ಕಾರ್ಯಕರ್ತರಿಗೆ ಬೆದರಿಕೆ, ಕಿರುಕುಳ ಆರೋಪ: ಡಿಜಿ&ಐಜಿಪಿ ಅಲೋಕ್ ಮೋಹನ್‌ ಭೇಟಿ ಮಾಡಿದ ಬಿಜೆಪಿ ನಿಯೋಗ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 06, 2023 | 7:14 PM

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ವಿಚಾರಣೆ, ಬೆದರಿಕೆ, ಕಿರುಕುಳ ಆರೋಪ ಕೇಳಿಬಂದಿದ್ದು, ಹಾಗಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ನೇತೃತ್ವದಲ್ಲಿ ಬುಧವಾರ ಡಿಜಿ&ಐಜಿಪಿ ಅಲೋಕ್ ಮೋಹನ್​ರನ್ನು ಭೇಟಿ ಮಾಡಲಾಗಿದೆ. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗೈರಾಗಿದ್ದರು.

ಕಾರ್ಯಕರ್ತರಿಗೆ ಬೆದರಿಕೆ, ಕಿರುಕುಳ ಆರೋಪ: ಡಿಜಿ&ಐಜಿಪಿ ಅಲೋಕ್ ಮೋಹನ್‌ ಭೇಟಿ ಮಾಡಿದ ಬಿಜೆಪಿ ನಿಯೋಗ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಸೆಪ್ಟೆಂಬರ್​​ 6: ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಿಜೆಪಿ (BJP) ಕಾರ್ಯಕರ್ತರಿಗೆ ಪೊಲೀಸ್ ವಿಚಾರಣೆ, ಬೆದರಿಕೆ, ಕಿರುಕುಳ ಆರೋಪ ಕೇಳಿಬಂದಿದ್ದು, ಹಾಗಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ನೇತೃತ್ವದಲ್ಲಿ ಡಿಜಿ&ಐಜಿಪಿ ಅಲೋಕ್ ಮೋಹನ್​ರನ್ನು ಬುಧವಾರ ಭೇಟಿ ಮಾಡಲಾಗಿದೆ. ಶಾಸಕ ರವಿ ಸುಬ್ರಮಣ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಬಿಜೆಪಿ ಕಾನೂನು ಪ್ರಕೋಷ್ಠದ ಮುಖಂಡ ವಿವೇಕ್ ರೆಡ್ಡಿ ಉಪಸ್ಥಿತರಿದ್ದು, ನಿಯೋಗದ ಭೇಟಿ ವೇಳೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗೈರಾಗಿದ್ದಾರೆ.

ಕಾರ್ಯಕರ್ತರನ್ನು ಅನಗತ್ಯ ವಿಚಾರಣೆ ಮಾಡುವುದನ್ನು ನಿಲ್ಲಿಸಬೇಕು: ಎನ್. ರವಿಕುಮಾರ್

ನಗದರಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್​ ಮಾತನಾಡಿ, ಬಿಜೆಪಿ ಕಾರ್ಯಕರ್ತರಾಗಿರುವ ಸೋಷಿಯಲ್ ಮೀಡಿಯಾ ಆಕ್ಟಿವಿಸ್ಟ್​ಗಳ ಮನೆಗೆ ಹೋಗಿ ಎಫ್​ಐಆರ್ ಮಾಡದೇ ಎರಡು ದಿನಗಳ ಕಾಲ ಕೂರಿಸಿಕೊಂಡಿದ್ದಾರೆ. ಪೊಲೀಸ್ ದೌರ್ಜನ್ಯದ ಮೂಲಕ ಕಾರ್ಯಕರ್ತರನ್ನು ಹೆದರಿಸಲಾಗುತ್ತಿದೆ.

ಇದನ್ನೂ ಓದಿ: ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್​ ಭೇಟಿ: ಹೇಳಿದ್ದಿಷ್ಟು

ಪೊಲೀಸ್ ಅಧಿಕಾರಿಗಳು ಕಾನೂನಾತ್ಮಕ ಕರ್ತವ್ಯ ಮಾಡಲಿ. ಕಾರ್ಯಕರ್ತರನ್ನು ಅನಗತ್ಯ ವಿಚಾರಣೆ ಮಾಡುವುದನ್ನು ಬಂದ್ ಮಾಡಬೇಕು. ಏನೇ ಇದ್ದರೂ ನೋಟೀಸ್ ಕೊಡಿ, ಪಕ್ಷ ಉತ್ತರ ಕೊಡುತ್ತದೆ. ಬಿಜೆಪಿ ಕಾರ್ಯಕರ್ತರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಪಯೋಗಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿ ಹೋರಾಟದ ಹಂತಕ್ಕೆ ಹೋಗಲು ಅವಕಾಶ ಕೊಡಬೇಡಿ: ಶಾಸಕ ರವಿ ಸುಬ್ರಮಣ್ಯ

ಬಿಜೆಪಿ ಶಾಸಕ ರವಿ ಸುಬ್ರಮಣ್ಯ ಪ್ರತಿಕ್ರಿಯಿಸಿದ್ದು, ಸರ್ಕಾರದ ಒತ್ತಡಕ್ಕೆ ಮಣಿದು ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗುತ್ತಿದೆ. ಭಯೋತ್ಪಾದಕರ ರೀತಿಯಲ್ಲಿ ಕಾರ್ಯಕರ್ತರನ್ನು ನೋಡಲಾಗುತ್ತಿದೆ. ನಮ್ಮವರು ತಪ್ಪು ಮಾಡಿದ್ದರೆ ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬಹುದು. ಆದರೆ ಯಾವುದೇ ನೋಟೀಸ್ ಇಲ್ಲದೇ ಹೆಣ್ಣು ಮಕ್ಕಳು ಅಂತಾ ನೋಡದೇ ಕರೆದುಕೊಂಡು ಬರುತ್ತಿರುವುದು ತಪ್ಪು. ಪೊಲೀಸರನ್ನು ಇಟ್ಟುಕೊಂಡು ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವುದು ತಪ್ಪು. ಬಿಜೆಪಿ ಹೋರಾಟದ ಹಂತಕ್ಕೆ ಹೋಗಲು ಅವಕಾಶ ಕೊಡಬೇಡಿ ಎಂದು ಹೇಳಿದ್ದಾರೆ.

ಸಿಸಿಬಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ: ಭಾಸ್ಕರ್ ರಾವ್

ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿಕೆ ನೀಡಿದ್ದು, ಸಿಸಿಬಿಯನ್ನು ದುರುಪಯೋಗ ಮಾಡಿ ಸಣ್ಣ ಪುಟ್ಟ ಕೇಸ್​ಗಳನ್ನು ಅವರಿಂದ ತನಿಖೆ ಮಾಡಿಸಲಾಗುತ್ತಿದೆ. ಸಿಸಿಬಿ, ಸಿಐಡಿ ಮಾಡಿರುವುದು ಸೂಕ್ಷ್ಮ ಕೇಸ್ ಗಳಿಗಾಗಿ ಅಧಿಕಾರ ಇದೆ ಎಂದು ತೋರಿಸಿಕೊಳ್ಳಲು ಈ ರೀತಿ ಮಾಡಲಾಗುತ್ತದೆ. ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕಲಾಗುತ್ತಿದೆ. ಎನ್​ಸಿಆರ್ ಕೇಸ್​​ಗಳನ್ನು ಟಾಡಾ, ದೇಶ ವಿರೋಧಿ ಕೇಸ್​ಗಳಂತೆ ಬಿಂಬಿಸಲಾಗುತ್ತಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:13 pm, Wed, 6 September 23