ರವಿಕಾಂತೇಗೌಡ ಅಭಿಮಾನಿ ಎಂದು ಬರೆಸಿಕೊಂಡು ಟ್ರಾಫಿಕ್ ರೂಲ್ಸ್ ಬ್ರೇಕ್; ವಾಹನ ವಶಕ್ಕೆ

TV9 Digital Desk

| Edited By: ganapathi bhat

Updated on: Sep 11, 2021 | 3:11 PM

Bengaluru News: ಜಯನಗರ ಟ್ರಾಫಿಕ್ ಪೊಲೀಸ್ ಇನ್ಸ್​ಪೆಕ್ಟರ್ ಗಿರೀಶ್ ಬಾಬುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರವಿಕಾಂತೇಗೌಡರ ಅಭಿಮಾನಿ ಆದ್ರೆ ಕೈ, ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳಿ. ಬೈಕ್ ಮೇಲೆ ಯಾಕೆ ಬರೆಸಿಕೊಂಡಿರೋದು ಎಂದು ಕೇಳಿದ್ದಾರೆ.

ರವಿಕಾಂತೇಗೌಡ ಅಭಿಮಾನಿ ಎಂದು ಬರೆಸಿಕೊಂಡು ಟ್ರಾಫಿಕ್ ರೂಲ್ಸ್ ಬ್ರೇಕ್; ವಾಹನ ವಶಕ್ಕೆ
ರವಿಕಾಂತೇಗೌಡ ಅಭಿಮಾನಿ ಎಂದು ಬರೆಸಿಕೊಂಡು ಟ್ರಾಫಿಕ್ ರೂಲ್ಸ್ ಬ್ರೇಕ್

ಬೆಂಗಳೂರು: ಸ್ಕೂಟರ್ ಮೇಲೆ ರವಿಕಾಂತೇಗೌಡ ಅಭಿಮಾನಿ ಎಂದು ಬರೆಸಿಕೊಂಡು ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದ ಬೈಕ್​ನ್ನು ಜಯನಗರ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಚಾರಿ ವಿಭಾಗ ಜಂಟಿ ಪೊಲೀಸ್ ಆಯುಕ್ತ ಆಗಿರುವ ರವಿಕಾಂತೇಗೌಡ ಹೆಸರು ಬರೆಸಿಕೊಂಡು ನಿಯಮ ಉಲ್ಲಂಘಿಸುತ್ತಿದ್ದವರ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಕೆಎ 05 ಜೆಎಸ್ 2581 ನಂಬರಿನ ಸ್ಕೂಟರ್ ಸೀಜ್ ಮಾಡಲಾಗಿದೆ. ಸ್ವತಃ ರವಿಕಾಂತರೆಗೌಡರ ಆದೇಶದ ಮೇರೆಗೆ ಸ್ಕೂಟರ್ ಸೀಜ್ ಮಾಡಲಾಗಿದೆ.

ಆರ್​ಟಿಐ ಕಾರ್ಯಕರ್ತ ಗಿರೀಶ್ ಬಾಬು ಓಡಿಸುತ್ತಿದ್ದ ವಾಹನ ಇದಾಗಿದ್ದು, ಗಿರೀಶ್, ಪರಮೇಶ್ ಎಂಬ ಸ್ನೇಹಿತನಿಂದ ಸ್ಕೂಟರ್ ಖರೀದಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಆದರೆ ಇವರ ಹೆಸರಿಗೆ ವಾಹನ ವರ್ಗಾವಣೆ ಮಾಡಿಕೊಂಡಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. 12.30 ಸುಮಾರಿಗೆ ಜಯನಗರ ಟ್ರಾಫಿಕ್ ಪೊಲೀಸರು ವಾಹನ ಸೀಜ್ ಮಾಡಿ ತಂದಿದ್ದಾರೆ. ಬಳಿಕ, ದಂಡ ಮೊತ್ತ ಪಾವತಿಗೆ ಗಿರೀಶ್ ಬಾಬು ಸಮಯ ಕೇಳಿದ್ದಾರೆ. ಈಗ ಕೊರೊನಾ ಟೈಂ ಹಣ ಇಲ್ಲ ಸಮಯ ಬೇಕು ಎಂದು ಗಿರೀಶ್ ಬಾಬು ಹೇಳಿದ್ದಾರೆ.

ಜಯನಗರ ಟ್ರಾಫಿಕ್ ಪೊಲೀಸ್ ಇನ್ಸ್​ಪೆಕ್ಟರ್ ಗಿರೀಶ್ ಬಾಬುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರವಿಕಾಂತೇಗೌಡರ ಅಭಿಮಾನಿ ಆದ್ರೆ ಕೈ, ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳಿ. ವಾಹನದ ಮೇಲೆ ಯಾಕೆ ಬರೆಸಿಕೊಂಡಿರೋದು ಎಂದು ಕೇಳಿದ್ದಾರೆ. ಸರಿಯಾಗಿ ಸಂಚಾರಿ ನಿಯಮ ಪಾಲಿಸೋದಾದರೆ ಪರವಾಗಿಲ್ಲ. ನೀವು ಹೆಸರು ಬರೆಸಿಕೊಂಡರು ಪರವಾಗಿಲ್ಲ ಎಂದು ತಿಳಿಸಿ ಹೇಳಿದ್ದಾರೆ. ಸದ್ಯ ಜಯನಗರ ಟ್ರಾಫಿಕ್ ಪೊಲೀಸರು ರವಿಕಾಂತೇಗೌಡ ಹೆಸರಿಗೆ ಪೈಂಟ್ ಬಳಿದಿದ್ದಾರೆ. ಫೈನ್ ಕಟ್ಟಲು ಕಾಲಾವಕಾಶ ಕೇಳಿರುವುದರಿಂದ ಅಲ್ಲಿವರೆಗೂ ಸ್ಕೂಟರ್ ಠಾಣೆಯಲ್ಲಿ ಇರಲಿ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಪರಾಧ ಸುದ್ದಿಗಳು: ಬೆಂಗಳೂರಿನಲ್ಲಿ ಹೆಚ್ಚಿದ ಪೆಟ್ರೋಲ್ ಕಳ್ಳರ ಹಾವಳಿ

ಇದನ್ನೂ ಓದಿ: ಮಂಗಳೂರು: ಕಾರಿಗೆ ಅಂಟಿಸಿದ್ದ ದೇವರ ಚಿತ್ರ ತೆಗೆಯಲು ಸೂಚಿಸಿದ ಟ್ರಾಫಿಕ್ ಪೊಲೀಸರ ವಿರುದ್ಧ ಜನರ ಆಕ್ರೋಶ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada