ಬೆಂಗಳೂರು: ಸ್ವಾಮೀಜಿಯೋರ್ವರ ಜೊತೆ ಬರ್ತಡೇ ಕೇಕ್ ತಿನ್ನುತಿದ್ದ ಮಹಿಳೆಯ ಫೋಟೋ ಪೋಸ್ಟ್ ಆಗುತಿದ್ದಂತೆ ಭಾರಿ ಚರ್ಚೆ ಶುರುವಾಗಿದೆ. ಫೋಟೋ ಪೋಸ್ಟ್ ಆದ ಮಹಿಳೆ ಹಾಗೂ ಪೋಸ್ಟ್ ಮಾಡಿದ ವ್ಯಕ್ತಿಯ ನಡುವೆ ಭಾರಿ ಗಲಾಟೆ ನಡೆದಿದ್ದು ಅರಮನೆ ಮೈದಾನದಲ್ಲಿ ಹೈಡ್ರಾಮಾ ಸೃಷ್ಟಿಯಾದ ಘಟನೆ ನಿನ್ನೆ ನಡೆದಿದೆ.
ಭೋವಿ ಸಮಾಜ ಸೇವಾ ಸಂಘದ ರಾಷ್ಟ್ರಾದ್ಯಕ್ಷನ ಪೊಸ್ಟ್ ತಂದ ಕಿರಿಕ್
ನಗರದ ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳೆಯರು ಹಾಗೂ ವ್ಯಕ್ತಿಯ ನಡುವೆ ಭಾರಿ ಗಲಾಟೆಗಳು, ಹಲ್ಲೆ ನಡೆದಿದೆ. ಮೊದಲಿಗೆ ಆವರಣದಲ್ಲಿ ನಿಂತ ವ್ಯಕ್ತಿಗೆ ಒಂದಿಷ್ಟು ಮಹಿಳೆಯರು ಪ್ರಶ್ನೆಗಳನ್ನ ಮಾಡಿದ್ದಾರೆ. ಬಳಿಕ ಎರಡು ಕಡೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ನಂತರ ಕೂಗಾಟದ ನಡುವೆ ಹಲ್ಲೆ ಸಹ ನಡೆದಿದೆ. ಇಷ್ಟೆಲ್ಲ ಆಗುತ್ತಿದ್ದಂತೆ ಸ್ಥಳಕ್ಕೆ ಬಂದ ಸದಾಶಿವನಗರ ಪೊಲೀಸರು ಎರಡು ಕಡೆಯವರನ್ನು ಸದಾಶಿವನಗರ ಠಾಣೆಗೆ ಕರೆಸಿದ್ದಾರೆ.ಬಳಿಕ ವಿಚಾರ ಕೇಳಲಾಗಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಪ್ರತ್ಯಾರೋಪ ಮಾಡಿದ್ದಾರೆ.
ಭೋವಿ ಸಮಾಜ ಸೇವಾ ಸಂಘದ ರಾಷ್ಟ್ರಾಧ್ಯಕ್ಷ ಹಾಗೂ ಎಸ್ ಸಿ ಮೊರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿರು ವೆಂಕಟೇಶ್ ಮೌರ್ಯ ಎಂಬುವವರು ಹಾಕಿದ ಒಂದು ಫೋಸ್ಟ್ ಗಲಾಟೆಗೆ ಕಾರಣವಾಗಿದೆ. ಮೊನ್ನೆ ಚಿತ್ರದುರ್ಗದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿಯವರು ಬೊವಿ ಸಮಾಜದ ಮಹಿಳಾ ಮುಖಂಡೆ ತುಳಸಿ ರಮೇಶ್ ರವರಿಗೆ ಕೇಕ್ ತಿನ್ನಿಸುವ ಫೋಟೋ ಮೂಲಕ ಸ್ವಾಮಿಜಿಗಳೇ ಮಹಿಳೆಯರಿಗೆ ಕೇಕ್ ತಿನ್ನಿಸೊದು ಯಾವ ಸಂಪ್ರದಾಯ ಎಂದು ಪ್ರಶ್ನಿಸಿ ಪೋಸ್ಟ್ ಹಾಕಿದ್ದರು. ಆದ್ರೆ ಈ ಪೋಸ್ಟ್ ವಿರುದ್ಧ ಆಕ್ರೋಶ ಹೊರ ಹಾಕಿದ ತುಳಸಿ ರಮೇಶ್, ಪೋಸ್ಟನ್ನು ನಮ್ಮ ಸಮುದಾಯದ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದಾರೆ. ನನ್ನ ಮರ್ಯಾದೆ ತೆಗೆದಿದ್ದಾರೆ. ಇದನ್ನು ಕೇಳೋಕೆ ಹೊಗಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಹೆಣ್ಣು ಮಕ್ಕಳು ಅಂತ ನೊಡದೇ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಜೊತೆಗೆ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ದೀಪ ಶ್ರೀನಿವಾಸ್ ಸಹ ಮಾತನಾಡಿ, ನಮ್ಮ ಬೋವಿ ಸಮುದಾಯದ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿ ಈ ರೀತಿ ಮಾಡುತಿದ್ದಾರೆ. ಇವರ ಉದ್ದೇಶ ಏನು ಅನ್ನೊದು ಗೊತ್ತಾಗುತಿಲ್ಲ, ಅವರು ಬೋವಿ ಸಮುದಾಯಕ್ಕೆ ಕಳಂಕ ಅಂತ ಆರೋಪಿಸಿದ್ದಾರೆ.
ಇದನ್ನೂ ಓದಿ: 45 Dysp, 8 ಸಿವಿಲ್ ಪೊಲೀಸ್ ಇನ್ಸ್ಪೆಕ್ಟರ್ ವರ್ಗ: ಬೆಂಗಳೂರು ನಗರಕ್ಕೆ ಡಿಸಿ ಆಗಿ ಕೆ.ಎ.ದಯಾನಂದ ನೇಮಕ
ಆದ್ರೆ ಹಲ್ಲೆಗೆ ಬೇರೆ ಕಾರಣ ಇರುವುದಾಗಿಆರೋಪಿಸಿರೋ ವೆಂಕಟೇಶ್ ಮೌರ್ಯಪರ ವಕೀಲರು ಭೋವಿ ಸಮಾಜ ಸೇವಾ ಸಂಘದ ಕೆಲವರಿಂದ ಷಡ್ಯಂತರ ನಡೆದಿದೆ ಅಂತ ಆರೋಪಿಸಿದ್ದಾರೆ. ಯಾಕಂದ್ರೆ ಭೋವಿ ಸಂಘ ರಾಷ್ಟ್ರೀಯ ಅಧ್ಯಕ್ಷರಾಗಿ ವೆಂಕಟೇಶ್ ಮೌರ್ಯ ಬಂದ ಬಳಿಕ 150 ಕೋಟಿಯಷ್ಟು ಅವ್ಯವಹಾರ ಬಯಲಿಗೆಳೆದಿದ್ದರಂತೆ. ಈ ಹಿನ್ನಲೆ ಇವರ ವಿರುದ್ದವೇ ಕೆಲವರು ತಿರುಗಿ ಬಿದಿದ್ದರಂತೆ. ಬಳಿಕ ಮೊನ್ನೆ ಹಾಕಿದ ಫೋಸ್ಟನ್ನು ತಪ್ಪು ಎಂದಾಗ ಅವರು ಅದನ್ನು ಡಿಲಿಟ್ ಮಾಡಿದ್ದಾರೆ. ಆದ್ರೆ ಈ ಬಳಿಕ ವೆಂಕಟೇಶ್ ಮೌರ್ಯರವರ ಫೋಟೊಗಳನ್ನು ಎಡಿಟ್ ಮಾಡಿ ಇಂದು ಮಹಿಳೆಯರಿಂದ ಹಲ್ಲೆ ಮಾಡೊದಾಗಿ ವೈರಲ್ ಮಾಡಿದ್ದರಂತೆ. ಅದರ ಮುಂದುವರೆದ ಭಾಗವಾಗಿ ಈ ರೀತಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಸದ್ಯ ಎರಡು ಕಡೆಗಳಿಂದ ಆರೋಪ ಪ್ರತ್ಯಾರೋಪ ಕೇಳಿ ಬಂದಿದ್ದು, ದೂರು ಪ್ರತಿದೂರುಗಳು ದಾಖಲಾಗಿವೆ. ಇನ್ನು ಸಂಘದ ವಿಚಾರದ ಷಡ್ಯಂತರದ ಆರೋಪವನ್ನು ತುಳಿಸಿರವರು ತಳ್ಳಿಹಾಕಿದ್ದಾರೆ. ಸದ್ಯ ಎರಡು ಆರೋಪಗಳ ಆಲಿಸಿರೋ ಸದಾಶಿವನಗರ ಪೊಲೀಸರು ತನಿಖೆ ನಡೆಸಲಿದ್ದು, ಆ ಬಳಿಕ ಸತ್ಯ ಅಸತ್ಯತೆ ತಿಳಿದು ಬರಬೇಕಿದೆ.
ವರದಿ: ಜಗದೀಶ್, ಟಿವಿ9 ಬೆಂಗಳೂರು
Published On - 7:27 am, Sun, 18 December 22