ಕಾಂಗ್ರೆಸ್ ಆಡಳಿತದಲ್ಲಿ ಇದೇ‌ನು ಹೊಸದಲ್ಲ: ರಾಜಸ್ಥಾನದಲ್ಲಿ ಹತ್ಯೆ ಖಂಡಿಸಿ ‘ಭಯೋತ್ಪಾದಕ ಕಾಂಗ್ರೆಸ್‘ ಎಂದು ವಾಗ್ದಾಳಿ ನಡೆಸಿದ ಕರ್ನಾಟಕ ಬಿಜೆಪಿ

| Updated By: ಆಯೇಷಾ ಬಾನು

Updated on: Jun 28, 2022 | 11:03 PM

ಕಾಂಗ್ರೆಸ್ ಆಡಳಿತದಲ್ಲಿ ಇದೇ‌ನು ಹೊಸದಲ್ಲ. ಕರ್ನಾಟಕದಲ್ಲಿ ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪರೇಶ್ ಮೇಸ್ತಾ, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ರುದ್ರೇಶ್ ಅವರಂತಹ ಹಿಂದೂ ಕಾರ್ಯಕರ್ತರ ಕೊಲೆ ನಡೆದಿತ್ತು.

ಕಾಂಗ್ರೆಸ್ ಆಡಳಿತದಲ್ಲಿ ಇದೇ‌ನು ಹೊಸದಲ್ಲ: ರಾಜಸ್ಥಾನದಲ್ಲಿ ಹತ್ಯೆ ಖಂಡಿಸಿ ‘ಭಯೋತ್ಪಾದಕ ಕಾಂಗ್ರೆಸ್‘ ಎಂದು ವಾಗ್ದಾಳಿ ನಡೆಸಿದ ಕರ್ನಾಟಕ ಬಿಜೆಪಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನೂಪುರ್ ಶರ್ಮಾ(Nupur Sharma) ಬೆಂಬಲಿಸಿದಕ್ಕೆ ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬನ ಬರ್ಬರ ಕೊಲೆಯಾಗಿದೆ. ಹಂತಕರು ಕೊಲೆ ಮಾಡಿ ವಿಡಿಯೋವೊಂದನ್ನ ರಿಲೀಸ್ ಮಾಡಿದ್ದಾರೆ. ವಿಡಿಯೋದಲ್ಲಿ ಮಾರಕಾಸ್ತ್ರ ತೋರಿಸಿ ಪ್ರಧಾನಿ ಮೋದಿಗೇ(Narendra Modi) ಕೊಲೆ ಬೆದರಿಕೆ ಹಾಕಿದ್ದಾರೆ. ಸದ್ಯ ರಾಜಸ್ಥಾನದ ಘಟನೆ ಸಂಬಂಧ ಕರ್ನಾಟಕ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಆಡಳಿತದಲ್ಲಿ ಇದೇ‌ನು ಹೊಸದಲ್ಲ. ಕರ್ನಾಟಕದಲ್ಲಿ ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪರೇಶ್ ಮೇಸ್ತಾ, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ರುದ್ರೇಶ್ ಅವರಂತಹ ಹಿಂದೂ ಕಾರ್ಯಕರ್ತರ ಕೊಲೆ ನಡೆದಿತ್ತು. ಇವೆಲ್ಲ ಕಾಂಗ್ರೆಸ್ ಪಕ್ಷದ ಅತಿಯಾದ ತುಷ್ಟಿಕರಣದ ನೇರ ಪ್ರಭಾವದಿಂದ ಆಗಿರುವ ದಾರುಣ ಹತ್ಯೆಗಳು. ‘ಭಯೋತ್ಪಾದಕ ಕಾಂಗ್ರೆಸ್‘ ಎಂದು ಬರೆದು ಸರಣಿ ಟ್ವೀಟ್ ಮಾಡಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಶಾಂತಿ ವ್ಯವಸ್ಥೆ ಕುಂಠಿತಗೊಳ್ಳುತ್ತದೆ ಎನ್ನುವುದಕ್ಕೆ ರಾಜಸ್ಥಾನ ಉದಾಹರಣೆಯಾಗಿದೆ. ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಅತಿಯಾದ ಮುಸ್ಲಿಂ ಓಲೈಕೆಯ ಫಲವಾಗಿ ಮತಾಂಧರು ಇಂದು ಕನ್ಹಯ್ಯ ಲಾಲ್ ಎಂಬ ಹಿಂದೂ ಯುವಕನನ್ನು ಬರ್ಬರವಾಗಿ ಹತ್ಯೆ ಗೈದಿದ್ದಾರೆ. ಹಿಂದೂ‌ ಅಸ್ಮಿತೆಗಳ ಬಗ್ಗೆ ಕುಹಕವಾಡಿರುವ ಪತ್ರಕರ್ತನ ಬಂಧನವನ್ನು ಖಂಡಿಸುವ ಸಿದ್ದರಾಮಯ್ಯ ಈಗ ಮೌನಿ ಬಾಬಾ ಆಗಿದ್ದಾರೆ. ರಾಜಸ್ಥಾನದಲ್ಲಿ ನಡೆದ ಕೊಲೆಯನ್ನು ಮತಾಂಧರು ನಡೆಸಿದ್ದಾರೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ತಿಳಿದಿದೆ, ಅದಕ್ಕಾಗಿಯೇ ಈ‌ ಮೌನ ಅಲ್ಲವೇ? ಇದನ್ನೂ ಓದಿ:ರಾಜಸ್ಥಾನ: ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ್ದಕ್ಕೆ ಶಿರಚ್ಛೇದನ ಮಾಡಿದ್ದ ಹಂತಕರಿಬ್ಬರು ಅರೆಸ್ಟ್ ಆದರು 

ಹತ್ಯೆ, ನರಮೇಧಗಳು‌ ನಡೆದಾಗ ಕಾಂಗ್ರೆಸ್ ಪಕ್ಷದ ಅನುಕಂಪ‌ದ ರಾಜಕಾರಣ ಸೆಲೆಕ್ಟಿವ್ ಆಗಿರುತ್ತದೆ. ನೆತ್ತರಿನಲ್ಲೂ ಧರ್ಮ ಹುಡುಕುವ ಏಕೈಕ ಪಕ್ಷವೆಂದರೆ ಅದು, ಕಾಂಗ್ರೆಸ್ ಎಂದು ಟ್ವೀಟ್ ಮಾಡಿ ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದೆ.

ಅಲ್ಲದೆ ಕಿರಾತಕರ ವಿರುದ್ಧ ಹಿಂದೂಪರ ಸಂಘಟನೆಗಳು ಸಿಡಿದೆದ್ದಿದ್ದು, ಕೂಡಲೇ ಬಂಧಿಸ್ಬೇಕು ಗಲ್ಲಿಗೆ ಏರಿಸ್ಬೇಕು ಅಂತಾ ಆಗ್ರಹಿಸಿವೆ. ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗ್ಬೇಕು ಅಂತಾ ಆಗ್ರಹಿಸಿದ್ದಾರೆ.

Published On - 10:07 pm, Tue, 28 June 22