ನೆಲಮಂಗಲ, ಆ.06: ಜನಪ್ರತಿನಿಧಿಗಳು ಅಂದ್ರೆ ಸರ್ಕಾರದ ಕಾವಲುಗಾರರು ಎಂದರೆ ತಪ್ಪಾಗಲಾರದು, ಸರ್ಕಾರದ ಆಸ್ತಿ ಪಾಸ್ತಿಗಳು ಹಾಳಾಗದಂತೆ, ಸರ್ಕಾರದ ಖಜಾನೆ ಬರಿದಾಗದಂತೆ ನೋಡಿಕೊಳ್ಳಬೇಕು. ಅಷ್ಟೆ ಅಲ್ಲ ಪರಿಸರ ಸಂರಕ್ಷಣೆಯಲ್ಲಿಯೂ ರಾಜಕಾರಣಿಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಆದ್ರೆ ಇಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ಬಿಡಿಎಗೆ ಸೇರಿದ ಜಾಗದಲ್ಲಿ ಬೆಲೆಬಾಳುವ ಮರಗಳನ್ನ ಕಡಿದು ಉರುಳಿಸಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ಗಾಣಿಗರಹಳ್ಳಿಯಲ್ಲಿ, ಬಿಡಿಎ ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾದಿನವಾಗಿರುವ ನೂರಾರು ಎಕರೆಯ ಈ ಪ್ರದೇಶದಲ್ಲಿ ಪ್ರಭಾವಿ ರಾಜಕಾರಣಿ, ಮಾಜಿ ಸಿಎಂ ಯಡಿಯೂರಪ್ಪ ಬೀಗರು, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಮರಿಸ್ವಾಮಿ ತಮ್ಮ ಸ್ವಾರ್ಥಕ್ಕಾಗಿ ಮರಗಳನ್ನ ಕಡಿದು ಲಪಟಾಯಿಸಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ತೇಗ, ಸಿಲ್ವರ್ ಸೇರಿದಂತೆ ಬೆಲಬಾಳುವ ಮರಗಳನ್ನು ಕಡಿಯಲಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆ ಸಂಬಂಧ ಮರಿಸ್ವಾಮಿ ಅವರು ಹೇಳೊದೆ ಬೇರೆ, ಹೇಗಿದ್ರು ಬಿಡಿಎನವರು ನಿವೇಶನ ಮಾಡುವಾಗ ಮರ ಕಡಿವುದು ಗ್ಯಾರಂಟಿ ಹಾಗಾಗಿ ಈ ಹಿಂದೆ ಶಾಸಕ ಎಸ್.ಮುನಿರಾಜು ಮರಗಳನ್ನ ಬೆಳಸಿದ್ರು, ನಮ್ಮದು ವುಡ್ ಇಂಡಸ್ಟ್ರಿ ಇರುವುದರಿಂದ ಮರ ನಮ್ಮವರೆ ಕಡಿದಿದ್ದು ಎಂದು ತಿಳಿಸಿದರು.
ಇದನ್ನೂ ಓದಿ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ಗಳಿಗೆ ಕಾರು ಡಿಕ್ಕಿ; ಪವಾಡ ಸದೃಶ ರೀತಿಯಲ್ಲಿ ಪಾರಾದ ಯುವಕರು
ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿ ಸರ್ವೆ ನಂಬರ್ 76ರಲ್ಲಿ ಬರುವಂತ ಜಮೀನು ಇದಾಗಿದ್ದು ಈ ಪ್ರದೇಶದಲ್ಲಿ ಇವರು ಮರ ಕಡಿಯುತ್ತಾರೆ ಎಂದು ಮೊದಲೇ ತಿಳಿದುಕೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ನೋಡಿ ಮರಗಳ ಸರ್ವೆ ಕಾರ್ಯ ನಡೆಸಿದ್ದರು. ಮರಗಳಿಗೆ ನಂಬರ್ ಮೂಲಕ ಗುರುತು ಮಾಡಿ ಯಾವ ಮರ, ಎಷ್ಟು ಮೌಲ್ಯ ಎಂದು ಗುರುತಿಸಿದ್ದರು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಮರಿಸ್ವಾಮಿಯವರು ಮರ ಕಡಿಸಿದ್ದಾರಂತೆ. ಸುಮಾರು 10 ಕಾರ್ಮಿಕರು, ಚೈನ್ ಸಾ ಮೆಷನ್ ಬಳಸಿಕೊಂಡು 80 ಕ್ಕೂ ಹೆಚ್ಚು ಮರಗಳನ್ನು ಧರೆಗೆ ಉರುಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರುತ್ತಿದ್ದಂತೆ ಕೂಲಿ ಕಾರ್ಮಿಕರು ಪರಾರಿಯಾಗಿದ್ದಾರೆ.
ಇನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಪರಾರಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ನಿಮತ್ತ ಕೇಸ್ ದಾಖಲು ಮಾಡಿದ್ದಾರೆ. ಒಟ್ಟಾರೆ ಪರಿಸರ ಅರಣ್ಯ ರಕ್ಷಣೆಗೆ ಕೈಜೋಡಿಸಬೇಕಿರುವ ಜನಪ್ರತಿನಿದಿಗಳೆ ಈ ರೀತಿ ಭಕ್ಷಕರಾದ್ರೆ ಮುಂದೇನೂ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ