AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ ಸಂಸತ್ತಿನಲ್ಲಿ ಮತ್ತೊಮ್ಮೆ ಮೊಳಗಿದ ಭಾರತ ಜಯಘೋಷ, ಶತ್ರು ರಾಷ್ಟ್ರದ ಅಸಹಾಯಕತೆ ಬಯಲು

ಭಾರತವು ಚಂದ್ರನ ಮೇಲೆ ಇಳಿದಿರುವ ವರದಿ ಮಾಡುತ್ತಿದ್ದರೆ, ಪಾಕ್ ಇನ್ನೂ ಚರಂಡಿಯಲ್ಲಿ ಮಕ್ಕಳು ಬಿದ್ದಿರುವ ಸುದ್ದಿ ಮಾಡುತ್ತಿದೆ ಎಂದು ಪಾಕಿಸ್ತಾನದ ಸಂಸದ ಸೈಯದ್ ಮುಸ್ತಫಾ ಕಮಾಲ್ ಹೇಳಿದ್ದಾರೆ.

ಪಾಕಿಸ್ತಾನ ಸಂಸತ್ತಿನಲ್ಲಿ ಮತ್ತೊಮ್ಮೆ ಮೊಳಗಿದ ಭಾರತ ಜಯಘೋಷ, ಶತ್ರು ರಾಷ್ಟ್ರದ ಅಸಹಾಯಕತೆ ಬಯಲು
ಪಾಕಿಸ್ತಾನ ಸಂಸದ ಸೈಯಸ್Image Credit source: India Today
ನಯನಾ ರಾಜೀವ್
|

Updated on:May 16, 2024 | 11:20 AM

Share

ಭಾರತ(India)ವು ಚಂದ್ರನ ಮೇಲೆ ಹೋಗಿರುವ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದರೆ, ಪಾಕಿಸ್ತಾನ(Pakistan)ವು ಇನ್ನೂ ತೆರೆದ ಚರಂಡಿಯಲ್ಲಿ ಮಕ್ಕಳು ಬಿದ್ದಿರುವ ವರದಿಯನ್ನು ಪ್ರಸಾರ ಮಾಡುತ್ತಿದೆ ಎಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ವ್ಯತ್ಯಾಸವನ್ನು ಪಾಕ್ ಸಂಸದ ಸೈಯದ್ ಮುಸ್ತಫಾ ಕಮಾಲ್ ಸಂಸತ್ತಿನಲ್ಲಿ ವಿವರಿಸಿದ್ದಾರೆ. ಪಾಕಿಸ್ತಾನ ಸಂಸತ್ತಿನಲ್ಲಿ ಮತ್ತೊಮ್ಮೆ ಭಾರತಕ್ಕೆ ಜಯಘೋಷ ಮೊಳಗಿದ್ದು, ಶತ್ರು ರಾಷ್ಟ್ರದ ಅಸಹಾಯಕತೆ ಬಯಲಾಗಿದೆ.

ಕರಾಚಿಯಲ್ಲಿನ ಸೌಲಭ್ಯಗಳ ಕೊರತೆಯನ್ನು ಸೈಯದ್ ವಿವರಿಸಿದ್ದಾರೆ. ಇಂದು ಜಗತ್ತೇ ಚಂದ್ರನತ್ತ ಹೋಗುತ್ತಿರುವಾಗ ಕರಾಚಿಯಲ್ಲಿ ನಮ್ಮ ಮಕ್ಕಳು ಗಟಾರಕ್ಕೆ ಬಿದ್ದು ಸಾಯುತ್ತಿದ್ದಾರೆ ಎನ್ನುವ ಸುದ್ದಿ ಪ್ರಸಾರವಾಗುತ್ತಿದೆ.

ಭಾರತವು ಚಂದ್ರನನ್ನು ತಲುಪಿದೆ ಎಂಬ ಸುದ್ದಿಯನ್ನು ನಾವು ಟಿವಿ ಪರದೆಗಳಲ್ಲಿ ನೋಡುತ್ತೇವೆ ಮತ್ತು ಕೇವಲ ಎರಡು ಸೆಕೆಂಡುಗಳ ನಂತರ ಕರಾಚಿಯಲ್ಲಿ ತೆರೆದ ಚರಂಡಿಯಲ್ಲಿ ಮಗುವೊಂದು ಸತ್ತಿದೆ ಎಂಬ ಸುದ್ದಿ ಬರುತ್ತದೆ. ಸುಮಾರು 23 ಕೋಟಿ ಜನರು ವಾಸಿಸುವ ಕರಾಚಿಯಲ್ಲಿ ಶುದ್ಧ ನೀರಿಗೂ ತತ್ವಾರವಿದೆ ಎಂದು ಕಮಲ್ ಹೇಳಿದ್ದಾರೆ.

ಕರಾಚಿಯು ಪಾಕಿಸ್ತಾನದ ಆದಾಯದ ಎಂಜಿನ್ ಆಗಿದೆ. ಪಾಕಿಸ್ತಾನದಲ್ಲಿ ಪ್ರಾರಂಭದಿಂದಲೂ ಕಾರ್ಯನಿರ್ವಹಿಸುತ್ತಿರುವ ಎರಡು ಬಂದರುಗಳು ಇಲ್ಲಿವೆ. 15 ವರ್ಷಗಳಿಂದ ಕರಾಚಿಗೆ ಹೆಚ್ಚು ನೀರು ಸಿಗಲಿಲ್ಲ. ಏನೇ ನೀರು ಬಂದರೂ ಅದನ್ನೂ ಟ್ಯಾಂಕರ್ ಮಾಫಿಯಾ ಸಂಗ್ರಹಿಸಿದೆ.

ಕರಾಚಿ ರಾಜಧಾನಿಯಾಗಿರುವ ಸಿಂಧ್ ಪ್ರಾಂತ್ಯದಲ್ಲಿ ಕನಿಷ್ಠ 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಮತ್ತು ರಾಷ್ಟ್ರಮಟ್ಟದಲ್ಲಿ ಈ ಸಂಖ್ಯೆ 26 ಮಿಲಿಯನ್ ಎಂದು ವರದಿಯನ್ನು ಉಲ್ಲೇಖಿಸಿ ಅವರು ಹೇಳಿದರು. ನಮ್ಮ ಸಿಂಧ್ ಮತ್ತು ದೇಶದ ಶಾಲೆಗಳ ಸ್ಥಿತಿ ನೋಡಿ ನಾಯಕರಿಗೆ ನಿದ್ದೆ ಬರುವುದು ಹೇಗೆ ಎಂದು ಮತ್ತೊಬ್ಬ ನಾಯಕ ಭಾರತವನ್ನು ಹೊಗಳಿದ್ದಾರೆ.

ಮತ್ತಷ್ಟು ಓದಿ: ನೀವು ಪಾಕಿಸ್ತಾನದಲ್ಲಿದ್ದಿದ್ದರೆ ಇಷ್ಟೊತ್ತಿಗೆ ನಿಮ್ಮನ್ನು ಕಿಡ್ನ್ಯಾಪ್​ ಮಾಡ್ತಿದ್ದೆ, ಕ್ಯಾಬ್ ಡ್ರೈವರ್ ಮಾತು ಕೇಳಿ ಬೆಚ್ಚಿಬಿದ್ದ ಕೆನಡಾ ಮಹಿಳೆ ​

ಪಾಕಿಸ್ತಾನದ ಪ್ರಮುಖ ಬಲಪಂಥೀಯ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಈ ಹಿಂದೆ ಒಂದು ಕಡೆ ಭಾರತವು ಜಾಗತಿಕ ಸೂಪರ್ ಪವರ್ ಆಗಲು ಹತ್ತಿರವಾಗುತ್ತಿದೆ, ಇನ್ನೊಂದು ಕಡೆ ಪಾಕಿಸ್ತಾನ ತನ್ನನ್ನು ವಿನಾಶದಿಂದ ರಕ್ಷಿಸುವಂತೆ ಜಗತ್ತನ್ನು ಬೇಡುತ್ತಿದೆ ಎಂದಿದ್ದರು.

ಎರಡೂ ದೇಶಗಳು ಒಂದೇ ದಿನದಲ್ಲಿ ಸ್ವಾತಂತ್ರ್ಯ ಪಡೆದಿವೆ. ಭಾರತ ಸೂಪರ್ ಪವರ್ ಆಗುವ ಕನಸು ಕಾಣುತ್ತಿದ್ದಾರೆ ಮತ್ತು ನಾವು ದಿವಾಳಿತನದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಬೇಡಿಕೊಳ್ಳುತ್ತಿದ್ದೇವೆ.

ಪಾಕಿಸ್ತಾನವು ವಿಶ್ವದ ಎರಡನೇ ಅತಿ ಹೆಚ್ಚು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಹೊಂದಿದೆ, ಅಂದಾಜಿನ ಪ್ರಕಾರ 5-16 ವರ್ಷ ವಯಸ್ಸಿನ 22.8 ಮಿಲಿಯನ್ ಮಕ್ಕಳು ಶಾಲೆಗೆ ಹೋಗುತ್ತಿಲ್ಲ, ಈ ವಯಸ್ಸಿನ ಒಟ್ಟು ಜನಸಂಖ್ಯೆಯ 44 ಪ್ರತಿಶತವನ್ನು ಪ್ರತಿನಿಧಿಸುತ್ತದೆ.

ಸಿಂಧ್‌ನಲ್ಲಿ 52 ಪ್ರತಿಶತದಷ್ಟು ಬಡ ಮಕ್ಕಳು (ಶೇ 58 ಹುಡುಗಿಯರು) ಶಾಲೆಯಿಂದ ಹೊರಗುಳಿದಿದ್ದಾರೆ ಮತ್ತು ಬಲೂಚಿಸ್ತಾನದಲ್ಲಿ 78 ಪ್ರತಿಶತ ಹುಡುಗಿಯರು ಶಾಲೆಯಿಂದ ಹೊರಗಿದ್ದಾರೆ. ಏತನ್ಮಧ್ಯೆ, ಪಾಕಿಸ್ತಾನವು ಹೆಚ್ಚಿನ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಸಾಲ ಸೇರಿದಂತೆ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:20 am, Thu, 16 May 24

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?