‘ಶಾಸಕನ ಪುತ್ರನನ್ನು ಮದುವೆಯಾಗ್ತೇನೆಂದು ಹಠ ಮಾಡಿದ್ದಳು; ಅವರು ದೊಡ್ಡವರು ಬೇಡ ಎಂದು ಮಗಳಿಗೆ ಬುದ್ಧಿವಾದ ಹೇಳಿದ್ದೆ’

| Updated By: sandhya thejappa

Updated on: Aug 31, 2021 | 11:21 AM

ಭೀಕರ ಅಪಘಾತದಲ್ಲಿ ಸುಮಾರು ಏಳು ಜನ ಸಾವನ್ನಪ್ಪಿದ್ದಾರೆ. ಕರುಣಾಸಾಗರ್ ಮತ್ತು ಉತ್ಸವ್ ಇಬ್ಬರು ಕಾರಿನಲ್ಲಿ ಬಂದಿದ್ದಾರೆ. ಇಬ್ಬರು ತಮಿಳುನಾಡಿನಿಂದ ಬೆಂಗಳೂರು ಬಂದಿದ್ದಾರೆ.

‘ಶಾಸಕನ ಪುತ್ರನನ್ನು ಮದುವೆಯಾಗ್ತೇನೆಂದು ಹಠ ಮಾಡಿದ್ದಳು; ಅವರು ದೊಡ್ಡವರು ಬೇಡ ಎಂದು ಮಗಳಿಗೆ ಬುದ್ಧಿವಾದ ಹೇಳಿದ್ದೆ’
ಮೃತಪಟ್ಟಿರುವ ಬಿಂದು
Follow us on

ಬೆಂಗಳೂರು: ಕೋರಮಂಗಲದಲ್ಲಿ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಹೊಸರು ಶಾಸಕ ವೈ.ಪ್ರಕಾಶ್ ಅವರ ಪುತ್ರ ಮೃತಪಟ್ಟಿದ್ದು, ಪುತ್ರನ ಜೊತೆಗಿದ್ದ ಬಿಂದು ಎಂಬ ಯುವತಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮೃತಪಟ್ಟ ಬಿಂದು ತಂದೆ, ನಿನ್ನೆ ಕರೆ ಮಾಡಿದಾಗ ಮಗಳು ಚೆನ್ನೈನಲ್ಲಿ ಇರುವುದಾಗಿ ಹೇಳಿದ್ದಳು. ನ್ಯೂಸ್ ನೋಡಿದಾಗ ಅಪಘಾತವಾಗಿರುವುದು ಗೊತ್ತಾಗಿದೆ. ಶಾಸಕನ ಪುತ್ರನನ್ನು ಮದುವೆಯಾಗುತ್ತೇನೆ ಎಂದು ಹಠ ಮಾಡಿದ್ದಳು. ಅವರು ದೊಡ್ಡವರು ಹೀಗಾಗಿ ಬೇಡ ಎಂದು ಮಗಳಿಗೆ ಹೇಳಿದ್ದೆ. ಏನೇ ಆದರೂ ನಾನು ಅವರನ್ನೇ ಮದುವೆಯಾಗುತ್ತೇನೆ ಎಂದಿದ್ದಳು ಅಂತ ತಿಳಿಸಿದ್ದಾರೆ.

ಭೀಕರ ಅಪಘಾತದಲ್ಲಿ ಸುಮಾರು ಏಳು ಜನ ಸಾವನ್ನಪ್ಪಿದ್ದಾರೆ. ಕರುಣಾಸಾಗರ್ ಮತ್ತು ಉತ್ಸವ್ ಇಬ್ಬರು ಕಾರಿನಲ್ಲಿ ಬಂದಿದ್ದಾರೆ. ಇಬ್ಬರು ತಮಿಳುನಾಡಿನಿಂದ ಬೆಂಗಳೂರು ಬಂದಿದ್ದಾರೆ. ಉತ್ಸವ್ ಮೂಲತಃ ಹರಿಯಾಣದವರು. ಪೊಲೀಸರ ಮಾಹಿತಿ ಪ್ರಕಾರ, ಇಷಿಕಾ ಬಿಸ್ವಾಸ್, ಡಾ.ದನುಷಾ, ಬಿಂದು, ಕಾರ್ತಿಕ್ ಮತ್ತು ಅಕ್ಷಯ್ ಗೋಯಲ್ ಬೆಂಗಳೂರಿನಲ್ಲೆ ವಾಸವಿದ್ದರು. ಜೋಲಾ ಸರ್ವಿಸ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು.

ಬಿಂದು ಭೇಟಿಯಾಗಲು ಪಿಜಿ ಬಳಿ ಬಂದು ಎಲ್ಲರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಕರುಣಾಸಾಗರ್ ಮತ್ತು ಉತ್ಸವ್ ಇಬ್ಬರು ಕಾರಿನಲ್ಲಿ ಬಂದಿದ್ದಾರೆ. ಬಳಿಕ ಎಲ್ಲರೂ ಉಟಕ್ಕೆ ತೆರಳಿದ್ದಾರೆ. ವಾಪಸ್ ಸರ್ವಿಸ್ ಅಪಾರ್ಟ್ಮೆಂಟ್ ಬಳಿಗೆ ಬರುತ್ತಿರುವಾಗ ಘಟನೆ ನಡೆದಿದೆ.

ಸದ್ಯ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಕುಟುಂಬಕ್ಕೆ ಹಸ್ತಾಂತರ ಮಾಡುತ್ತಾರೆ. ಘಟನೆ ಸಂಬಂಧ ಪೂರ್ವ ವಿಭಾಗ ಸಂಚಾರಿ ಡಿಸಿಪಿ ಶಾಂತರಾಜು ನೇತೃತ್ವದಲ್ಲಿ ತನಿಖೆ ನಡೆಯಲಿದೆ.

ಇದನ್ನೂ ಓದಿ

ಹೊಸೂರು ಶಾಸಕ ಪ್ರಕಾಶ್ ಪತ್ನಿ ಇತ್ತೀಚೆಗೆ ಮೃತಪಟ್ಟಿದ್ರು; ಅತ್ತೆ ಮಗಳನ್ನ ವಿವಾಹವಾಗಬೇಕಿದ್ದ ಮಗ-ಭಾವೀ ಪತ್ನಿ ಸಹ ಸಾವು

ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ; ಬೇರೆ ಬೇರೆ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದ ಸ್ನೇಹಿತರು

(Bindu father informed about daughter marriage issue)