ಬೆಂಗಳೂರು: ಕರ್ನಾಟಕದ ಜನರಿಂದ ದೀಪಾವಳಿ ಆಚರಣೆ ಬದಲು ಪುನೀತ್ ರಾಜ್ಕುಮಾರ್ ಸಮಾಧಿ ದರ್ಶನ ಮಾಡಲಾಗಿದೆ. ಜನರು ಈಗಲೂ ಸಾಗರೋಪಾದಿಯಲ್ಲಿ ಬಂದು ಪುನೀತ್ ಸಮಾಧಿ ದರ್ಶನ ಪಡೆಯುತ್ತಿದ್ದಾರೆ ಎಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ನಟ ಪುನೀತ್ ಮನೆ ಬಳಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಇಂದು (ನವೆಂಬರ್ 7) ಹೇಳಿಕೆ ನೀಡಿದ್ದಾರೆ.
ಪುನೀತ್ ರಾಜ್ಕುಮಾರ್ ಪ್ರಚಾರವಿಲ್ಲದೆ ಸೇವೆ ಮಾಡಿದ್ದಾರೆ. ನಾನು ಶಕ್ತಿಧಾಮಕ್ಕೆ ನೆರವು ನೀಡುವ ಬಗ್ಗೆ ಅಶ್ವಿನಿ ಜತೆ ಮಾತಾಡಿದ್ದೇನೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ನುಡಿನಮನ ಆಯೋಜಿಸಿರುವೆ. ಗಾಯಕ ರಾಜೇಶ್ ಕೃಷ್ಣನ್ರಿಂದ ನುಡಿನಮನ ಕಾರ್ಯಕ್ರಮ ನಡೆಯಲಿದೆ. 10 ಸಾವಿರ ಜನರು ಸೇರಿ ಪುನೀತ್ಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ನೇತ್ರದಾನ ಬಗ್ಗೆ ನಮ್ಮ ಕುಟುಂಬಸ್ಥರು ಅಭಿಯಾನ ಮಾಡುತ್ತೇವೆ. ಪುನೀತ್ಗೆ ಪದ್ಮಶ್ರೀ, ಡಾ. ರಾಜ್ಕುಮಾರ್ಗೆ ಭಾರತ ರತ್ನ ಗೌರವ ನೀಡಬೇಕು. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.
ಪುನೀತ್ ಸಮಾಧಿ ಬಳಿ ಬಂದು ಹಾಡು ಹೇಳಿದ ಮಕ್ಕಳು
ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದವರು ಪುನೀತ್ ರಾಜ್ಕುಮಾರ್. ಹೃದಯಾಘಾತದಿಂದ ಸಡನ್ ಆಗಿ ಅವರು ಇಹಲೋಕ ತ್ಯಜಿಸಿದ ಬಳಿಕ ಅಪಾರ ಸಂಖ್ಯೆಯ ಅಭಿಮಾನಿ ಬಳಗಕ್ಕೆ ತೀವ್ರ ನೋವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಚಿಕ್ಕ ಮಕ್ಕಳು ಸಂಕಟಪಡುತ್ತಿದ್ದಾರೆ. ಪುನೀತ್ ಅವರ ಸಿನಿಮಾಗಳನ್ನು ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಡುತ್ತಿದ್ದರು. ಮಕ್ಕಳು ಕೂಡ ಅಪ್ಪು ಅಭಿನಯವನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಆದರೆ ಈಗ ಪುನೀತ್ ಇಲ್ಲ ಎಂಬ ಕಹಿ ಸತ್ಯದಿಂದ ಪುಟಾಣಿಗಳಿಗೆ ನೋವಾಗಿದೆ.
ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುನೀತ್ ರಾಜ್ಕುಮಾರ್ ಸಮಾಧಿಗೆ ಪ್ರತಿ ದಿನ ಭಾರಿ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಪೋಷಕರ ಜೊತೆ ಮಕ್ಕಳು ಕೂಡ ಸರದಿ ಸಾಲಿನಲ್ಲಿ ಬಂದು ಅಪ್ಪು ಸಮಾಧಿಗೆ ನಮಿಸುತ್ತಿದ್ದಾರೆ. ಸಮಾಧಿ ಎದುರು ಪುನೀತ್ ಸಿನಿಮಾಗಳ ಹಾಡುಗಳನ್ನು ಹೇಳಿ ನಮನ ಸಲ್ಲಿಸಲಾಗುತ್ತಿದೆ. ಇಷ್ಟೆಲ್ಲ ಜನರ ಪ್ರೀತಿ ಗಳಿಸಿದ್ದ ಪುನೀತ್ ಅವರು ಅಕಾಲಿಕ ಮರಣ ಹೊಂದಿದ್ದನ್ನು ಸಹಿಸುವುದಾದರೂ ಹೇಗೆ?
ಇದನ್ನೂ ಓದಿ: ಪುನೀತ್ ಸಮಾಧಿ ಬಳಿ ಬಂದು ಹಾಡು ಹೇಳಿದ ಮಕ್ಕಳು; ಪುಟ್ಟ ಹೃದಯಗಳಿಗೆ ಅಪ್ಪು ಎಂದರೆ ಪಂಚಪ್ರಾಣ
Published On - 4:34 pm, Sun, 7 November 21