Dark eye circles: ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ನಿಂದ ವಯಸ್ಕರಂತೆ ಕಾಣುತ್ತಿದ್ದೀರಾ? ತಜ್ಞರ ಸಲಹೆಗಳೇನು ತಿಳಿಯಿರಿ
ನೀವು ಸುಂದರವಾಗಿ ಕಾಣಿಸಲು ಜೊತೆಗೆ ಕಣ್ಣಿನ ಸುತ್ತಲು ಉಂಟಾಗಿರುವ ಡಾರ್ಕ್ ಸರ್ಕಲ್ಗಳನ್ನು ನಿವಾರಿಸಲು ತಜ್ಞರು ಕೆಲವೊಂದಿಷ್ಟು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಕಣ್ಣುಗಳು ಅತ್ಯಂತ ಸೂಕ್ಷ್ಮವಾದ ಅಂಗ. ಜೊತೆಗೆ ಕಣ್ಣುಗಳು ಸುಂದರವಾಗಿದ್ದರೆ ನೀವು ನೋಡಲು ಅತ್ಯಂತ ಆಕರ್ಷಕವಾಗಿ ಕಾಣಿಸುತ್ತೀರಿ. ನಿಮ್ಮ ದೇಹದಲ್ಲಿನ ಆರೋಗ್ಯ ತೊಂದರೆಗಳು ಕಣ್ಣಿನ ಮೂಲಕ ತಿಳಿದು ಬರುತ್ತದೆ. ಕಣ್ಣಿನ ಸುತ್ತ ಕಪ್ಪಾಗುವುದು ನಿಮ್ಮ ಆಯಾಸ, ಒತ್ತಡ ಮತ್ತು ಆರೋಗ್ಯ ತೊಂದರೆಯ ಬಗ್ಗೆ ತಿಳಿಸುತ್ತದೆ. ಹಾಗಿರುವಾಗ ನೀವು ಸುಂದರವಾಗಿ ಕಾಣಿಸಲು ಜೊತೆಗೆ ಕಣ್ಣಿನ ಸುತ್ತಲು ಉಂಟಾಗಿರುವ ಡಾರ್ಕ್ ಸರ್ಕಲ್ಗಳನ್ನು ನಿವಾರಿಸಲು ತಜ್ಞರು ಕೆಲವೊಂದಿಷ್ಟು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿನಿತ್ಯ ಒತ್ತಡದ ಜೀವನ ಶೈಲಿ, ಅತಿಯಾದ ಟಿವಿ, ಲ್ಯಾಪ್ಟಾಪ್ ಮತ್ತು ಮೊಬೈಲ್ ಬಳಕೆಯಿಂದ ಕಣ್ಣುಗಳು ಆಯಾಸಗೊಂಡಿರುತ್ತವೆ. ಹಾಗಿರುವಾಗ ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ಗಳು ಉಂಟಾಗಿರುತ್ತವೆ. ಈ ಕುರಿತಂತೆ ಚರ್ಮರೋಗ ತಜ್ಞೆ ಡಾ. ಮಾಧುರಿ ಅವರು ಕೆಲವು ಸಲಹೆಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮ ವಯಸ್ಸಿಗಿಂತ ಹೆಚ್ಚಿನ ವಯಸ್ಸಾಗಿರುವಂತೆ ಕಾಣಿಸುತ್ತಿದ್ದೀರಾ? ಒಳ್ಳೆಯ ನಿದ್ರೆ ಸಿಗುತ್ತಿಲ್ಲವೇ? ಹೀಗಿರುವಾಗ ನಿಮ್ಮ ಕಣ್ಣುಗಳು ಎಲ್ಲವನ್ನೂ ತೋರಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಎಂದು ಶೀರ್ಷಿಕೆ ನೀಡುವ ಮೂಲಕ ಡಾ. ಮಾಧುರಿ ಪೋಸ್ಟ್ ಹಂಚಿಕೊಂಡಿದ್ದಾರೆ.
View this post on Instagram
ಡಾರ್ಕ್ ಸರ್ಕಲ್ ಬಗ್ಗೆ ಪ್ರಮುಖ ಅಂಶಗಳು ನಿಮ್ಮ ಕಣ್ಣುಗಳನ್ನು ತೊಳೆಯುವುದು ಡಾ. ಮಾಧುರಿ ಅವರ ಪ್ರಕಾರ, ನಿಮ್ಮ ಮುಖವನ್ನು ಆಗಾಗ ತೊಳೆಯುತ್ತೀರಿ. ಕಪ್ಪಾದ ಜಾಗವನ್ನು ಹತ್ತಿಯಿಂದ ಮೃದುವಾಗಿ ಉಜ್ಜುತ್ತೀರಿ. ಯಾವುದೇ ಕಾರಣಕ್ಕೂ ಕಣ್ಣಿನ ಸುತ್ತ ಒತ್ತಡ ಬೀಳದಂತೆ ನೋಡಿಕೊಳ್ಳಿ.
ಕಣ್ಣಿನ ಅಲರ್ಜಿಗಳು ಅಲರ್ಜಿಗಳು ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ಗೆ ಕಾರಣವಾಗಬಹುದು. ಇವುಗಳನ್ನು ಕೆಲವೊಮ್ಮೆ ಅಲರ್ಜಿಕ್ ಶೈನರ್ ಎಂದು ಕರೆಯಲಾಗುತ್ತದೆ. ಡಾರ್ಕ್ ಸರ್ಕಲ್ಗಳು ಮೂತ್ರಪಿಂಡ, ಮೂತ್ರಜನಕಾಂಗದ ಅಸಮತೋಲನವನ್ನು ಸೂಚಿಸಬಹುದು. ಅಂದರೆ ಹೆಚ್ಚಿನ ಒತ್ತಡ ಮತ್ತು ನಿದ್ರೆಯ ಕೊರತೆ ಈ ಸಮಸ್ಯೆಗೆ ಕಾರಣವಾಗಬಹುದು.
ಧೂಮಪಾನ ಮತ್ತು ಮದ್ಯಪಾನ ಆಲ್ಕೋಹಾಲ್ ಕುಡಿಯುವುದರಿಂದ ಕಣ್ಣುಗಳ ರಕ್ತನಾಳಗಳು ಹಿಗ್ಗುತ್ತವೆ. ಹಾಗಾಗಿ ಡಾರ್ಕ್ ಸರ್ಕಲ್ಗಳು ಎದ್ದು ಕಾಣುವಂತೆ ಮಾಡುತ್ತವೆ. ಆಲ್ಕೋಹಾಲ್ ಒಳ್ಳೆಯ ನಿದ್ರೆಯ ಮೇಲೆ ಪರಿಣಾಮವನ್ನು ಬೀರುತ್ತವೆ. ಇದು ನಿಮ್ಮ ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ.
ನಿರಂತರವಾಗಿ ಕಣ್ಣು ಉಜ್ಜುತ್ತಿರುವುದು ನೀವು ಆಗಾಗ ಕಣ್ಣು ಉಜ್ಜುತ್ತಿರುವ ಅಭ್ಯಾಸ ಹೊಂದಿದ್ದರೆ ಪೆರಿಯೊರ್ಬಿಟಲ್ ಮೆಲನೋಸಿಸ್ ಅಥವಾ ಡಾರ್ಕ್ ಸರ್ಕಲ್ಗಳು ಹೆಚ್ಚಾಗಿ ಕಾಣಿಸುತ್ತವೆ. ಕಣ್ಣುಗಳ ಸುತ್ತಲಿನ ಭಾಗ ತುಂಬಾ ಸೂಕ್ಷ್ಮವಾಗಿರುವುದರಿಂದ ನಿರಂತರವಾಗಿ ಕಣ್ಣುಗಳನ್ನು ಉಜ್ಜುವುದು ಒತ್ತಡವನ್ನು ಉಂಟು ಮಾಡುತ್ತವೆ.
ಇದನ್ನೂ ಓದಿ:
Skin Care: ಎಣ್ಣೆಯುಕ್ತ ಚರ್ಮ ಸಮಸ್ಯೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಉಪಾಯ
Coconut Benefits: ಹೊಳೆಯುವ ಚರ್ಮಕ್ಕೆ ತೆಂಗಿನಕಾಯಿಯಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?