AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಮುಖಂಡ ತಮ್ಮೇಶ್​ ಗೌಡ ವಿರುದ್ಧ ಕಳ್ಳತನ ಜೊತೆಗೆ ಬೆದರಿಕೆ, ಧಮ್ಕಿ ಹಾಕಿದ ಆರೋಪ; ದೂರು ದಾಖಲು

ಬಿಜೆಪಿ ಮುಖಂಡ, ಬೆಂಗಳೂರಿನ ಬ್ಯಾಟರಾಯನಪುರ ಪರಾಜಿತ ಅಭ್ಯರ್ಥಿಯಾಗಿರುವ ತಮ್ಮೇಶ್​ ಗೌಡ ವಿರುದ್ಧ ಕಳ್ಳತನ ಜೊತೆಗೆ ಬೆದರಿಕೆ, ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ. ಗುತ್ತಿಗೆದಾರ ದಯಾನಂದ್ ಕುಮಾರ್​ ಎಂಬುವವರು ಅಮೃತಹಳ್ಳಿ ಪೊಲೀಸ್​ ಠಾಣೆಯಲ್ಲಿ ತಮ್ಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.

ಬಿಜೆಪಿ ಮುಖಂಡ ತಮ್ಮೇಶ್​ ಗೌಡ  ವಿರುದ್ಧ ಕಳ್ಳತನ ಜೊತೆಗೆ ಬೆದರಿಕೆ, ಧಮ್ಕಿ ಹಾಕಿದ ಆರೋಪ; ದೂರು ದಾಖಲು
ತಮ್ಮೇಶ್​ ಗೌಡ
TV9 Web
| Updated By: ಆಯೇಷಾ ಬಾನು|

Updated on: Dec 20, 2023 | 8:11 AM

Share

ಬೆಂಗಳೂರು, ಡಿ.20: ಬಿಜೆಪಿ ಮುಖಂಡ, ಬೆಂಗಳೂರಿನ ಬ್ಯಾಟರಾಯನಪುರ ಪರಾಜಿತ ಅಭ್ಯರ್ಥಿಯಾಗಿರುವ ತಮ್ಮೇಶ್​ ಗೌಡ (Thammesh Gowda) ವಿರುದ್ಧ ಕಳ್ಳತನ ಜೊತೆಗೆ ಬೆದರಿಕೆ, ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ. ತಮ್ಮೇಶ್​ ವಿರುದ್ಧ ಈ ಹಿಂದೆ ಕಳ್ಳತನ ಆರೋಪ ಕೇಳಿ ಬಂದಿತ್ತು. ಇದೀಗ ಬೆದರಿಕೆ, ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ. ಗುತ್ತಿಗೆದಾರ ದಯಾನಂದ್ ಕುಮಾರ್​ ಎಂಬುವವರು ಅಮೃತಹಳ್ಳಿ ಪೊಲೀಸ್​ ಠಾಣೆಯಲ್ಲಿ (Amruthahalli Police Station) ತಮ್ಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಸೈಟ್​ ವಿಚಾರವಾಗಿ ಫೋನ್​ ಮೂಲಕ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದಾರೆ.

ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ ಅಶ್ವಿನ್​​​ ಎಂಬುವವರ ಸೈಟ್ ಇದೆ. ಆ ಸೈಟ್​ ಸುತ್ತಾಮುತ್ತ ಕಾಂಪೌಂಡ್​ ನಿರ್ಮಿಸಲು ದಯಾನಂದ್​ಗೆ ಅಶ್ವಿನ್ ಕಾಂಟ್ರಾಕ್ಟ್​ ನೀಡಿದ್ದರು. ಡಿಸೆಂಬರ್ 18 ರಂದು 12 ಗಂಟಗೆ ಸೈಟ್ ಬಳಿಗೆ ಸತೀಶ್, ಚಂದ್ರಪ್ಪ ಮತ್ತು ಸಹಚರರು ಆಗಮಿಸಿ ಇದು ನಮಗೆ ಸೇರಿದ ಸೈಟ್ ಕಾಂಪೌಂಡ್ ಹಾಕಬೇಡಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪ ಮಾಡಿದ್ದಾರೆ. ಇನ್ನು ಬೆದರಿಕೆ ಹಾಕುತ್ತಿದ್ದಂತೆ ಮುಂದೆ ಬಂದ ದಯಾನಂದ್ ಅವರು ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನೀವು ಮಾಲೀಕ ಅಶ್ವಿನ್ ಜೊತೆಗೆ ಮಾತನಾಡಿಕೊಳ್ಳಿ ಎಂದು ಹೇಳಿದ್ದಾರೆ. ಆಗ ಸತೀಶ್ ಎಂಬಾತ ಪರಾಜಿತ ಅಭ್ಯರ್ಥಿ ತಮ್ಮೇಶ್ ಗೌಡ ಮನೆಗೆ ಆಗಮಿಸುವಂತೆ ಹೇಳಿದ್ದಾನೆ. ಆದರೆ ದಯನಂದ್ ಅವರು ಮನೆಗೆ ಹೋಗಿ ಮಾತುಕತೆ ಮಾಡುವುದನ್ನು ನಿರಾಕರಿಸಿದ್ರು. ಈ ವೇಳೆ ದಯಾನಂದ್ ಗೆ ತಮ್ಮೇಶ್ ಗೌಡ ಕರೆ ಮಾಡಿ ಕಾಂಪೌಂಡ್ ಕೆಲಸವನ್ನು ನಿಲ್ಲಿಸಿ ವಾಪಸ್ಸು ಹೋಗುವಂತೆ ಬೆದರಿಕೆ ಹಾಕಿದ್ದಾರೆ. ಎಚ್ಚರಿಕೆ ನಂತರವೂ ಕಾಂಪೌಂಡ್ ನಿರ್ಮಿಸಿದರೆ ಆ ಕಾಂಪೌಂಡನ್ನೇ ಕೆಡವುದಾಗಿ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಘಟನೆ ಸಂಬಂಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Byatarayanapura Election Results: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡಗೆ ಗೆಲುವು

ರೆಡ್​ಹ್ಯಾಂಡ್ ಆಗಿ ಲಾಕ್ ಆದ ಅಧಿಕಾರಿಗಳು

ಎಇಇ ಬಿ.ಮಂಜುನಾಥ, ಜೆಇ ಪ್ರಕಾಶ್ ಹೊಸಮನಿ ಮೊದಲು ಫೋನ್​ಪೇ ಮೂಲಕ 83 ಸಾವಿರ ರೂಪಾಯಿ ಲಂಚ ಪಡೆದಿದ್ದಾರೆ. ನಂತ್ರ 2ನೇ ಬಿಲ್​ಗೆ 50 ಸಾವಿರ ರೂಪಾಯಿ ಮತ್ತು ಫೈನಲ್ ಬಿಲ್​ಗೆ 1ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ರು. ಗುತ್ತಿಗೆದಾರ ಬಾಲಕೃಷ್ಣ ನಾಯ್ಕರಿಂದ ನಿನ್ನೆ ಎಇಇ, ಜೆಇ ತಲಾ 50 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ದಾಳಿ ನಡೆಸಿತ್ತು. ಲೋಕಾಯುಕ್ತ DySP ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಲಾಯ್ತು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ