AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಯ ದಿನ ಬೆಂಗಳೂರಿನಲ್ಲಿ ಫ್ಲೈಓವರ್​ ಮೇಲಿಂದ ಬಿದ್ದು ಬೈಕ್ ಸವಾರ ಸಾವು

ನಾಗಾರ್ಜುನ ಬೈಕ್ ನಲ್ಲಿ ಹೋಗ್ತಿದ್ದ ವೇಳೆ ಯಾವ ದಿಕ್ಕಿಗೆ ಹೋಗಬೇಕು ಎಂದು ಗೊಂದಲ ಉಂಟಾಗಿ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ.

ದೀಪಾವಳಿಯ ದಿನ ಬೆಂಗಳೂರಿನಲ್ಲಿ ಫ್ಲೈಓವರ್​ ಮೇಲಿಂದ ಬಿದ್ದು ಬೈಕ್ ಸವಾರ ಸಾವು
ದೀಪಾವಳಿಯ ದಿನ ಬೆಂಗಳೂರಿನಲ್ಲಿ ಫ್ಲೈಓವರ್​ ಮೇಲಿಂದ ಬಿದ್ದು ಬೈಕ್ ಸವಾರ ಸಾವು
TV9 Web
| Edited By: |

Updated on:Oct 24, 2022 | 1:45 PM

Share

ಬೆಂಗಳೂರು: ದೀಪಾವಳಿಯ ದಿನ ಬೆಂಗಳೂರಿನಲ್ಲಿ ಫ್ಲೈಓವರ್​ ಮೇಲಿಂದ ಬಿದ್ದು ಬೈಕ್ (Bike) ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೊದಲು, ಡಿವೈಡರ್​ಗೆ ಡಿಕ್ಕಿ ಹೊಡೆದು, ಬಳಿಕ ಫ್ಲೈಓವರ್​ ಮೇಲಿಂದ (flyover) ಬಿದ್ದು ಮೃತಪಟ್ಟಿದ್ದಾನೆ. ಆಂಧ್ರಪ್ರದೇಶ ಮೂಲದ ನಾಗಾರ್ಜುನ (33) ಮೃತ ದುರ್ದೈವಿ. ನಾಗಾರ್ಜುನ ಬೆಂಗಳೂರಿನಿಂದ ಹೊಸೂರು ಕಡೆ ಹೊರಟಿದ್ದ. ಎಲೆಕ್ಟ್ರಾನಿಕ್ ಸಿಟಿ (electronic city) ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಯಾವ ದಿಕ್ಕಿಗೆ ಹೋಗಬೇಕು ಎಂಬ ಗೊಂದಲದಲ್ಲಿ… ನಾಗಾರ್ಜುನ ಬೈಕ್ ನಲ್ಲಿ ಹೋಗ್ತಿದ್ದ ವೇಳೆ ಯಾವ ದಿಕ್ಕಿಗೆ ಹೋಗಬೇಕು ಎಂದು ಗೊಂದಲ ಉಂಟಾಗಿ, ಗಾಡಿ ಕಂಟ್ರೋಲ್ ಗೆ ಬಾರದೆ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯ BETPL ನಿರ್ವಹಣೆಯಲ್ಲಿರುವ ಫ್ಲೈಓರ್ ಇದಾಗಿದೆ. ಬೆಳಗ್ಗೆ 11.45ರಲ್ಲಿ ಈ ದುರಂತ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಸೇಂಟ್ ಜಾನ್ಸ್ ಆಸ್ಪತ್ರೆ ಗೆ ರವಾನೆ ಮಾಡಿದ್ದಾರೆ.

ಮುನ್ನೂರು ರೂಪಾಯಿ ಜಗಳ ಕೊಲೆಯಲ್ಲಿ ಅಂತ್ಯ

ಕಲಬುರಗಿ: ಕರೀಂ ಬಾಗವಾನ್ ಮತ್ತು ವಾಜೀದ್ ಸಂಬಂಧಿಕರಾಗಿದ್ದಾರೆ. ಒಂದೇ ಬಡವಾಣೆಯ ನಿವಾಸಿಗಳೂ ಆಗಿದ್ದರು. ಇಬ್ಬರು ಕೂಡ ಒಟ್ಟಿಗೇ ಇರುತ್ತಿದ್ದರು. ಕರೀಂ ಬಾಳೆಹಣ್ಣು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರೆ ವಾಜಿದ್ ಹಣ್ಣು ಮಾರಾಟದಲ್ಲಿ ತೊಡಗಿದ್ದನು. ಇಬ್ಬರು ಕೂಡಿ ಎಣ್ಣೆ ಪಾರ್ಟಿಯೂ ಮಾಡುತ್ತಿದ್ದರು. ಆದರೆ ಆ ಒಂದು ವಿಚಾರದಲ್ಲಿ ನಡೆದ ಜಗಳ ಕರೀಂನ ಕೊಲೆಯಲ್ಲಿ ಅಂತ್ಯವಾಗಿದೆ. ಅಕ್ಟೋಬರ್ 16 ರಂದು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಪ್ರದೇಶದಲ್ಲಿ ವಾಜೀದ್ ಕರೀಂನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದನು. ಸದ್ಯ ಪೊಲೀಸರು ವಾಜೀದ್​ನನ್ನು ಬಂಧಿಸಿದ್ದಾರೆ.

ಪ್ರತಿನಿತ್ಯ ಬಸ್ ನಿಲ್ದಾಣದ ಮುಂದೆ ಹಣ್ಣು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಆಳಂದ ಪಟ್ಟಣದ ರೇವಣಸಿದ್ದೇಶ್ವರ ಕಾಲೋನಿ ನಿವಾಸಿ ಕರೀಂ, ಅಕ್ಟೋಬರ್ 16 ರಂದು ಮುಂಜಾನೆ ಕೂಡಾ ಬಾಳೆ ಹಣ್ಣು ಮಾರಾಟ ಮಾಡುವದಾಗಿ ಹೇಳಿ ಮನೆಯಿಂದ ತೆರಳಿದ್ದ. ಆದರೆ ರಾತ್ರಿ ಜನನಿಬಿಡ ಪ್ರದೇಶದಲ್ಲಿಯೇ ಕರೀಂನ ಹೊಟ್ಟೆಗೆ, ಕತ್ತಿನ ಭಾಗಕ್ಕೆ ಸಹೋದರ ಸಂಬಂಧಿ ವಾಜೀದ್ ಮಾಕರಾಸ್ತ್ರದಿಂದ ಇರಿದಿದ್ದನು. ಮಧ್ಯಪ್ರವೇಶಕ್ಕೆ ಮುಂದಾದ ಯುವಕನೋರ್ವನ ಮೇಲೂ ವಾಜೀದ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದನು.

ಕ್ಷುಲ್ಲಕ ಕಾರಣಕ್ಕೆ ಕರೀಂನ ಕೊಲೆ

ಅನೇಕ ವರ್ಷಗಳಿಂದ ಇಬ್ಬರು ಒಟ್ಟಿಗೇ ಇರುತ್ತಿದ್ದರೂ ಅನೇಕ ತಿಂಗಳಿಂದ ಇಬ್ಬರ ನಡುವೆ ಹಣದ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು. ಈ ಹಿಂದೆ ಕೂಡಾ ವಾಜೀದ್ ಕರೀಂ ಜೊತೆ ಜಗಳ ಮಾಡಿಕೊಂಡಿದ್ದನಂತೆ. ಆದರೆ ಅಕ್ಟೋಬರ್ 16 ರಂದು ಇಬ್ಬರು ಸೇರಿ ಮತ್ತೆ ಇಸ್ಪಿಟ್ ಆಡುವದು, ಮದ್ಯ ಕುಡಿಯುವದನ್ನು ಮಾಡಿದ್ದರಂತೆ. ಕೆಲ ದಿನಗಳ ಹಿಂದೆ ಕರೀಂ ಬಾಗಾವನ್ ಗೆ ವಾಜೀದ್ 300 ರೂಪಾಯಿ ನೀಡಿದ್ದನು. ಈ ವಿಚಾರವಾಗಿ ಅಂದು ಇಬ್ಬರು ಮದ್ಯ ಸೇವನೆ ಮಾಡಿದ ನಂತರ ಜಗಳ ಆರಂಭಿಸಿದ್ದಾರೆ.

ತಾನು ನೀಡಿದ 300 ರೂಪಾಯಿ ನೀಡುತ್ತಿಲ್ಲ ಎಂದು ಜಗಳ ತಗೆದಿದ್ದ ವಾಜೀದ್, ಕರೀಂನನ್ನು ಹಣ್ಣು ಕತ್ತರಿಸುವ ಮಾರಕಾಸ್ತ್ರವನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಕರೀಂ ಸಹೋದರನ ಮೇಲೂ ಹಲ್ಲೆ ಮಾಡಿದ್ದನು. ಆದರೆ ಇಬ್ಬರ ಜಗಳದಲ್ಲಿ ಕರೀಂ ಕೊನೆಯಲ್ಲಿ ಸಾವನ್ನಪ್ಪುತ್ತಾನೆ. ಸದ್ಯ ಆರೋಪಿ ವಾಜೀದ್​ನನ್ನು ಆಳಂದ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

Published On - 1:21 pm, Mon, 24 October 22

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ