ಶಾಲೆಗಳಲ್ಲಿ ಯೋಗ, ಧ್ಯಾನ; ಬಿಜೆಪಿಯ ಆದೇಶವನ್ನು ತಳ್ಳಿ ಹಾಕಿದ ಕಾಂಗ್ರೆಸ್, ಸರ್ಕಾರದ ವಿರುದ್ದು ಹಿಂದೂ ಸಂಘಟನೆಗಳ ಆಕ್ರೋಶ
ಈ ಹಿಂದೆ ಬಿಜೆಪಿ ಸರ್ಕಾರ ಶಾಲೆಗಳಲ್ಲಿ 10 ನಿಮಿಷ ಮಕ್ಕಳು ಧ್ಯಾನ ಮಾಡ್ಬೇಕೆಂದು ಅದೇಶ ನೀಡಿತ್ತು. ಆದ್ರೀಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರ್ತಿದ್ದಂತೆ, ಈ ಆದೇಶವನ್ನು ಇಂಪ್ಲಿಮೆಂಟ್ ಮಾಡದೆ ಸುಮ್ಮನಿದೆ.
ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಹಾಗೂ ಯೋಗ(Yoga and Meditation) ಮಾಡಿಸುವ ಬಗ್ಗೆ ಮತ್ತೆ ದಂಗಲ್ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣ್ತಿವೆ. ಈ ಹಿಂದೆ ಇದ್ದ ಬಿಜೆಪಿ(BJP) ಸರ್ಕಾರ ಶಾಲೆಗಳಲ್ಲಿ 10 ನಿಮಿಷ ಮಕ್ಕಳು ಧ್ಯಾನ ಮಾಡ್ಬೇಕೆಂದು ಅದೇಶ ನೀಡಿತ್ತು. ಆದ್ರೀಗ ಕಾಂಗ್ರೆಸ್(Congress) ಸರ್ಕಾರ ಆಡಳಿತಕ್ಕೆ ಬರ್ತಿದ್ದಂತೆ, ಈ ಒಂದು ಆದೇಶವನ್ನು ಇಂಪ್ಲಿಮೆಂಟ್ ಮಾಡದೆ ಸುಮ್ಮನಿದೆ. ಇದು ಕೇಸರಿ ನಾಯಕರನ್ನ ಕೆರಳಿಸಿದೆ.
ಕಾಂಗ್ರೆಸ್ ಸರ್ಕಾರ ವಿರುದ್ಧ ಮಾಜಿ ಸಚಿವರು, ಹಿಂದೂಪರ ಸಂಘಟನೆಗಳು ಆಕ್ರೋಶ
ಹಿಂದಿನ ಬಿಜೆಪಿ ಸರ್ಕಾರದ ಶಿಕ್ಷಣ ಸಚಿವರಾಗಿದ್ದ ಬಿ.ಸಿ ನಾಗೇಶ್ ಅವರು ಶಾಲೆಯ ಮಕ್ಕಳ ಆರೋಗ್ಯ, ಏಕಾಗ್ರತೆ ದೃಷ್ಟಿಯಿಂದ ಶಾಲೆ ಆರಂಭಕ್ಕೂ ಮುಂಚೆ 10 ನಿಮಿಷಗಳ ಕಾಲ ಯೋಗ ಹಾಗೂ ಧ್ಯಾನವನ್ನು ಪ್ರಸಕ್ತ ವರ್ಷದಿಂದ ಜಾರಿಗೆ ತರಬೇಕೆಂದು ಸುತ್ತೋಲೆ ನೀಡಿದ್ರು. ಈ ಕುರಿತು ನಾಡಿನ ವಿವಿಧ ಸರ್ವ ಧರ್ಮಗಳ ಸ್ವಾಮೀಜಿ ಹಾಗೂ ತಜ್ಞರ ಅಭಿಪ್ರಾಯ ಪಡೆದುಕೊಂಡು ಜಾರಿಗೆಗೊಳಿಸಿದ್ರು. ಆದ್ರೀಗ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಒಂದು ಸುತ್ತೋಲೆಯನ್ನ ಕಾಂಗ್ರೆಸ್ ಇಂಪ್ಲಿಮೆಂಟ್ ಮಾಡದೆ ಸೈಲೆಂಟ್ ಆಗಿದ್ದು, ಕೇಸರಿ ನಾಯಕರು ಹಾಗೂ ಮಾಜಿ ಶಿಕ್ಷಣ ಸಚಿವರ ಕಣ್ಣು ಕೆಂಪಾಗಿಸಿದೆ.
ಶಾಲೆಗಳು ಆರಂಭವಾಗಿ ಒಂದು ತಿಂಗಳು ಕಳಿತ ಬಂದಿದೆ. ಯೋಗ, ಧ್ಯಾನ ಬಗ್ಗೆ ಈಗಿನ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಸಂಪರ್ಕ ಮಾಡಿದ್ರೆ ಕಳೆದ ಎರಡು ದಿನಗಳಿಂದ ಕೈಗೆ ಸಿಗ್ತಿಲ್ಲ. ಹೀಗಾಗಿ ಬಿಜೆಪಿ ನಾಯಕರು ಹಾಗೂ ಹಿಂದೂಪರ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿವೆ. ಧ್ಯಾನ ಹಾಗೂ ಯೋಗ ಮಕ್ಕಳ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು ಇಡೀ ಜಗತ್ತೇ ಯೋಗ, ಧ್ಯಾನವನ್ನ ಒಪ್ಪಿಕೊಂಡಿದೆ. ಧ್ಯಾನದಲ್ಲಿ ಯೋಗದಲ್ಲಿ ಯಾವುದೇ ರಾಜಕೀಯ ಮಾಡದಂತೆ ಧ್ಯಾನವನ್ನ ಶಾಲೆಗಳಲ್ಲಿ ಅಳಡಿಸುವಂತೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಶಾಲೆಯಲ್ಲಿ ಮಕ್ಕಳಿಂದ ಕುರಾನ್, ನಮಾಜ್ ಮಾಡಿದ ಆರೋಪ; ಇನ್ಮುಂದೆ ಹೀಗೆ ಮಾಡಲ್ಲ ಎಂದು ಕ್ಷಮೆ ಕೇಳಿದ ಆಡಳಿ ಮಂಡಳಿ
ಇನ್ನೂ ಈ ಬಗ್ಗೆ ಮಾತನಾಡಿರುವ ಹಿಂದೂ ಜನಜಾಗೃತಿಯ ಸಮಿತಿಯ ಅಧ್ಯಕ್ಷ ಮೋಹನ್ ಗೌಡ, ಶಾಲೆಯ ಮಕ್ಕಳಿಗೆ ಆರೋಗ್ಯ, ಏಕಾಗ್ರತೆ ಉತ್ತಮವಾಗಿರಬೇಕು. ಹೀಗಾಗಿ ಯೋಗ, ಧ್ಯಾನ ಮಾಡುವ ಮುಖಾಂತರ ಅವರಿಗೆ ಒಳ್ಳೆಯ ರೀತಿ ಅನುಕೂಲವಾಗಲಿದೆ. ಆದರೆ ಈಗಿನ ಸರ್ಕಾರ ಇದನ್ನು ಮಾಡ್ತಿಲ್ಲ. ಯೋಗ, ಧ್ಯಾನ ಶಾಲೆಗಳಲ್ಲಿ ಕಡ್ಡಾಯ ಮಾಡಬೇಕು. ಇಲ್ಲವಾದರೆ ಹೋರಾಟ ಮಾಡುವ ಎಚ್ಚರಿಕೆಯನ್ನ ಮೋಹನ್ ಗೌಡ ಶಿಕ್ಷಣ ಇಲಾಖೆಗೆ ಕೊಟ್ಟಿದ್ದಾರೆ.
ಒಟ್ನಲ್ಲಿ ಬಿಜೆಪಿ ಸರ್ಕಾರದಲ್ಲಿ ಯೋಗ, ಧ್ಯಾನ ವಿಚಾರವಾಗಿ ಆದ ಗಲಾಟೆ ಮತ್ತೆ ಕಾಂಗ್ರೆಸ್ ಸರ್ಕಾರದಲ್ಲಿ ಕೇಳಿ ಬಂದಿದೆ. ಇತ್ತ ಕೇಸರಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಯೋಗ, ಧ್ಯಾನ ಆದೇಶ ಕಾರ್ಯರೂಪಕ್ಕೆ ತನ್ನಿ ಎಂದು ಎಚ್ಚರಿಕೆ ನೀಡಿದ್ದಾರೆ. ಆದ್ರೆ ಶಿಕ್ಷಣ ಸಚಿವರು ಮಾತ್ರ ಯಾವುದೇ ಪ್ರತಿಕ್ರಿಯೇ ನೀಡ್ತಿಲ್ಲ. ಮಾಧ್ಯಮಗಳ ಕೈಗೂ ಸಿಗ್ತಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕಾದು ನೋಡ್ಬೇಕಾಗಿದೆ.
ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ