AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವೈಜ್ಞಾನಿಕ ಹಂಪ್​​ ಗೆ ಬಿದ್ದು ಕೈ ಮುರಿದುಕೊಂಡ ಬೈಕ್​ ಸವಾರ; ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸರ ವಿರುದ್ಧ ಆಕ್ರೋಶ

ಜಯನಗರದ ಮೌಂಟ್​​ ಕಾರ್ಮೆಲ್​ ಶಾಲೆ ಸಮೀಪ ಇರುವ ಅವೈಜ್ಞಾನಿಕ ಹಂಪ್​​ ಗೆ ಬಿದ್ದು ಬೈಕ್​ ಸವಾರ ಇರ್ಷಾದ್ ಕೈ ಮುರಿದುಕೊಂಡ ಘಟನೆ ನಡೆದಿದೆ.

ಅವೈಜ್ಞಾನಿಕ ಹಂಪ್​​ ಗೆ ಬಿದ್ದು ಕೈ ಮುರಿದುಕೊಂಡ ಬೈಕ್​ ಸವಾರ; ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸರ ವಿರುದ್ಧ ಆಕ್ರೋಶ
ಇರ್ಷಾದ್
ಆಯೇಷಾ ಬಾನು
|

Updated on:Feb 21, 2023 | 9:48 AM

Share

ಬೆಂಗಳೂರು: ಸವಾರರ ಸ್ಪೀಡ್​ಗೆ ಬ್ರೇಕ್ ಹಾಕಲು ನಗರದಲ್ಲಿ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಹಂಪ್​ಗಳನ್ನು ಅಳವಡಿಸಲಾಗಿದೆ. ಇದರಿಂದ ಅನೇಕ ಸವಾರರು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಜಯನಗರದ ಮೌಂಟ್​​ ಕಾರ್ಮೆಲ್​ ಶಾಲೆ ಸಮೀಪ ಇರುವ ಅವೈಜ್ಞಾನಿಕ ಹಂಪ್​​ ಗೆ ಬಿದ್ದು ಬೈಕ್​ ಸವಾರ ಇರ್ಷಾದ್ ಕೈ ಮುರಿದುಕೊಂಡ ಘಟನೆ ನಡೆದಿದೆ. ರಾತ್ರಿ ವೇಳೆ ಹಂಪ್​ ಕಾಣದೆ ಬೈಕ್​ ಸ್ಕಿಡ್ ಆಗಿ ಘಟನೆ ಸಂಭವಿಸಿದೆ. ಟ್ವಿಟರ್​ ಹಾಗೂ ಫೇಸ್​​ಬುಕ್​​ ನಲ್ಲಿ ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸವಾರ ಇರ್ಷಾದ್ ಆಕ್ರೋಶ ಹೊರ ಹಾಕಿದ್ದಾರೆ.

ಪ್ರತಿ ನಿತ್ಯ ನಾಲ್ಕೈದು ಮಂದಿಗೆ ಗಾಯ

ನಿತ್ಯ ಇದೇ ರಸ್ತೆಯಲ್ಲಿ ಮೂರರಿಂದ ನಾಲ್ಕು ಜನ ಬಿದ್ದು ಗಾಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಂಪ್ಸ್​ ಕಾಣದೆ ಬಿದ್ದು ಹಲವು ಜನರಿಗೆ ಗಂಭೀರ ಗಾಯಗಳಾಗಿವೆ. ಬಿದ್ದಾಗ ಕೆಲವರಿಗೆ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ₹50 ಸಾವಿರದಿಂದ ಒಂದೂವರೆ ಲಕ್ಷ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಕ್ರಮಕೈಗೊಳ್ಳಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ. ರಾತ್ರಿ ಕೆಲಸ ಮುಗಿಸಿಕೊಂಡು ಜೆಪಿ ನಗರದಿಂದ ಆಡುಗೋಡಿಗೆ ತೆರಳುತ್ತಿದ್ದ ಇರ್ಷಾದ್ ಜಯನಗರದ ಬಳಿಯಿರುವ ಮೌಂಟ್​​ ಕಾರ್ಮೆಲ್​ ಶಾಲೆಯ ಬಳಿ ಬೈಕ್​​ ಸ್ಕಿಡ್​ ಆಗಿ ಬಿದ್ದು ಕೈ ಮುರಿದುಕೊಂಡಿದ್ದಾರೆ. ಕತ್ತಲಿದ್ದರಿಂದ ರಸ್ತೆಯಲ್ಲಿದ್ದ ಹಂಪ್ಸ್​ ಕಾಣದೆ ಬೈಕ್​​ ಸ್ಕಿಡ್​ ಆಗಿದೆ. ಬೈಕ್​ನಿಂದ ಬಿದ್ದಾಗ ಸವಾರ ಇರ್ಷಾದ್​​ ಕೈಗೆ ಗಾಯವಾಗಿತ್ತು. ಹಂಪ್​​ ಮೇಲೆ ಕ್ಯಾಟ್‍ ಐ ಇಲ್ಲದಿರುವುದು ಘಟನೆಗೆ ಕಾರಣವಾಗಿದೆ.

ಇದನ್ನೂ ಓದಿ: ಅಪಘಾತ ತಡೆಗೆ ಬೆಂಗಳೂರಿನಲ್ಲಿ 500 ರೋಡ್ ಹಂಪ್ಸ್​ ನಿರ್ಮಾಣಕ್ಕೆ ಬೇಡಿಕೆ ಇಟ್ಟ ಟ್ರಾಫಿಕ್ ಪೊಲೀಸರು

ಹಂಪ್ಸ್​ ನಿರ್ಮಾಣಕ್ಕೆ ನಿಯಮ ಏನಿರಬೇಕು?

  • ಹಂಪ್ಸ್​​ ವ್ಯಾಸ 17 ಮೀಟರ್ ಹಾಗೂ ಉದ್ದ 3.7 ಮಿಟರ್ ಇರಬೇಕು
  • 0.10 ಮೀಟರ್ ಎತ್ತರ, ವಾಹನ ಚಕ್ರದ ಅಗಲಕ್ಕಿಂತ ಹೆಚ್ಚು ಇರಬೇಕು
  • ಉಬ್ಬುಗಳ ಮೇಲೆ ಕಪ್ಪು, ಬಿಳಿ ಬಣ್ಣದ ಪಟ್ಟಿಯನ್ನ ಬಳಿದಿರಬೇಕು
  • ಕತ್ತಲಿನಲ್ಲಿ ಸೆಲ್ಫ್ ರಿಫ್ಲೆಕ್ಟ್ ಆಗುವ ಪಟ್ಟಿಯನ್ನು ಕೂಡ ಬಳಿದಿರಬೇಕು
  • ರಾತ್ರಿಯಲ್ಲಿ ಸ್ಪಷ್ಟವಾಗಿ ಕಾಣಿಸುವ ಸಲುವಾಗಿ ಕ್ಯಾಟ್‍ ಐಗಳು ಇರಬೇಕು
  • 40 ಮೀಟರ್ ಮೊದಲೇ ಮುಂದೆ ಹಂಪ್ಸ್ ಇದೆ ಎಂಬ ಫಲಕ ಇರಬೇಕು

    ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 9:48 am, Tue, 21 February 23

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!