Coconut Benefits: ಹೊಳೆಯುವ ಚರ್ಮಕ್ಕೆ ತೆಂಗಿನಕಾಯಿಯಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?

TV9 Digital Desk

| Edited By: Sushma Chakre

Updated on: Oct 23, 2021 | 4:03 PM

Health Tips: ತೆಂಗಿನಕಾಯಿ ಎಣ್ಣೆಯು ಚರ್ಮದ ಅತ್ಯಂತ ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದೆ. ತೆಂಗಿನಕಾಯಿ ಎಣ್ಣೆಯನ್ನು ನಿಯಮಿತವಾಗಿ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಒಣಗುವುದು ತಪ್ಪುತ್ತದೆ.

Coconut Benefits: ಹೊಳೆಯುವ ಚರ್ಮಕ್ಕೆ ತೆಂಗಿನಕಾಯಿಯಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?
ತೆಂಗಿನಕಾಯಿ ಎಣ್ಣೆ
Follow us

ಗಂಡಿರಲಿ, ಹೆಣ್ಣಿರಲಿ ತಮ್ಮ ಕೂದಲು ಹಾಗೂ ಚರ್ಮದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಯೋಚಿಸುತ್ತಾರೆ. ನಮ್ಮ ಮನೆಯಲ್ಲೇ ಸಿಗುವ ತೆಂಗಿನಕಾಯಿಯಿಂದ ಆರೋಗ್ಯ ಹಾಗೂ ಸೌಂದರ್ಯಕ್ಕೆ ಸಾಕಷ್ಟು ಉಪಯೋಗಗಳಿವೆ. ಚರ್ಮ ಮತ್ತು ಕೂದಲಿನ ಆರೈಕೆಗೆ ಬಂದಾಗ ತೆಂಗಿನಕಾಯಿ ಅದಕ್ಕೆ ಹೇಳಿಮಾಡಿಸಿದ್ದು. ತೆಂಗಿನಕಾಯಿಯಿಂದ ತಯಾರಿಸುವ ಎಣ್ಣೆಯಿಂದ ಕೂದಲು ಮತ್ತು ಚರ್ಮದ ಅಂದ ಹೆಚ್ಚಾಗುತ್ತದೆ.

ತೆಂಗಿನ ಎಣ್ಣೆಯು ಕೂದಲನ್ನು ಕಂಡೀಷನಿಂಗ್ ಮಾಡುವ ಶಕ್ತಿಯನ್ನು ಹೊಂದಿದೆ. ತೆಂಗಿನ ಕಾಯಿಯಲ್ಲಿ ವಿಟಮಿನ್ ಇ ನಂತಹ ಅದರ ವಿವಿಧ ಅಂಶಗಳಿವೆ. ಇದು ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಬಹಳ ಹಿಂದಿನಿಂದಲೂ ತೆಂಗಿನೆಣ್ಣೆಯನ್ನು ಚರ್ಮದ ಸೌಂದರ್ಯ ವೃದ್ಧಿಗೆ ಬಳಸಲಾಗುತ್ತಿತ್ತು.

ತೆಂಗಿನಕಾಯಿ ಎಣ್ಣೆಯು ಚರ್ಮದ ಅತ್ಯಂತ ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದೆ. ತೆಂಗಿನಕಾಯಿ ಎಣ್ಣೆಯನ್ನು ನಿಯಮಿತವಾಗಿ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಒಣಗುವುದು ತಪ್ಪುತ್ತದೆ. ಚರ್ಮದಲ್ಲಿ ತೇವಾಂಶವಿದ್ದರೆ ಚರ್ಮದ ಹೊಳಪು ಹೆಚ್ಚಾಗುತ್ತದೆ.

ಚರ್ಮದಲ್ಲಿ ನೀರಿನ ಅಂಶ ಕಡಿಮೆಯಾಗುವುದನ್ನು ತಡೆಯುವ ಮೂಲಕ ತೆಂಗಿನ ಎಣ್ಣೆಯು ಚರ್ಮವನ್ನು ದೀರ್ಘಕಾಲದವರೆಗೆ ತೇವಗೊಳಿಸಲು ಸಹಾಯ ಮಾಡುತ್ತದೆ. ಪರಿಸರ ಮಾಲಿನ್ಯ, ಕೋವಿಡ್ ಸಮಯದಲ್ಲಿ ಅತಿಯಾದ ನೈರ್ಮಲ್ಯೀಕರಣ ಮತ್ತು ಹವಾಮಾನ ಬದಲಾವಣೆಗಳು ಚರ್ಮದ ಮೇಲ್ಮೈಯನ್ನು ಒಣಗಿಸುತ್ತವೆ. ತೆಂಗಿನ ಎಣ್ಣೆಯು ಚರ್ಮದ ಈ ಅಡ್ಡ ಪರಿಣಾಮಗಳನ್ನು ನಿಭಾಯಿಸಲು ಸರಳ, ಸುಲಭ ಉಪಾಯವಾಗಿದೆ.

ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ, ತೆಂಗಿನಕಾಯಿ ಎಣ್ಣೆಯನ್ನು ಚರ್ಮ ಬಹಳ ಬೇಗ ಹೀರಿಕೊಳ್ಳುತ್ತದೆ. ನೀವು ದಿನನಿತ್ಯವೂ ದುಬಾರಿ ಹಣ ಕೊಟ್ಟು ಮಾಯಿಶ್ಚರೈಸರ್ ಕ್ರೀಂಗಳನ್ನು ಖರೀದಿಸುವ ಬದಲು ತೆಂಗಿನ ಎಣ್ಣೆಯನ್ನು ಹಚ್ಚಿಕೊಂಡರೆ ಇನ್ನಷ್ಟು ಒಳ್ಳೆಯದು. ಕಡಿಮೆ ತೂಕದೊಂದಿಗೆ ಹುಟ್ಟಿದ ಮಗುವಿನ ಚರ್ಮದ ಆರೋಗ್ಯ ಸುಧಾರಿಸಲು ತೆಂಗಿನೆಣ್ಣೆ ಅನುಕೂಲಕರವಾಗಿದೆ. ತೆಂಗಿನಕಾಯಿ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಚರ್ಮದ ಆರೋಗ್ಯ ಉತ್ತಮವಾಗುತ್ತದೆ.

ಅವಧಿಗಿಂತ ಬೇಗ ಹುಟ್ಟಿದ ಶಿಶುಗಳಲ್ಲಿನ ಸೋಂಕಿನ ವಿರುದ್ಧ ಹೋರಾಡಲು ಮತ್ತು ಅವುಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ತೆಂಗಿನೆಣ್ಣೆಯನ್ನು ಆ್ಯಂಟಿ ಬ್ಯಾಕ್ಟೀರಿಯಲ್ ಏಜೆಂಟ್ ಎಂದು ಹೇಳಲಾಗುತ್ತದೆ. ತೆಂಗಿನೆಣ್ಣೆ ನಿಮ್ಮ ಚರ್ಮದ ತಡೆಗೋಡೆಗಳನ್ನು ರಕ್ಷಿಸುವ ಮತ್ತು ಸರಿಪಡಿಸುವ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದ ಚರ್ಮಕ್ಕೆ ಸುಲಭವಾಗಿ ಲಭ್ಯವಿರುವ ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದೆ.

ತಾಜಾ ತೆಂಗಿನ ಎಣ್ಣೆಯಿಂದ ಮನುಷ್ಯನ ದೇಹದ ಸಂಪೂರ್ಣ ಆರೋಗ್ಯ ವೃದ್ಧಿಯಾಗುತ್ತದೆ. ತೆಂಗಿನ ಎಣ್ಣೆಯನ್ನು ತಲೆ ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದಲ್ಲದೆ ಹೊಳಪು ಹೆಚ್ಚುತ್ತದೆ. ಚರ್ಮದ ವಿಷಯದಲ್ಲಿ ಕೂಡ ತೆಂಗಿನ ಎಣ್ಣೆ ನಮ್ಮ ದೇಹದ ಚರ್ಮ ಯಾವುದೇ ರೀತಿಯ ಚರ್ಮ ವ್ಯಾಧಿಗಳಿಗೆ ಒಳಗಾಗದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: Health Tips: ಜೀರ್ಣಕ್ರಿಯೆ ಚೆನ್ನಾಗಿರಲು 9 ಆಯುರ್ವೇದ ಸಲಹೆಗಳು ಇಲ್ಲಿವೆ

Health Tips: ಅತಿಯಾಗಿ ಬಿಸ್ಕತ್ ತಿನ್ನುವವರೇ ಎಚ್ಚರ!; 60 ಬ್ರ್ಯಾಂಡ್​ಗಳ ಬಿಸ್ಕತ್​ನಲ್ಲಿವೆ ಕ್ಯಾನ್ಸರ್​ಕಾರಕ ಅಂಶ

ತಾಜಾ ಸುದ್ದಿ

Related Stories

Click on your DTH Provider to Add TV9 Kannada