ಬೆಂಗಳೂರು: ದೇಶ ವಿಭಜನೆ ದೃಶ್ಯ ಕಂಡು ಕಣ್ಣಲ್ಲಿ ನೀರು ಬಂತು. ದೇಶ ವಿಭಜನೆ ನಂತರ ನೂರಾರು ಜನರ ಸಾವು ನೋವು ಸಂಭವಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಬೆಂಗಳೂರಿನ (Bengaluru) ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ (BJP) ಕಚೇರಿಯಲ್ಲಿ ಹೇಳಿದ್ದಾರೆ. ದೇಶ ವಿಭಜನೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಇಂದು (ಆಗಸ್ಟ್ 14) ಕರಾಳ ದಿನಾಚರಣೆ ಆಚರಿಸಲಾಗಿದೆ. ಭಾಷ್ಯಂ ಸರ್ಕಲ್ನ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಿಜೆಪಿ ಕಚೇರಿವರೆಗೆ ಬಿಜೆಪಿ ನಾಯಕರು ಮೌನ ಮೆರವಣಿಗೆ ಮಾಡಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಬೊಮ್ಮಾಯಿ ದೇಶ ವಿಭಜನೆ ಕರಾಳ ನೆನಪು, ವಸ್ತು ಪ್ರದರ್ಶನ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪೂರ್ವ ಹಾಗೂ ಪಶ್ಚಿಮ ದೇಶ ವಿಭಜನೆ ಆದಾಗ 10 ಲಕ್ಷ ಜನರು ವಲಸೆ ಆದರು. ದೊಡ್ಡ ಹಿಂಸಾಚಾರ ಆಯ್ತು, ಸಾವು ನೋವು ಆಯ್ತು. ಬಹಳಷ್ಟು ಕಡೆ ಹಸಿವಿನಿಂದ ಸತ್ತು ಹೋದರು. ಇದು ಯಾಕ್ ಆಯ್ತು ಅಂತ ಇತಿಹಾಸದಲ್ಲಿ ದಾಖಲೆ ಇದೆ ಎಂದು ಹೇಳಿದ್ದಾರೆ.
ಇದಕ್ಕೆ ಯಾರೆಲ್ಲ ಕಾರಣ ಅಂತಾನೂ ದಾಖಲೆ ಇದೆ. ಇದೊಂದು ದೊಡ್ಡ ದುರಂತ. ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ದೇಶವನ್ನು ಒಡೆಯುವ ಕೆಲಸ ಆಗಿದೆ. ರಕ್ತ ಭೂಮಿಗೆ ಚಲ್ಲಿದರು. ಸ್ವತಂತ್ರ ಸಮಯದಲ್ಲಿ ಪ್ರಾಣ ಹೊತ್ತು, ವಿಭಜನೆ ಸಮಯದಲ್ಲಿ ಪ್ರಾಣ ಹೋಯ್ತು. ದೇಶ ಒಂದಾಗಿದ್ದರೆ ಇಂತಹ ಘಟನೆ ತಪ್ಪಿಸಬಹುದು. 50 ವರ್ಷದಲ್ಲಿ ಹಿಂದಿನ ಆಚರಣೆ ಅಷ್ಟೊಂದು ಪರಿಣಾಮ ಬಿರಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ಹರ್ ಘರ್ ತಿರಂಗಾ ಅಂತ ಮೂಲಕ ಇಡೀ ದೇಶದಲ್ಲಿ ದೇಶ ಭಕ್ತಿ ಮೂಡಿಸಿದರು ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಸರ್ಕಾರಿ ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಫೋಟೋ ಕೈಬಿಟ್ಟ ವಿಚಾರವಾಗಿ ಮಾತನಾಡಿದ ಅವರು ಸಂವಿಧಾನ ಕೊಟ್ಟ ಅಂಬೇಡ್ಕರ್‌ರನ್ನೇ ಎಲ್ಲೂ ಇಲ್ಲದಂಗೆ ಮಾಡಿದರು. ಅವಾಗ ಕಾಂಗ್ರೆಸ್ ನಾಯಕರಿಗೆ ನೆನಪಾಗಿಲ್ವಾ? ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಟೇಲ್‌ರನ್ನೇ ಮರೆತಿದ್ದರು. ಯಾರೋ ಒಬ್ಬರಿಂದ ಸ್ವಾತಂತ್ರ್ಯ ಬಂದಿದೆ ಅನ್ನೋ ಪರಿಕಲ್ಪನೆ ತಪ್ಪು ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಮಾತನಾಡಿದರು.
ಸ್ವಾತಂತ್ರ್ಯೋತ್ಸವ ಅನಾಮಧೇಯ ಹೋರಾಟಗಾರರಿಗೆ ಮೀಸಲಿಟ್ಟಿದ್ದು. 75 ವರ್ಷ ರಸ್ತೆಗೆ ಮತ್ತೆ ಎಲ್ಲೇ ಹೋದರು ನೆಹರು ಹೆಸರು ಇಟ್ಟಿದ್ದೇವೆ. ಜಾಹೀರಾತುನಲ್ಲೂ ನೆಹರು ಇದ್ದಾರೆ, ಆದರೂ ಯಾಕಿಷ್ಟು ಗಾಬರಿ? ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರಬೋಸ್‌ರವರು, ಚಂದ್ರಶೇಖರ್ ಆಜಾದ್ ಕಾಂಗ್ರೆಸ್‌ನವರಿಗೆ ನೆನಪಾಗಿಲ್ಲವಾ? ಎಂದು ಪ್ರಶ್ನಿಸಿದರು.
ನಿಜವಾದ ಹೋರಾಟಗಾರರ ನೆನಪು ರಾಜ್ಯದಲ್ಲಿ ಮಾಡಿಕೊಟ್ಟಿದ್ದೇವೆ. ಹಿಂದೆಂದೂ ಕೂಡ ನೆನಪು ಮಾಡಿಕೊಂಡ ದಾಖಲೆಗಳಿಲ್ಲ. ಎಲ್ಲರನ್ನು ನೆನಪು ಮಾಡಿಕೊಂಡಿದ್ದೀವೆಂದು ಅಭಿನಂದನೆ ಸಲ್ಲಿಸಬೇಕು. ದಾದಾಭಾಯಿ ನವರೋಜಿ, ಹರ್ಡೇಕರ್‌ನ್ನು ನೆನಪು ಮಾಡಿದ್ದೇವೆ. ಇವರೆಲ್ಲಾ ಕಾಂಗ್ರೆಸ್‌ನವರೇ ನಾವೇನೂ ಭೇದ-ಭಾವ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಅಧಿಕಾರಕ್ಕಾಗಿ ಆರ್‌ಎಸ್‌ಎಸ್‌ನವರ ಹಿಡಿತದಲ್ಲಿದ್ದಾರೆಂದು ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಹುಡುಗ ರಾಹುಲ್ ಮುಂದೆ ಕೈಕಟ್ಟಿ ನಿಂತ ಮೇಲೆ ಅವನದೆಲ್ಲಾ ಸ್ವಾಭಿಮಾನ ಮುಗಿದುಹೋಯ್ತು. ನಾವೆಲ್ಲ ವಿಪಕ್ಷ ನಾಯಕ ಸಿದ್ದರಾಮಣ್ಣನ ಬಗ್ಗೆ ಬಹಳಷ್ಟು ಎತ್ತರದಲ್ಲಿ ಹೇಳುತ್ತಿದ್ದೇವು, ಆದರೆ ದೆಹಲಿಗೆ ಹೋಗಿ ಅವನಿಗಿಂತ ಸಣ್ಣವಯಸ್ಸಿನ ರಾಹುಲ್ ಮುಂದೆ ಕೈಕಟ್ಟಿ ದಿನಗಟ್ಟಲೇ ಕಾಯುತ್ತಿದ್ದ ದಿನವೇ ಸ್ವಾಭಿಮಾನ ಮುಗಿಯಿತು. ಸಿದ್ದರಾಮಯ್ಯ ಗೌರವ, ಅವರ ಸ್ವಾಭಿಮಾನ ಅಲ್ಲಿಗೆ ಮುಗಿಯಿತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
Published On - 10:16 pm, Sun, 14 August 22