ನವೆಂಬರ್ 19ರಿಂದ 21ರವರೆಗೆ ಬಿಜೆಪಿಯ ಜನಸ್ವರಾಜ್ ಸಮಾವೇಶ; ಎಂಎಲ್​ಸಿ ಎನ್​ ರವಿಕುಮಾರ್ ಮಾಹಿತಿ

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ಚುನಾವಣೆ ನಡೆಯಲಿದೆ. 25 ಸ್ಥಾನಗಳಿಗೆ ಜನವರಿಯಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಹೆಚ್ಚು ಸೀಟ್ ಬಿಜೆಪಿ ಗೆಲ್ಲಬೇಕು ಎನ್ನುವ ಉದ್ದೇಶದಿಂದ ನಿಟ್ಟಿನಲ್ಲಿ ಜನಸ್ವರಾಜ್ ಸಮಾವೇಶ ಮಾಡುತ್ತೇವೆ.

ನವೆಂಬರ್ 19ರಿಂದ 21ರವರೆಗೆ ಬಿಜೆಪಿಯ ಜನಸ್ವರಾಜ್ ಸಮಾವೇಶ; ಎಂಎಲ್​ಸಿ ಎನ್​ ರವಿಕುಮಾರ್ ಮಾಹಿತಿ
ಬಿಜೆಪಿ ಧ್ವಜ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: sandhya thejappa

Updated on:Nov 07, 2021 | 1:26 PM

ಬೆಂಗಳೂರು: ನವೆಂಬರ್ 19ರಿಂದ 21ರವರೆಗೆ ಬಿಜೆಪಿಯ ಜನಸ್ವರಾಜ್ ಸಮಾವೇಶ ನಡೆಯಲಿದೆ ಅಂತ ಬೆಂಗಳೂರಿನಲ್ಲಿ ಎಂಎಲ್​ಸಿ ಎನ್ ರವಿಕುಮಾರ್ ಹೇಳಿಕೆ ನೀಡಿದ್ದಾರೆ. ಕಳೆದ ಬಾರಿ ಏಳು ಸೀಟ್ ಗೆದ್ದಿದ್ದೆವು. ಈ ಬಾರಿ ಅತಿಹೆಚ್ಚು ಸೀಟ್​ಗಳನ್ನ ಗೆಲ್ಲಬೇಕು. ಹೀಗಾಗಿ ಬೇಗ ಸಮಾವೇಶ ಮಾಡುತ್ತಿದ್ದೇವೆ. ಗ್ರಾಮ ಪಂಚಾಯತಿ ಅಧ್ಯಕ್ಷರ ಮನೆಯಲ್ಲಿ ಊಟ ಮಾಡಿ ಸಮಾವೇಶ ಶುರುಮಾಡಲಿದ್ದೇವೆ. ಅಭ್ಯರ್ಥಿಗಳಾಗಲು ಆಕಾಂಕ್ಷಿಗಳಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಇವತ್ತು ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸುತ್ತೇವೆ. ಬಳಿಕ ಕೇಂದ್ರಕ್ಕೆ ಪಟ್ಟಿ ಕಳುಹಿಸಿಕೊಡಲಾಗುತ್ತದೆ. ಯಾರು ಬೇಕಾದರು ಪಕ್ಷಕ್ಕೆ ಬರಬಹುದು. ಅರ್ಜಿ ಹಾಕಲಿ ಕೋರ್ ಕಮಿಟಿಯಲ್ಲಿ ಚರ್ಚೆಯಾಗುತ್ತದೆ. ಬಳಿಕ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ಚುನಾವಣೆ ನಡೆಯಲಿದೆ. 25 ಸ್ಥಾನಗಳಿಗೆ ಜನವರಿಯಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಹೆಚ್ಚು ಸೀಟ್ ಬಿಜೆಪಿ ಗೆಲ್ಲಬೇಕು ಎನ್ನುವ ಉದ್ದೇಶದಿಂದ ನಿಟ್ಟಿನಲ್ಲಿ ಜನಸ್ವರಾಜ್ ಸಮಾವೇಶ ಮಾಡುತ್ತೇವೆ. ಬಿಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲು, ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಾಲ್ಕು ತಂಡಗಳಾಗಿ ಮಾಡಲಾಗಿದೆ. ಎಂದು ತಿಳಿಸಿದ ರವಿಕುಮಾರ್ ನವೆಂಬರ್ 19ರಿಂದ 21ರವರೆಗೆ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನವೆಂಬರ್ 19ರಿಂದ 21 ರವರೆಗೆ ಮೊದಲ ಹಂತದ ಯಾತ್ರೆ ನಡೆಯಲಿದೆ. ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ, ಬೆಳಗಾವಿ ವಿಭಾಗದಲ್ಲಿ ಯಾತ್ರೆ ನಡೆಯಿಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡ ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ನಲ್ಲಿ ಜನಸ್ವರಾಜ್ ಸಮಾವೇಶ ನಡೆಯುತ್ತದೆ.

ಇನ್ನು ಸಚಿವ ಕೆಎಸ್ ಈಶ್ವರಪ್ಪ ನೇತೃತ್ವದ ತಂಡ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ಮಂಡ್ಯ, ಚಾಮರಾಜನಗರ ಮತ್ತು ಹಾಸನದಲ್ಲಿ ಯಾತ್ರೆ ನಡೆಸಲಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ತಂಡ ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಜನಸ್ವರಾಜ್ ಸಮಾವೇಶ ನಡೆಯುತ್ತದೆ ಅಂತ ಎನ್ ರವಿಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ

‘ಆರ್ಯನ್​ ಖಾನ್​ ಕಿಡ್ನಾಪ್​ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್​ ಮಲಿಕ್​ ಗಂಭೀರ ಆರೋಪ

Dark eye circles: ಕಣ್ಣಿನ ಸುತ್ತ ಡಾರ್ಕ್ ಸರ್ಕಲ್​ನಿಂದ ವಯಸ್ಕರಂತೆ ಕಾಣುತ್ತಿದ್ದೀರಾ? ತಜ್ಞರ ಸಲಹೆಗಳೇನು ತಿಳಿಯಿರಿ

Published On - 1:24 pm, Sun, 7 November 21