45 Dysp, 8 ಸಿವಿಲ್​ ಪೊಲೀಸ್​ ಇನ್ಸ್​ಪೆಕ್ಟರ್​ ವರ್ಗ: ಬೆಂಗಳೂರು ನಗರಕ್ಕೆ ಡಿಸಿ ಆಗಿ ಕೆ.ಎ.ದಯಾನಂದ ನೇಮಕ

ರಾಜ್ಯ ಸರ್ಕಾರ 45 ಜನ ಸಿವಿಲ್​​ ಡಿವೈಎಸ್​​ಪಿಗಳು, 8 ಜನ ಸಿವಿಲ್​ ಪೊಲೀಸ್​ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿದೆ.

45 Dysp, 8 ಸಿವಿಲ್​ ಪೊಲೀಸ್​ ಇನ್ಸ್​ಪೆಕ್ಟರ್​ ವರ್ಗ: ಬೆಂಗಳೂರು ನಗರಕ್ಕೆ ಡಿಸಿ ಆಗಿ ಕೆ.ಎ.ದಯಾನಂದ ನೇಮಕ
ಕರ್ನಾಟಕ ರಾಜ್ಯ ಪೊಲೀಸ್​
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 17, 2022 | 11:09 PM

ಬೆಂಗಳೂರು: ರಾಜ್ಯ ಸರ್ಕಾರ (Karnataka Government) ಕಳೆದ ಒಂದೆರಡು ತಿಂಗಳಿನಿಂದ ಪೊಲೀಸ್​ ಇಲಾಖೆಯಲ್ಲಿ ಮೇಜರ್​ ಸರ್ಜರಿ ಮಾಡುತ್ತಿದೆ. ಈ ಹಿಂದೆ ನೂರಾರು ಪೊಲೀಸ್​ ಇನ್ಸ್​ಪೆಟಕ್ಟರ್​ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದೀಗ 45 ಜನ ಸಿವಿಲ್​​ ಡಿವೈಎಸ್​​ಪಿಗಳು (DYSP), 8 ಜನ ಸಿವಿಲ್​ ಪೊಲೀಸ್​ ಇನ್ಸ್​ಪೆಕ್ಟರ್​ಗಳನ್ನು (Police Inspector) ವರ್ಗಾವಣೆಗೊಳಿಸಿ ಡಿಜಿಪಿ ಮತ್ತು ಐಜಿಪಿ ಆದೇಶ ಹೊರಡಿಸಿದ್ದಾರೆ.

2ನೇ ಬಾರಿ ಬೆಂಗಳೂರು ನಗರ ಡಿಸಿ ಆಗಿ ಕೆ.ಎ.ದಯಾನಂದ ನೇಮಕ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ಕೆ.ಎ.ದಯಾನಂದ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಸರ್ಕಾರ ವರ್ಗಾವಣೆ ಮಾಡಿದೆ. ಬೆಂಗಳೂರು ನಗರ ಡಿಸಿ ಆಗಿದ್ದ ಶ್ರೀನಿವಾಸ್ ಅಮಾನತುಗೊಂಡಿದ್ದಾರೆ. ಇದರಿಂದ ಅವರ ಬಳಿಕ ಸರ್ಕಾರ ಹೊಸಬರನ್ನು ನೇಮಕ ಮಾಡಿರಲಿಲ್ಲ. ಹಿಗಾಗಿ ಸರ್ಕಾರ ಕೆ.ಎ.ದಯಾನಂದ ಅವರನ್ನು ನೇಮಕ ಮಾಡಿದೆ.

ಕೆ.ಎ.ದಯಾನಂದ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ 2ನೇ ಸಲ ನೇಮಕವಾಗಿದ್ದಾರೆ. ವಿಪಕ್ಷನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಕೂಡ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:09 pm, Sat, 17 December 22