ನಿರ್ಮಾಣ ಹಂತದ ಕಟ್ಟಡ, ತೋಟ, ಮಾರುಕಟ್ಟೆಗಳಲ್ಲಿ ಕಂಡು ಬರುವ ಈ ಮಹಿಳೆ ಯಾರು? ಇವರ ಫೋಟೋ ಹಾಕುವುದೇಕೆ?

| Updated By: ಆಯೇಷಾ ಬಾನು

Updated on: May 17, 2024 | 8:50 AM

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಈ ಯುವತಿಯದ್ದೇ ಸದ್ದು. ಯಾವ ಸೆಲೆಬ್ರಿಟಿಗೂ ಕಮ್ಮಿ ಇಲ್ಲ ಈ ಯುವತಿ. ರಸ್ತೆ, ತೋಟ, ಮಾರ್ಕೆಟ್‌, ತರಕಾರಿ ಅಂಗಡಿ, ನಿರ್ಮಾಣ ಹಂತದ ಕಟ್ಟಡ, ಎಲ್ಲೆಲ್ಲೂ ಆಕೆಯದ್ದೇ ಫೋಟೋ. ದೊಡ್ಡ ಕಣ್ಣಿನ ದಪ್ಪ ಮಹಿಳೆಯ ಫೋಟೋ ಈಗ ಯಾವ ಸೆಲೆಬ್ರಿಟಿಯ ಫೋಟೋಗೂ ಕಡಿಮೆಯಿಲ್ಲದಂತೆ ವೈರಲ್ ಆಗ್ತಿದೆ. ಈ ಮಹಿಳೆ ಫೋಟೋ ನೋಡಿದ್ರೆ ನೀವು ಹುಬ್ಬೇರಿಸುವುದು ಪಕ್ಕಾ. ಒಂದು ಕ್ಷಣ ಶಾಕ್ ಆಗೋದು ನಿಶ್ಚಿತಾ.

ನಿರ್ಮಾಣ ಹಂತದ ಕಟ್ಟಡ, ತೋಟ, ಮಾರುಕಟ್ಟೆಗಳಲ್ಲಿ ಕಂಡು ಬರುವ ಈ ಮಹಿಳೆ ಯಾರು? ಇವರ ಫೋಟೋ ಹಾಕುವುದೇಕೆ?
ನಿರ್ಮಾಣ ಹಂತದ ಕಟ್ಟಡ, ತೋಟ, ಮಾರುಕಟ್ಟೆಗಳಲ್ಲಿ ಕಂಡು ಬರುವ ಈ ಮಹಿಳೆ ಯಾರು?
Follow us on

ಬೆಂಗಳೂರು, ಮೇ.17: ಕಟ್ಟಡಗಳ ಮುಂದೆ, ರಸ್ತೆ, ತೋಟ, ಮಾರ್ಕೆಟ್​ಗಳ ಮುಂದೆ ಹಾಕುತ್ತಿದ್ದ ದೊಡ್ಡ ಕಣ್ಣಿನ ದಪ್ಪ ಮಹಿಳೆಯ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಸಾಮಾನ್ಯವಾಗಿ ಕುಣಿಗಲ್‌ ರಸ್ತೆ, ಮಾಗಡಿ ರಸ್ತೆ ಅಥವಾ ಬೆಂಗಳೂರಿನ ಸುತ್ತಮುತ್ತ ಓಡಾಡುವವರು ದೊಡ್ಡ ಕಣ್ಣಿನ ದಪ್ಪ ಮಹಿಳೆಯ ಫೋಟೋವನ್ನು ನೋಡಿರುತ್ತಾರೆ. ಆ ಫೋಟೋ ಈಗ ಬೆಂಗಳೂರಿನ ತರಕಾರಿ ಮಾರುಕಟ್ಟೆಗೂ ಲಗ್ಗೆಯಿಟ್ಟಿದೆ. ಅದಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿಯೂ ಟ್ರೆಂಡ್‌ ಆಗುತ್ತಿದೆ (Viral Photo). ಆದ್ರೆ ಈ ಪೋಟೋದಲ್ಲಿನ ದೊಡ್ಡ ಕಣ್ಣಿನ ಮಹಿಳೆ ಯಾರು ಎಂಬುಂದೆ ಯಾರಿಗೂ ಮಾಹಿತಿ ಇಲ್ಲ.

ಸದ್ಯ ಈ ಫೋಟೋ ಈಗ ಬೆಂಗಳೂರಿನ ತರಕಾರಿ ಮಾರುಕಟ್ಟೆಗೂ ಲಗ್ಗೆಯಿಟ್ಟಿದೆ. ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಬಳಿಯ ಮಾಗಡಿ ಗ್ರೀನ್ಸ್ ಎಂಬ ತರಕಾರಿ ಅಂಗಡಿಯಲ್ಲಿಯೂ ಹೊರಗಡೆ ಈ ಫೋಟೋ ಹಾಕಲಾಗಿದೆ. ಅದಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿಯೂ ಟ್ರೆಂಡ್‌ ಆಗುತ್ತಿದೆ.

ಸಾಮಾನ್ಯವಾಗಿ ಅಂಗಡಿಗಳಲ್ಲಿ, ನಿರ್ಮಾಣ ಹಂತದ ಕಟ್ಟಡಗಳಲ್ಲಿ ದೃಷ್ಟಿ ಗೊಂಬೆ ಇಡುವುದು ಕಾಮನ್. ಆದ್ರೆ ಇತ್ತಿಚ್ಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಈ ದೊಡ್ಡ ಕಣ್ಣಿನ ದಪ್ಪ ಮಹಿಳೆಯ ಫೋಟೋ ಹಾಕಲಾಗ್ತೀದೆ. ವಾಸ್ತು ತಜ್ಞರ ಸಲಹೆ ಅಂತಾ ಎಲ್ಲಡೆ ಈ ಪೋಟೋ ಹಾಕಲಾಗುತ್ತಿದೆ. ಟೊಮ್ಯಾಟೋ, ಪಪ್ಪಾಯಿ ಮತ್ತು ಕಲ್ಲಂಗಡಿಗಳಿಂದ ತುಂಬಿರುವ ಬಂಡಿಗಳ ನಡುವೆ ಟೊಮೆಟೋ ಬಂಡಿಯ ಬಳಿ ಸಡನ್‌ ಆಗಿ ನೋಡಿದರೆ ಎಂತವರಿಗೂ ಭಯವಾಗುವ ರೀತಿಯಲ್ಲಿ ಮಹಿಳೆಯ ಫೋಟೋವನ್ನು ಹಾಕಲಾಗಿದೆ. ಈ ಫೋಟೋವನ್ನು ಈಗ ದೃಷ್ಟಿ ಗೊಂಬೆಯಾಗಿ ಬಳಸಲಾಗುತ್ತಿದ್ದು ಸಕತ್ ಸದ್ದು ಮಾಡ್ತಿದೆ.

ಯಾರಾರ ಕಣ್ಣು ಹೇಗೆ ಇರುತ್ತೋ. ಅಂಗಡಿ ಮೇಲೆ ದೃಷ್ಟಿ ಬೀಳದಿರಲಿ ಎಂದು ನಾವು ಅಂಗಡಿಗೆ ದೊಡ್ಡ ಕಣ್ಣಿಗೆ ಮಹಿಳೆಯ ಫೋಟೋ ಹಾಖಿದ್ದೀವಿ. ಫೋಟೋ ನೋಡಿದಾಕ್ಷ ಜನರು ಒಂದು ಕ್ಷಣ ಶಾಕ್​ಗೆ ಒಳಗಾಗುತ್ತಾರೆ. ಯಾರು ಈ ಮಹಿಳೆ ಎಂಬ ಯೋಚನೆಗೆ ಜಾರ್ತಾರೆ. ಮನೆಗಳ ಮುಂದೆ ದೃಷ್ಟಿ ಗೊಂಬೆ ಇಡಲಾಗುತ್ತಿತ್ತು. ಅದೇ ರೀತಿ ಈಗ ನಾವು ಮಹಿಳೆಯ ಫೋಟೋ ಹಾಕ್ತಿದ್ದೀವಿ ಎಂದು ತರಕಾರಿ ಅಂಗಡಿಯ ಮಾಲೀಕ ಶ್ರೀನಿವಾಸ್ ತಿಳಿಸಿದರು.

ಇದನ್ನೂ ಓದಿ: ಸುರಕ್ಷತೆ ದೃಷ್ಟಿಯಿಂದ ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧಿಸಿದ ನೇಪಾಳ

ಒಂದು ದಂತ ಕಥೆ ಪ್ರಕಾರ, ಕೀರ್ತಿ ರಾಜ ಎಂಬ ಒಬ್ಬ ರಾಕ್ಷಸನಿದ್ದ. ಅವನು ಎಲ್ಲಾ ಹಳ್ಳಿಗಳಿಗೆ ನುಗ್ಗಿ ಸುಂದರವಾಗಿ ಕಾಣುವುದೆಲ್ಲವನ್ನೂ ನಾಶ ಮಾಡ್ತಿದ್ದ. ಸುಂದರವಾಗಿ ಕಾಣುವ ಮೂರ್ತಿಗಳಿಗೆ ಕಲ್ಲಿನಿಂದ ಹೊಡೆದು ಹಾಳು ಮಾಡುತ್ತಿದ್ದ. ಇಂತಹ ಮನಸ್ಥಿತಿ ಆತನಿಗಿತ್ತು. ಹೀಗಾಗಿ ಜನರು ಎಲ್ಲಾ ಕಡೆ ಆತನ ಮುಖವಾಡವನ್ನೇ ಹಾಕಲು ಶುರು ಮಾಡಿದರು. ಆಗ ತನ್ನದೇ ಆದ ಮುಖವಾಡವನ್ನು ನಾಶ ಮಾಡಲು ಕೀರ್ತಿ ರಾಜನಿಗೆ ಮನಸಾಗುವುದಿಲ್ಲ. ಅಲ್ಲಿಂದ ಮನೆ-ಮಠಗಳ ಮೇಲೆ ದೃಷ್ಟಿ ಗೊಂಬೆ ಹಾಕಲು ಶುರು ಮಾಡಿದರು. ಹಾಗೂ ಅನ್ಯದ ಕೆಟ್ಟ ದೃಷ್ಟಿ ಬೀಳದಿರಲು ಎಂದು ಈ ರೀತಿಯ ಭಯಾನಕ ಎನಿಸುವ ಮುಖವನ್ನು ಹಾಕಲಾಗುತ್ತೆ. ಸಂಸ್ಕೃತದಲ್ಲಿ ಅದನ್ನು ಕೀರ್ತಿ ಮುಖ ಎನ್ನುತ್ತಾರೆ. ಜನ ಮರಳೋ, ಜಾತ್ರೆ ಮರಳೋ ಎಂಬಂತೆ ಈ ತಾಯಿಯ ಫೋಟೋ ಎಲ್ಲೆಡೆ ಹಾಕಲಾಗುತ್ತಿದೆ ಎಂದು ವಾಸ್ತು ತಜ್ಞ ದಿನೇಶ್ ಗುರೂಜಿ ತಿಳಿಸಿದರು.

ಕೆಲಸದಲ್ಲಿ ಹೆಚ್ಚಿನ ಲಾಭ ತರಲು, ದುಷ್ಟ ಕಣ್ಣುಗಳನ್ನು ದೂರವಿಡಲು ಈ ಫೋಟೋವನ್ನು ಬಳಸಲಾಗುತ್ತದೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತೀದ್ರೆ. ಇನ್ನು ಈ ಫೋಟೋವನ್ನು ಈಗ ದೃಷ್ಟಿ ಗೊಂಬೆಯಾಗಿ ಬಳಸಲಾಗುತ್ತಿದೆ ಅಂತಿದ್ದಾರೆ ಸಿಟಿ ಜನರು.

ಒಟ್ಟಿನಲ್ಲಿ ಈ ಹಿಂದೆ ಕೆಟ್ಟ ದೃಷ್ಠಿ ನಿಯಂತ್ರಿಸಲು ಗೊಂಬೆಗಳನ್ನ ಎಲ್ಲಡೆ ಬಳಸಲಾಗುತಿತ್ತು. ಆದ್ರೀಗ ಎಲ್ಲಡೆ ಈ ದೊಡ್ಡ ಕಣ್ಣಿನ ಮಹಿಳೆಯ ಫೋಟೋ ವೈರಲ್‌ ಆಗುತ್ತಿದ್ದು, ಆ ಫೋಟೋದಲ್ಲಿರುವ ಮಹಿಳೆ ಯಾರೆಂಬ ಬಗ್ಗೆ ಕುತೂಹಲ ಹಾಗೆ ಉಳಿದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:44 am, Fri, 17 May 24