ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ; ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲು

SR Vishwanath: ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್‌ರಿಂದ ದೂರು ಸಲ್ಲಿಕೆ ಮಾಡಲಾಗಿದೆ. ಬೆಂಗಳೂರಿನ ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ; ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲು
ಎಸ್ಆರ್ ವಿಶ್ವನಾಥ್
Follow us
TV9 Web
| Updated By: ganapathi bhat

Updated on:Dec 01, 2021 | 5:04 PM

ಬೆಂಗಳೂರು: ನಗರದ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್‌ರಿಂದ ದೂರು ಸಲ್ಲಿಸಲಾಗಿದೆ. ಬೆಂಗಳೂರಿನ ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಬೇಕು. ಈ ಬೆಳವಣಿಗೆಗಳು ಸರಿಯಾದದ್ದಲ್ಲ ಎಂದು ವಿಶ್ವನಾಥ್ ಬಳಿಕ ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪಕ್ಕೆ ಸಂಬಂಧಿಸಿ ರಾಜಾನುಕುಂಟೆ ಠಾಣೆಗೆ ಶಾಸಕ ಲಿಖಿತ ದೂರು ನೀಡಿದ್ದಾರೆ. ವಿಡಿಯೋ ಆಧರಿಸಿ ಕೊಲೆಗೆ ಸಂಚು ಎಂದು ದೂರು ನೀಡಲಾಗಿದೆ. ಕೇಸ್ ದಾಖಲಿಸಿ ತನಿಖೆ ನಡೆಸಲಾಗುವುದು. ಪ್ರಕರಣದ ಬಗ್ಗೆ ಕಾನೂನು ಪ್ರಕಾರ ತನಿಖೆ ನಡೆಸುತ್ತೇವೆ ಎಂದು ಟಿವಿ9ಗೆ ಬೆಂಗಳೂರು ಗ್ರಾ. ಎಸ್‌ಪಿ ಕೆ.ವಂಶಿಕೃಷ್ಣ ಹೇಳಿಕೆ ನೀಡಿದ್ದಾರೆ.

ಯಲಹಂಕ ಕ್ಷೇತ್ರದ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಪ್ರಬಲ ನಾಯಕರ ಮುಂದೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ. ಸಜ್ಜನಿಕೆಯಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಚುನಾವಣೆಗಳಲ್ಲಿ ಸೋಲು-ಗೆಲವು ಸಹಜವಾಗಿ ಇರುತ್ತದೆ. ಕಳೆದ 2 ಬಾರಿ ನನ್ನ ವಿರುದ್ಧ ಗೋಪಾಲಕೃಷ್ಣ ಸ್ಪರ್ಧಿಸಿದ್ದರು. ಅವರು ನನ್ನ ವಿರುದ್ಧ ಸ್ಪರ್ಧಿಸಿ 3ನೇ ಸ್ಥಾನ ಪಡೆದಿದ್ದರು ಎಂದು ಗೋಪಾಲಕೃಷ್ಣ ಬಗ್ಗೆ ಹೇಳಿದ್ದಾರೆ.

ನಿನ್ನೆ ಸಂಜೆ ನನಗೆ ಕ್ಷಮಾಪಣ ಪತ್ರ ಬಂದಿತ್ತು. ತಾವು ಮಾಡಿದ ತಪ್ಪಿಗೆ ಕ್ಷಮಿಸಿ ಎಂದು ಪತ್ರ ಬಂದಿತ್ತು. ನನ್ನ ಹತ್ಯೆಗೆ ಪ್ಲ್ಯಾನ್ ಮಾಡಿದ್ದ ಬಗ್ಗೆ ಸ್ಕೆಚ್ ಹಾಕಿದ್ದರು. ಇದು ತಪ್ಪೆಂದು ತಿಳಿದು ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ಕುಳ್ಳ ದೇವರಾಜ್ ನನಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಕೂಡಲೇ ನಾನು ಗೃಹ ಸಚಿವರಿಗೆ ಕರೆ ಮಾಡಿ ಮಾತಾಡಿದ್ದೆ. ರಾಜಾನುಕುಂಟೆ ಪೊಲೀಸ್ ಠಾಣೆಗೂ ದೂರು ನೀಡಿದ್ದೇನೆ. ಸಿಎಂ ಬೊಮ್ಮಾಯಿ ಜೊತೆಯೂ ನಾನು ಮಾತಾಡಿದ್ದೇನೆ. ಸುಪಾರಿ ಕೊಟ್ಟು ಕೊಲೆಗೆ ಯತ್ನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

15 ದಿನದ ಹಿಂದೆ ಈ ಬಗ್ಗೆ ವಾಸನೆ ಬರುತ್ತಿತ್ತು. ಕುಳ್ಳ ದೇವರಾಜ್-ಗೋಪಾಲಕೃಷ್ಣ ಆಡಿಯೋ ಬಗ್ಗೆ ಹೇಳಿಕೆ, ಇಡೀ ಸಂಭಾಷಣೆ ನನ್ನ ಮೇಲೆ ದ್ವೇಷ ಕಾರುವಂತೆ ಇದೆ. ಆಂಧ್ರದಿಂದ ಸುಪಾರಿ ಕಿಲ್ಲರ್ಸ್‌ ಕರೆಸುವುದಾಗಿ ಚರ್ಚಿಸಿದ್ದಾರೆ. ಕಡಬಗೆರೆ ಶ್ರೀನಿವಾಸ್ ನನ್ನ ಜೊತೆಗೆ ಇದ್ದವರು. ಅವರನ್ನು ಎಪಿಎಂಸಿ ಅಧ್ಯಕ್ಷನಾಗಿ ಮಾಡಿದ್ದು ನಾನೇ. ಕಡಬಗೆರೆ ಶ್ರೀನಿವಾಸ್ ಮೇಲೆ ಶೂಟೌಟ್ ಆಗಿತ್ತು. ನನ್ನ ಏರಿಯಾದಲ್ಲಿ ಶೂಟೌಟ್ ನಡೆದಿತ್ತು. ಈ ಬಗ್ಗೆ ತನಿಖೆ ಮಾಡುವಂತೆ ನಾನು ಕೂಡ ಒತ್ತಾಯಿಸಿದ್ದೆ. ಆದರೆ ಈವರೆಗೆ ಇದರ ಹಿಂದೆ ಯಾರಿದ್ದಾರೆಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಗೋಪಾಲಕೃಷ್ಣನನ್ನು ಕಂಡರೆ ಕಾಂಗ್ರೆಸ್‌ನವರಿಗೇ ಆಗುವುದಿಲ್ಲ ಸುಪಾರಿ ಕೊಟ್ಟು ಶಾಸಕನ ಹತ್ಯೆಗೆ ಪ್ಲ್ಯಾನ್ ಮಾಡಿದ್ದಾರೆ. ಇದು ಇಡೀ ಕ್ಷೇತ್ರದ ಜನರನ್ನು ದಿಗ್ಬ್ರಾಂತಿಗೆ ಎಡೆಮಾಡಿದೆ. ಗೋಪಾಲಕೃಷ್ಣಗೆ ಏಕೆ ಇಂಥ ದುರ್ಬುದ್ಧಿ ಬಂತೆಂದು ಗೊತ್ತಾಗುತ್ತಿಲ್ಲ. ತನಿಖೆ ನಂತರ ಸತ್ಯಾಸತ್ಯತೆ ಹೊರಗೆ ಬರಬೇಕು. ಗೋಪಾಲಕೃಷ್ಣ ನನಗೆ ಎದುರಾಳಿ ಎಂದು ನಾನು ಪರಿಗಣಿಸಿಲ್ಲ. ನಾನು ದ್ವೇಷದ ರಾಜಕಾರಣ ಎಂದೂ ಮಾಡಿಲ್ಲ. ಗೋಪಾಲಕೃಷ್ಣನನ್ನು ಕಂಡರೆ ಕಾಂಗ್ರೆಸ್‌ನವರಿಗೇ ಆಗುವುದಿಲ್ಲ. ಯಲಹಂಕದಲ್ಲಿ ವಿಥೌಟ್ ಪ್ಲ್ಯಾನ್ ಮನೆಯನ್ನು ಕಟ್ಟಿದ್ದಾನೆ. ಅಕ್ರಮವಾಗಿ 5 ಅಂತಸ್ತಿನ ಮನೆ ಕಟ್ಟಿದ್ದಾನೆ. ಕಾಂಗ್ರೆಸ್ ಮುಖಂಡರು ಬಂದು ಕೇಳಿಕೊಂಡಿದ್ದಕ್ಕೆ ಸುಮ್ಮನಾದೆ. ಅವನು ಮಾಡಿದ ತಪ್ಪಿಗೆ ಕುಟುಂಬಸ್ಥರಿಗೆ ತೊಂದರೆ ಆಗಬಾರದು. ಅಕ್ರಮವಿದ್ದರೂ ಸಕ್ರಮ ಮಾಡೋಣ ಎಂದು ಸುಮ್ಮನಾದೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರು ತನಿಖೆಗೆ ಆಗ್ರಹ ಮಾಡಬೇಕು ನಾನು ಇವತ್ತಿಗೂ ಏಕಾಂಗಿಯಾಗಿಯೇ ಓಡಾಡುತ್ತೇನೆ. ಇಂತಹವರನ್ನು ಸಮರ್ಥನೆ ಮಾಡಿಕೊಳ್ಳುವುದು ಬೇಡ. ವಿರೋಧ ಪಕ್ಷದ ನಾಯಕರಲ್ಲಿ ನಾನು ಮನವಿ ಮಾಡ್ತೇನೆ. ತಪ್ಪು ಯಾರೇ ಮಾಡಿದ್ದರೂ ಅವರ ವಿರುದ್ಧ ಕ್ರಮ ಆಗಲಿ. ವಿರೋಧ ಪಕ್ಷದ ನಾಯಕರು ತನಿಖೆಗೆ ಆಗ್ರಹ ಮಾಡಬೇಕು. ನಿಧಾನವಾದರೂ ಪರವಾಗಿಲ್ಲ ಕೂಲಂಕಷವಾಗಿ ತನಿಖೆಯಾಗಲಿ. ಇದರಲ್ಲಿ ಯಾರಿದ್ದಾರೆ ಎಂಬುದು ಎಲ್ಲವೂ ಬಹಿರಂಗವಾಗಬೇಕು ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

ಕುಳ್ಳ ದೇವರಾಜ್‌ಗೂ ನನಗೂ ಅಷ್ಟು ಸಂಪರ್ಕವಿಲ್ಲ. ಕುಳ್ಳ ದೇವರಾಜ್ ನನಗೆ ಗೊತ್ತಿದೆ ಅಷ್ಟೆ. ಅಯ್ಯಪ್ಪ ಪ್ರಕರಣದಲ್ಲಿ ನನಗೆ ಯಾವುದೇ ಸಂಬಂಧವಿಲ್ಲ. ಆದರೂ ನನ್ನ ಹೆಸರು ಸೇರಿಸಿ ಷಡ್ಯಂತ್ರ ಮಾಡಿದ್ದರು. 32 ಎಕರೆ ಜಾಗಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅಂತಹ ಯಾವುದೇ ಅವ್ಯವಹಾರ ಮಾಡಿಲ್ಲ. ಆದರೂ ನನ್ನ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿದ್ದರು. ಆದರೂ ಕೋರ್ಟ್‌ಗೆ ಹೋಗಿ ಆರೋಪಮುಕ್ತನಾಗಿ ಬಂದೆ ಎಂದು ಹೇಳಿದ್ದಾರೆ.

ಇಂತಹದೊಂದು ನಡೆಯುತ್ತಿದೆ ಎಂದು ಸಣ್ಣ ಸುಳಿವು ಇತ್ತು ಕೊಲೆಗೆ ಎಷ್ಟು ದಿನದಿಂದ ಸ್ಕೆಚ್ ಹಾಕಿದ್ದರೆಂದು ಗೊತ್ತಿಲ್ಲ. ಬಹುಶಃ 3 ತಿಂಗಳಿಂದ ನಡೆದಿರಬೇಕೆಂದು ಅನಿಸುತ್ತಿದೆ. ಕುಳ್ಳ ದೇವರಾಜ್ ಕ್ಷಮಾಪಣಾ ಪತ್ರವನ್ನು ಕಳುಹಿಸಿದ್ದಾನೆ. ಬೇರೆಯವರ ಕೈಯಲ್ಲಿ ನನಗೆ ಪತ್ರವನ್ನು ಕೊಟ್ಟು ಕಳಿಸಿರಬೇಕು. ನಿನ್ನೆ ಸಂಜೆ 7.30ರ ಸುಮಾರಿಗೆ ಪತ್ರದ ಬಗ್ಗೆ ಮಾಹಿತಿ ಇತ್ತು. ಇಂತಹದೊಂದು ನಡೆಯುತ್ತಿದೆ ಎಂದು ಸಣ್ಣ ಸುಳಿವು ಇತ್ತು. ನಾನು ಮೊದಲೇ ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆ. ಆದರೆ ವಿಡಿಯೋ ಇರಲಿಲ್ಲ, ಗೊತ್ತಾದ ಕೂಡಲೇ ಹೇಳಿದ್ದೇನೆ. ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಅವರಿಗೆ ಹೇಳಿದ್ದೆ. ಗೃಹ ಸಚಿವರಿಗೆ ಹೇಳಿದ ತಕ್ಷಣ ಗೃಹ ಸಚಿವರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕುಳ್ಳ ದೇವರಾಜ್ ಗೋಪಾಲಕೃಷ್ಣನ ಪರಮಶಿಷ್ಯನಾಗಿದ್ದಾನೆ. ಕುಳ್ಳ ದೇವರಾಜ್ ಕ್ರಿಮಿನಲ್ ಇದ್ದಾನೆ. ಗೋಪಾಲಕೃಷ್ಣನ ಜತೆಗಿನ ವಿಡಿಯೋ ಮಾಡಿಟ್ಟಿದ್ದಾನೆ. ಒಂದಲ್ಲಾ ಒಂದು ದಿನ ಸಿಕ್ಕಿಹಾಕಿಕೊಳ್ಳುವ ಭಯದಿಂದ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ಯಲಹಂಕದಲ್ಲಿ ನನ್ನನ್ನು ಸೋಲಿಸುವುದಕ್ಕೆ ಆಗುವುದಿಲ್ಲ. ಇಂತಹ ಒಂದು ಉದ್ದೇಶದಿಂದ ಸ್ಕೆಚ್ ಹಾಕಿರಬಹುದು ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ವಿಶ್ವನಾಥ್ ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ ಏನು ಸಾಧು-ಸಂತರ ಜೊತೆಯಲ್ಲಿ ಇದ್ದಾರಾ? ತನಿಖೆ ಮಾಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಈ ಮಾತನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ರೌಡಿಗಳ ಜತೆಗಿದ್ದೇನೆಂದು ಹೇಳುತ್ತಿದ್ದಾರೆ. ಅವರೇನು ಸಾಧು-ಸಂತರ ಜೊತೆಯಲ್ಲಿ ಇದ್ದಾರಾ? ಅವರು ಯಾರ ಜೊತೆ ಇದ್ದಾರೆಂದು ನಾನು ಹೇಳೋದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಎಸ್.ಆರ್.ವಿಶ್ವನಾಥ್ ಕಿಡಿಕಾರಿದ್ದಾರೆ.

ನನಗೆ ಬೆದರಿಕೆ ಇದೆ, ರಕ್ಷಣೆ ಕೊಡಿ ಎಂದು ಕೇಳಿದ್ದೇನೆ. ಪೊಲೀಸ್ ರಕ್ಷಣೆ ಬೇಕೆಂದು 4 ಬಾರಿ ಪತ್ರ ಬರೆದಿದ್ದೇನೆ. ಕಾಂಗ್ರೆಸ್ ಆಡಳಿತದಲ್ಲಿಯೂ ನನ್ನ ವಿರುದ್ಧ ಪ್ರಕರಣ ದಾಖಲು ಆಗಿತ್ತು. ಅವರು ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡಿದ್ದರು. ಆದರೂ ನಾನು ಎಂದು ಕ್ಷೇತ್ರವನ್ನು ಬಿಟ್ಟು ಹೋಗಿರಲಿಲ್ಲ. ಎಲ್ಲ ಆರೋಪಗಳನ್ನು ಕ್ಷೇತ್ರದಲ್ಲೇ ಇದ್ದು ಎದುರಿಸಿದ್ದೇನೆ. ಯಾರೋ ಪ್ರಭಾವ ಬೀರಿ ಗೋಪಾಲಕೃಷ್ಣನನ್ನ ಬಿಡಿಸಿದ್ದಾರೆ. ಪ್ರಭಾವಿಗಳು ಯಾರೆಂದು ಹೇಳುವುದಕ್ಕೆ ಹೋಗುವುದಿಲ್ಲ. ಮೊದಲು ತನಿಖೆಯಾಗಲಿ, ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ ಎಂದು ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.

ಆ ವಿಡಿಯೋದಲ್ಲಿ ಮಾಡಿದ ಎಲ್ಲ ಆರೋಪಗಳ ಬಗ್ಗೆಯೂ ತನಿಖೆಯಾಗಲೇಬೇಕು. ಕಡಬಗೆರೆ ಸೀನ ಪ್ರಕರಣ ಬಂದ್ರೆ ನನ್ನ ಹೆಸರು ಬರುತ್ತೆ. ಹೀಗಾಗಿ ಎಲ್ಲ ಪ್ರಕರಣಗಳ ಬಗ್ಗೆಯೂ ತನಿಖೆಯಾಗಬೇಕು. ನನಗೆ ಯಾರಿಂದಲೂ ಬೆದರಿಕೆ ಅನ್ನೋದು ಇಲ್ಲ. ಗೋಪಾಲಕೃಷ್ಣನಿಂದಲೂ ನನಗೆ ಯಾವ ಬೆದರಿಕೆ ಇಲ್ಲ. ಗೋಪಾಲಕೃಷ್ಣ ನನಗೆ ಬೆದರಿಕೆ ಹಾಕುವಂತಹ ಸಮರ್ಥನಲ್ಲ. ಪೊಲೀಸರ ಮೇಲೆ ನನಗೆ ಈಗಲೂ ಪೂರ್ಣ ನಂಬಿಕೆ ಇದೆ. ಪೊಲೀಸರು ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸ್ತಾರೆ ಎಂದು ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್! ವಿಶ್ವನಾಥ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಗೋಪಾಲಕೃಷ್ಣ ವಿಡಿಯೋ ಬಹಿರಂಗ

ಇದನ್ನೂ ಓದಿ: ಅರಸೀಕೆರೆಯಲ್ಲಿ ಬಿಜೆಪಿಯ 2 ಗುಂಪುಗಳ ನಡುವೆ ಮಾರಾಮಾರಿ; ಅಶಾಂತಿಗೆ ಎನ್​ಆರ್ ಸಂತೋಷ್ ಕಾರಣ ಎಂದ ವಿಜಿಕುಮಾರ್

Published On - 4:08 pm, Wed, 1 December 21