ಸುರಕ್ಷತೆ ದೃಷ್ಟಿಯಿಂದ ಎವರೆಸ್ಟ್, ಎಂಡಿಎಚ್ ಮಸಾಲೆಗಳ ಮಾರಾಟ ನಿಷೇಧಿಸಿದ ನೇಪಾಳ
ನೇಪಾಳವು ಸುರಕ್ಷತೆ ದೃಷ್ಟಿಯಿಂದ ಎವರೆಸ್ಟ್, ಎಂಡಿಎಚ್ ಮಸಾಲೆಗಳ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ. ಎವರೆಸ್ಟ್ ಮತ್ತು ಎಂಡಿಹೆಚ್ ಬ್ರಾಂಡ್ ಮಸಾಲೆಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ನಾವು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ಸಹ ನಿಷೇಧಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಎಂಡಿಎಚ್ ಹಾಗೂ ಎವರೆಸ್ಟ್ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳ(Nepal)ವು ಈ ಎರಡು ಮಸಾಲೆ ಪದಾರ್ಥಗಳಿಗೆ ನಿಷೇಧ ಹೇರಿದೆ. ಎವರೆಸ್ಟ್ ಮತ್ತು ಎಂಡಿಹೆಚ್ ಬ್ರಾಂಡ್ ಮಸಾಲೆಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ನಾವು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ಸಹ ನಿಷೇಧಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಎರಡು ನಿರ್ದಿಷ್ಟ ಬ್ರಾಂಡ್‌ಗಳ ಮಸಾಲೆಗಳಲ್ಲಿ ರಾಸಾಯನಿಕಗಳ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎಂದು ಮಹಾರ್ಜನ್ ಮತ್ತಷ್ಟು ಹೇಳಿದರು. ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈಗಾಗಲೇ ಎಂಡಿಎಚ್ ಮತ್ತು ಎವರೆಸ್ಟ್‌ನ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆದೇಶಿಸಿದೆ.
ಇದು ಹಾಂಗ್ ಕಾಂಗ್ ಮತ್ತು ಸಿಂಗಾಪುರದ ಆಹಾರ ಸುರಕ್ಷತೆ ನಿಯಂತ್ರಕರಿಂದ ವಿವರಗಳನ್ನು ಕೇಳಿದೆ. ಅಮೆರಿಕ ಹಾಗೂ ಆಸ್ಟ್ರೇಲಿಯಾ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ಎರಡು ಕಂಪನಿಗಳ ಮಸಾಲೆ ಉತ್ಪನ್ನಗಳಲ್ಲಿ ಕ್ಯಾನ್ಸರ್ಕಾರಕ ಕೀಟನಾಶಕ, ಎಥಿಲೀನ್ ಆಕ್ಸೈಡ್ ಇದೆ ಎಂದು ಹಾಂಕಾಂಗ್ಕಳೆದ ತಿಂಗಳು ನಿಷೇಧ ಹೇರಿತ್ತು. ಎವರೆಸ್ಟ್ ಸಾಂಬಾರು ಪದಾರ್ಥಗಳ ಮಿಶ್ರಣವನ್ನು ಸಿಂಗಾಪುರ ವಾಪಸ್ ಪಡೆದಿತ್ತು.
ಮತ್ತಷ್ಟು ಓದಿ: ಜಾಗತಿಕ ಪರಿಶೀಲನೆಗೂ ಮುನ್ನವೇ ಅಮೆರಿಕದಿಂದ ತಿರಸ್ಕೃತಗೊಂಡ ಎಂಡಿಎಚ್ ಮಸಾಲ
ಎಥಿಲೀನ್ ಆಕ್ಸೈಡ್ ಮಾನವರಲ್ಲಿ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಅದನ್ನು ಕ್ರಿಮಿನಾಶಕವಾಗಿ ಬಳಕೆ ಮಾಡುವುದನ್ನು ನ್ಯೂಜಿಲೆಂಡ್ ಹಾಗೂ ಇತರೆ ದೇಶಗಳಲ್ಲಿ ನಿಷೇಧಿಸಲಾಗಿದೆ. ಎಂಡಿಎಚ್ ಹಾಗೂ ಎವರೆಸ್ಟ್ ನ್ಯೂಜಿಲೆಂಡ್ನಲ್ಲಿಯೂ ಇರುವುದರಿಂದ ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ನ್ಯೂಜಿಲೆಂಡ್ನ ಆಹಾರ ಸುರಕ್ಷತೆ ನಿಯಂತ್ರಕದ ಹಂಗಾಮಿ ಉಪನಿರ್ದೇಶಕ ಜೆನ್ನಿ ಬಿಷಪ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ