ಬಿಟ್ ಕಾಯಿನ್ ಪ್ರಕರಣ: ಇಬ್ಬರು ಆರೋಪಿಗಳಿಗೆ ಫೆ 13ರವರೆಗೆ ನ್ಯಾಯಾಂಗ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 31, 2024 | 7:43 PM

ರಾಜ್ಯದ ರಾಜಕೀಯದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು ಬಿಟ್ ಕಾಯಿನ್ ಹಗರಣ. ಅದೆಷ್ಟರ ಮಟ್ಟಿಗೆ ಅಂದರೆ ಇಡೀ ದೇಶದ ಚಿತ್ತ ಕರ್ನಾಟಕದತ್ತ ನೆಟ್ಟಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಫೆ.13ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ.

ಬಿಟ್ ಕಾಯಿನ್ ಪ್ರಕರಣ: ಇಬ್ಬರು ಆರೋಪಿಗಳಿಗೆ ಫೆ 13ರವರೆಗೆ ನ್ಯಾಯಾಂಗ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಜನವರಿ 31: ಬಿಟ್ ಕಾಯಿನ್ (Bitcoin) ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಫೆ.13ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಇನ್ಸ್​ಪೆಕ್ಟರ್ ಪ್ರಶಾಂತ್ ಬಾಬು, ಸೈಬರ್ ಎಕ್ಸ್​ಪರ್ಟ್ ಸಂತೋಷ್​ಗೆ ಬಂಧಿತರು. ಬಿಟ್​ ಕಾಯಿನ್ ಪ್ರಕರಣ ಸಂಬಂಧ ಇಬ್ಬರನ್ನು ಎಸ್​ಐಟಿ ಬಂಧಿಸಿತ್ತು. ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಆರು ದಿನಗಳ ಕಾಲ ಆರೋಪಿಗಳನ್ನು ಎಸ್​ಐಟಿ ಕಸ್ಟಡಿಗೆ ಪಡೆದುಕೊಂಡಿತ್ತು. ಇಂದಿಗೆ ಆರೋಪಿಗಳ ಕಸ್ಟಡಿ ಅಂತ್ಯವಾಗಿದ್ದು, ಎಸಿಎಂಎಂ 1ನೇ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು.

ಅಷ್ಟಕ್ಕೂ ಚುನಾವಣೆಗೂ ಮುನ್ನ ಕಾಂಗ್ರೆಸ್ ಬಿಟ್​​ ಕಾಯಿನ್ ಪ್ರಕರಣವನ್ನ ಅಸ್ತ್ರ ಮಾಡಿಕೊಂಡಿತ್ತು. ಬಿಜೆಪಿ ವಿರುದ್ಧ ಸರಣಿ ಆರೋಪ ಮಾಡುತ್ತಿತ್ತು. ಈ ಆರೋಪದ ಸತ್ಯ ಶೋಧನೆಗೆ ಎಂದು 2023ರ ಜುಲೈನಲ್ಲಿ ಕಾಂಗ್ರೆಸ್ ಸರ್ಕಾರ, SIT ರಚನೆ ಮಾಡಿತ್ತು. ಆಗ ಕಾಟನ್ ಪೇಟೆ ಠಾಣೆಯಲ್ಲಿ ಒಂದು ಕೇಸ್ ದಾಖಲು ಮಾಡಿದ್ದರು.

ಇದನ್ನೂ ಓದಿ: ಬಿಟ್​ ಕಾಯಿನ್​ ಪ್ರಕರಣ: ಪೊಲೀಸರನ್ನೇ ವಶಕ್ಕೆ ಪಡೆದ ಎಸ್​ಐಟಿ

ಆರೋಪಿಗಳ ಹೆಸರು ಪ್ರಸ್ತಾಪಿಸದೇ ತನಿಖೆ ಶುರುಮಾಡಿತ್ತು. ಇತ್ತೀಚೆಗೆ ಮತ್ತೊಂದು FIR ದಾಖಲು ಮಾಡಲಾಗಿತ್ತು. ಇಷ್ಟೇ ಅಲ್ಲ, ಪ್ರಕರಣದಲ್ಲಿ ಸಂತೋಷ್ ಮತ್ತು ಪ್ರಶಾಂತ್ ಬಾಬುರನ್ನು ಬಂಧಿಸಲಾಗಿತ್ತು. ಇಬ್ಬರನ್ನ ಜನವರಿ 31 ರ ತನಕ SIT ತಮ್ಮ ವಶಕ್ಕೆ ಪಡೆದಿತ್ತು.

ಈ ಹಿಂದೆ, SIT ಅಧಿಕಾರಿಗಳು, ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇವಾಲ ಸೇರಿ 10 ಜನರನ್ನು ವಿಚಾರಣೆ ಮಾಡಿದ್ದರು. ಜೊತೆಗೆ ಪೊಲೀಸ್ ಅಧಿಕಾರಿಗಳಾದ DSP ಶ್ರೀಧರ್ ಪೂಜಾರ್, ಇನ್ಸ್​​​ಪೆಕ್ಟರ್ ಪ್ರಶಾಂತ್ ಬಾಬು, ಚಂದ್ರಾದರ್, ಲಕ್ಷ್ಮೀಕಾಂತಯ್ಯ, ಸೈಬರ್ ಎಕ್ಸಪರ್ಟ್ ಸಂತೋಸ್ ವಿರುದ್ಧ ಕೇಸ್ ದಾಖಲು ಮಾಡಿತ್ತು. ಹಂತ ಹಂತವಾಗಿ 8 ಕೇಸ್​​ ಮಾಡಿದ್ದರು.

ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ,ವಿಚಾರಣೆಗೆ ಬಂದಿದ್ದ ಎಲ್ಲರೂ ಎಸ್​ಐಟಿ ವಶಕ್ಕೆ

ಬಂಧಿತ ಆರೋಪಿಗಳು ಬಿಟ್ ಕಾಯಿನ್ ವರ್ಗಾವಣೆ ಮಾಡಿ ಅಕ್ರಮ ಎಸಗಿದ್ದಾರೆ ಅನ್ನೋದು ಗೊತ್ತಾಗಿದೆ. ಜೊತೆಗೆ ಲ್ಯಾಪ್​ಟಾಪ್​ನಲ್ಲಿ ಟೂಲ್ಸ್ ಬಳಸಿ ನಾಶ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. 6 ತಿಂಗಳಲ್ಲಿ ಕೇವಲ 1 ಲಕ್ಷದ 83 ಸಾವಿರ ರೂ. ಮೌಲ್ಯದ ಬಿಟ್ ಕಾಯಿನ್ ಮಾತ್ರ ಪತ್ತೆ ಮಾಡಿದೆ. ಈ ನಡುವೆ, ರಾಜಕೀಯ ಪ್ರೇರಿತವಾಗಿ ಪೊಲೀಸ್ ಅಧಿಕಾರಿಗಳನ್ನ ಬಂಧಿಸಲಾಗಿದೆ ಎನ್ನುವ ಚರ್ಚೆ ಶುರುವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.