವಣೆ ಆಗುತ್ತದೆ ಇಲ್ಲವೋ ನನಗೆ ಗೊತ್ತಿಲ್ಲ. ನಮ್ಮ ದೇಶದಲ್ಲಿ ತುಂಬಾ ಒಡಕಾಗುತ್ತಿದೆ. ವಿಭಜನೆಯ ರಾಜಕೀಯ ಎಲ್ಲ ಕಡೆ ನಡೆಯುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ದ್ವೇಷ ಬರುವಂತೆ ಮಾಡುತ್ತಿದೆ. ಶಿವಮೊಗ್ಗ ಪ್ರಕರಣ, ಹಿಜಾಬ್ ವಿಚಾರ ಎಲ್ಲವೂ ದ್ವೇಷ ಬೆಳೆಯುವಂತೆ ಮಾಡುತ್ತಿದೆ. ಮನುಷ್ಯತ್ವ ಕಳೆದು ಹೋಗುತ್ತಿದೆ ಅದು ವಾಪಸ್ ಬರಬೇಕು ಎಂದರು.
ಗೌರಿ ಲಂಕೇಶ್ ಕುರಿತಾಗಿ ಕಾಂಗ್ರೆಸ್ ಘಟಕದಿಂದ ಟ್ವೀಟ್
ಗೌರಿ ಲಂಕೇಶ್ ತಾಯಿ, ತಂಗಿ ಜೊತೆ ರಾಹುಲ್ ನಡಿಗೆ ವಿಚಾರವಾಗಿ ರಾಹುಲ್ ಗಾಂಧಿ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಸತ್ಯವನ್ನು ದ್ವೇಷ ಹಾಗೂ ಹಿಂಸೆ ಎಂದಿಗೂ ಸೋಲಿಸಲಾಗದು ಎಂಬುದನ್ನ ಜಗತ್ತಿಗೆ ಸಾರಿದೆ. ಭಾರತ್ ಜೋಡೋ ಯಾತ್ರೆ ಭರವಸೆ, ಅಹಿಂಸೆ, ಸತ್ಯದ ಪ್ರತೀಕ. ಗೌರಿ ಲಂಕೇಶ್ ನಮ್ಮಿಂದ ಕಿತ್ತುಕೊಂಡ ಸಿದ್ಧಾಂತ ಬಗ್ಗೆ ನಮಗೆ ಗೊತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕದಿಂದ ಟ್ವಿಟ್ ಮಾಡಿದೆ.
Gauri stood for Truth
Gauri stood for Courage
Gauri stood for FreedomI stand for Gauri Lankesh and countless others like her, who represent the true spirit of India.
Bharat Jodo Yatra is their voice.
It can never be silenced. pic.twitter.com/TIpMIu36nY— Rahul Gandhi (@RahulGandhi) October 7, 2022
ಗೌರಿ ಲಂಕೇಶ್ರನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಗೌರಿ ಲಂಕೇಶ್ರನ್ನು ನೆನಪಿಸಿಕೊಂಡರು. ಅವರೂ ಕೂಡ ತಂದೆ ಅಜ್ಜಿಯನ್ನು ಕಳೆದುಕೊಂಡವರು. ಕೇಸ್ ಎಲ್ಲಿಗೆ ಬಂತು ಅಂತ ರಾಹುಲ್ ಮಾಹಿತಿ ಪಡೆದುಕೊಂಡರು. ಕಿಲ್ಲರ್ ಯಾಕಂತೆ ಸಾಯ್ಸಿದ್ದು ಅಂತ ಕೇಳಿದರು ಎಂದು ಕವಿತಾ ಲಂಕೇಶ್ ಹೇಳಿದರು. ಯಾತ್ರೆಯಲ್ಲಿ ವಿಧಾನಪರಿಷತ್ನ ಮಾಜಿ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಭಾಗಿಯಾಗಿದ್ದರು.
ನಾಗಮಂಗಲ ತಲುಪಿದ ‘ಭಾರತ್ ಜೋಡೋ’ ಪಾದಯಾತ್ರೆ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೆ.ಮಲ್ಲೇನಹಳ್ಳಿಗೆ ಭಾರತ್ ಜೋಡೋ ಯಾತ್ರೆ ತಲುಪಿದೆ. ರಾಹುಲ್ ಜೊತೆ ಕೆ.ಸಿ.ವೇಣುಗೋಪಾಲ್, ಚಲುವನಾರಾಯಣಸ್ವಾಮಿ, ಧ್ರುವನಾರಾಯಣ ಸೇರಿ ಹಲವರು ಹೆಜ್ಜೆ ಹಾಕಿದ್ದಾರೆ. ಇಂದು (ಶುಕ್ರವಾರ) ಕೆ.ಮಲ್ಲೇನಹಳ್ಳಿಯಿಂದ ಪಾದಯಾತ್ರೆ ಶುರುವಾಗಿದೆ. ನಾಗಮಂಗಲದ ವಕೀಲರು ರಾಹುಲ್ ಗಾಂಧಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ. ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ ಫೋಟೊ, ಟಿಪ್ಪು ಸುಲ್ತಾನ್ ಪುಸ್ತಕ, ಕುವೆಂಪು ಪುಸ್ತಕವನ್ನು ಇವರು ರಾಹುಲ್ಗೆ ಉಡುಗೊರೆಯಾಗಿ ನೀಡಲಿದ್ದಾರೆ.
ನಾಗಮಂಗಲ ತಾಲೂಕಲ್ಲಿ ಫ್ಲೆಕ್ಸ್ ಬ್ಯಾನರ್ ಜಟಾಪಟಿ
ಭಾರತ್ ಜೋಡೋ ಯಾತ್ರೆಯ ಕಟೌಟ್ ಅಳವಡಿಕೆ ಬಗ್ಗೆ ಚೆಲುವರಾಯಸ್ವಾಮಿ ಹಾಗೂ ಎಂ ಕೃಷ್ಣಪ್ಪ ನಡುವೆ ಕಿರಿಕ್ ಆಗಿದೆ. ನಿನ್ನೆ ನಾಗಮಂಗಲ ಕ್ಷೇತ್ರದಲ್ಲಿ ರಾಹುಲ್ ಪಾದಯಾತ್ರೆಗೆ ವಿಜಯನಗರ ಕೃಷ್ಣಪ್ಪ ಹಾಗೂ ಪ್ರಿಯಾ ಕೃಷ್ಣ ಜನರನ್ನು ಕರೆತಂದಿದ್ದರು. ಹೀಗಾಗಿ ಪಾದಯಾತ್ರೆ ಮಾರ್ಗದಲ್ಲಿ ಎಂ ಕೃಷ್ಣಪ್ಪ, ಪ್ರಿಯಾ ಕೃಷ್ಣ ಕಟೌಟ್ ಬಳಸಲಾಗಿತ್ತು. ಭಾರೀ ಗಾತ್ರದ ಕಟೌಟ್ ನಲ್ಲಿ ಚೆಲುವರಾಯಸ್ವಾಮಿ ಫೋಟೊ ಕೈಬಿಟ್ಟಿದ್ದಕ್ಕೆ ಚೆಲುವರಾಯಸ್ವಾಮಿ ಬೆಂಬಲಿಗರ ಜಗಳ ಮಾಡಿದ್ದಾರೆ. ತಮ್ಮ ಫೋಟೋ ಅಳವಡಿಸದಿರುವುದಕ್ಕೆ ಚೆಲುವರಾಯಸ್ವಾಮಿ ಕೂಡಾ ಸಿಟ್ಟುಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:24 pm, Fri, 7 October 22