ಕೆಲವೇ ತಿಂಗಳುಗಳ ಅಂತರದಲ್ಲಿ ಪತ್ನಿ, ಮಗ ಮತ್ತು ಭಾವೀ ಸೊಸೆಯನ್ನು ಕಳೆದುಕೊಂಡ ಹೊಸೂರು ಶಾಸಕ ಪ್ರಕಾಶ್
ಕೆಲ ತಿಂಗಳ ಹಿಂದೆಯಷ್ಟೇ ಹೊಸೂರು ಡಿಎಂಕೆ ಶಾಸಕ ವೈ.ಪ್ರಕಾಶ್ ಪತ್ನಿ ಮೃತಪಟ್ಟಿದ್ರು. ಇದೀಗ ಮಗನನ್ನ ಕಳೆದುಕೊಂಡಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಾದ ಅಪಘಾತದಲ್ಲಿ ಕಾರಿನಲ್ಲಿ ಕರುಣಾಸಾಗರ್ ಜೊತೆಗೆ ಬಿಂದು(28) ಕೂಡ ಮೃತಪಟ್ಟಿದ್ದಾರೆ. ಬಿಂದು, ಕುರಣಾಸಾಗರ್ ಮದುವೆಯಾಗಬೇಕಿದ್ದ ಅತ್ತೆ ಮಗಳು.
ಬೆಂಗಳೂರು: ಕೋರಮಂಗಲದಲ್ಲಿ ನಡೆದ ಭೀಕರ ಅಪಘಾತದಲ್ಲಿ ಹೊಸೂರು ಶಾಸಕ ವೈ.ಪ್ರಕಾಶ್ ಅವರ ಏಕೈಕ ಪುತ್ರ ಕರುಣಾಸಾಗರ್ ಸೇರಿ 7 ಜನ ಮೃತಪಟ್ಟಿದ್ದಾರೆ. ಕರುಣಾಸಾಗರ್ ಮೃತ ದೇಹ ನೋಡಲು ಚಿತಾಗಾರಕ್ಕೆ ತೆರಳಿದ್ದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಂತಾಪ ಸೂಚಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಹೊಸೂರು ಶಾಸಕ ವೈ.ಪ್ರಕಾಶ್ ನಮಗೆ ಚಿರಪರಿಚಿತರು. ಪ್ರಕಾಶ್ ಸ್ಥಳೀಯ ಶಾಸಕರಾಗಿದ್ದರು. ಎರಡು ಬಾರಿ ಸ್ಥಳೀಯ ಚುನಾವಣೆ ಗೆದ್ದಿದ್ದರು. ಮೊನ್ನೆಯಷ್ಟೆ ಹೊಸೂರಿನಿಂದ ಚುನಾವಣೆಗೆ ನಿಂತಿದ್ದರು ನಾನು, ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡಿದ್ದೆವು. ವೈ.ಪ್ರಕಾಶ್ ಅವರ ಮಗ ಸೇರಿ 7 ಸ್ನೇಹಿತರು ರಾತ್ರಿ 1.30 ರ ಸಮಯಕ್ಕೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸದ್ಯ ವೈ.ಪ್ರಕಾಶ್ ಚೆನ್ನೈನಲ್ಲಿ ಇದ್ದಾರೆ. ಹೊಸೂರು ಮಾಜಿ ಶಾಸಕ ಸತ್ಯ ಅವರು ಸೇರಿ ಆಪ್ತರು ಇಲ್ಲಿಗೆ ಬಂದಿದ್ದಾರೆ. ಕರುಣಾಸಾಗರ್ ಜೊತೆ ಇದ್ದವರು ಬೆಂಗಳೂರಿನ ಸ್ನೇಹಿತರು ಎಂದು ಅಂದಾಜಿಸಲಾಗಿದೆ ಎಂದರು.
ಪತ್ನಿ ಸಾವಿನ ಕೆಲ ತಿಂಗಳ ಬಳಿಕ ಏಕೈಕ ಮಗನೂ ವಿಧಿವಶ
ಇನ್ನು ಕೆಲ ತಿಂಗಳ ಹಿಂದೆಯಷ್ಟೇ ಹೊಸೂರು ಡಿಎಂಕೆ ಶಾಸಕ ವೈ.ಪ್ರಕಾಶ್ ಪತ್ನಿ ಮೃತಪಟ್ಟಿದ್ರು. ಇದೀಗ ಅವರ ಏಕೈಕ ಮಗನನ್ನ ಕಳೆದುಕೊಂಡಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಾದ ಅಪಘಾತದಲ್ಲಿ ಕಾರಿನಲ್ಲಿ ಕರುಣಾಸಾಗರ್ ಜೊತೆಗೆ ಬಿಂದು(28) ಕೂಡ ಮೃತಪಟ್ಟಿದ್ದಾರೆ. ಬಿಂದು, ಕುರಣಾಸಾಗರ್ ಮದುವೆಯಾಗಬೇಕಿದ್ದ ಅತ್ತೆ ಮಗಳು.
ಚೆನ್ನೈನಲ್ಲಿದ್ದೇನೆ ಎಂದು ಹೇಳಿದ್ದ ಬಿಂದು ಬೆಂಗಳೂರು ಅಪಘಾತದಲ್ಲಿ ಸಾವು ಮುರುಗೇಶ್‌ಪಾಳ್ಯದ ಕಾವೇರಿನಗರದ ನಿವಾಸಿ ಬಿಂದು. ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಕರುಣಾಸಾಗರ್ ಜೊತೆ ಮದುವೆ ಮಾಡಲು ಚರ್ಚೆ ನಡಿತಾಯಿತ್ತು. ಬಿಂದು ಒಂದು ತಿಂಗಳಿಂದ ಚೆನ್ನೈನಲ್ಲೇ ವಾಸವಾಗಿದ್ದಳು. ನಿನ್ನೆ ಎಂಟು ಗಂಟೆ ಸುಮಾರಿಗೆ ಬಿಂದು ತನ್ನ ತಂದೆಗೆ ಕರೆ ಮಾಡಿ ಚೆನ್ನೈನಲ್ಲೇ ಇರುವುದಾಗಿ ತಂದೆಗೆ ಮಾಹಿತಿ ನೀಡಿದ್ದರು. ಆದ್ರೆ ಬೆಳಗ್ಗೆ ನ್ಯೂಸ್ನಲ್ಲಿ ಮಾಹಿತಿ ತಿಳಿದು ಶವಾಗಾರಕ್ಕೆ ಬಿಂದು ತಂದೆ ಆಗಮಿಸಿದ್ದಾರೆ.
ಇದನ್ನೂ ಓದಿ: ಕೋರಮಂಗಲದಲ್ಲಿ ಐಷಾರಾಮಿ ಕಾರು ಅಪಘಾತ; ಮೃತ ಯುವಕನೊಬ್ಬ ಪಕ್ಕದ ಹೊಸೂರು ಕ್ಷೇತ್ರದ ಶಾಸಕನ ಪುತ್ರ
Published On - 10:04 am, Tue, 31 August 21