ಪ್ರಧಾನಿ ಮೋದಿ ಜನ್ಮ ದಿನಕ್ಕೆ ಬಿಜೆಪಿ ಭರ್ಜರಿ ಸಿದ್ದತೆ; ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಸೇವಾ ಪಾಕ್ಷಿಕ ಕಾರ್ಯಕ್ರಮ

| Updated By: ರಶ್ಮಿ ಕಲ್ಲಕಟ್ಟ

Updated on: Sep 15, 2022 | 1:52 PM

ಅಮೃತ ಸರೋವರ ಯೋಜನೆಯಡಿ ಪ್ರತಿ ತಾಲೂಕಲ್ಲಿ ಕೆರೆ ಅಭಿವೃದ್ಧಿ, ಜಲವೇ ಜೀವನ ಮಂತ್ರದಡಿ ಮಳೆ ನೀರಿನ ಶೇಖರಣೆ ಕುರಿತು ಜನಜಾಗೃತಿ ಮೂಡಿಸಲು ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ.

ಪ್ರಧಾನಿ ಮೋದಿ ಜನ್ಮ ದಿನಕ್ಕೆ ಬಿಜೆಪಿ ಭರ್ಜರಿ ಸಿದ್ದತೆ; ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಸೇವಾ ಪಾಕ್ಷಿಕ ಕಾರ್ಯಕ್ರಮ
ಜೆಪಿ ನಡ್ಡಾ
Follow us on

ಶಿವಮೊಗ್ಗ: ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ(Narendra Modi Birthday) ಹಿನ್ನೆಲೆ ಅಂದಿನಿಂದ ಗಾಂಧೀಜಿ ಜನ್ಮ ದಿನವಾದ(Gandhi Jayanthi) ಅಕ್ಟೋಬರ್ 2ರವರೆಗೆ ಸೇವಾ ಪಾಕ್ಷಿಕ ಕಾರ್ಯಕ್ರಮ ಆಯೋಜನೆ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ(Jp Nadda) ಸೂಚನೆ ನೀಡಿದ್ದಾರೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿವೈ ರಾಘವೇಂದ್ರ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಬಿವೈ ರಾಘವೇಂದ್ರ, 15 ದಿನಗಳ ಕಾಲ ಸೇವಾ ಚಟುವಟಿಕೆಗಳು ರಾಷ್ಟ್ರಾದ್ಯಂತ ನಡೆಯಲಿದೆ. ಕೇಂದ್ರ ಸರ್ಕಾರದ ಸಾಧನೆ ಕುರಿತು ಪ್ರದರ್ಶಿನಿ ಆಯೋಜನೆ, ಕರಪತ್ರ ವಿತರಣೆ ನಡೆಯಲಿದೆ. ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಆಯೋಜನೆ ಮಾಡಲಾಗಿದೆ. ಪ್ರತಿ ಬೂತ್ ನಲ್ಲಿ ವನಮಹೋತ್ಸವ, ಸ್ವಚ್ಛತಾ ಅಭಿಯಾನ ಸೇರಿದಂತೆ 2030ರೊಳಗೆ ಕ್ಷಯ ನಿರ್ಮೂಲನೆ ಗುರಿ ಹಿನ್ನೆಲೆ ಕ್ಷಯರೋಗಿಗಳ ಪಟ್ಟಿಗೆ ರಾಷ್ಟ್ರಾಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದರು.

ಅಮೃತ ಸರೋವರ ಯೋಜನೆಯಡಿ ಪ್ರತಿ ತಾಲೂಕಲ್ಲಿ ಕೆರೆ ಅಭಿವೃದ್ಧಿ, ಜಲವೇ ಜೀವನ ಮಂತ್ರದಡಿ ಮಳೆ ನೀರಿನ ಶೇಖರಣೆ ಕುರಿತು ಜನಜಾಗೃತಿ ಮೂಡಿಸಲು ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ. ಸೆ.25ರಂದು ಪಂಡಿತ್ ದೀನದಯಾಳ ಜನ್ಮದಿನವನ್ನು ಬೂತ್ ಮಟ್ಟದಲ್ಲಿ ಆಚರಣೆ ಮಾಡಬೇಕು. ಗಾಂಧಿ ಜಯಂತಿಯಂದು ಆತ್ಮನಿರ್ಭರ ಕಾರ್ಯಕ್ರಮದಡಿ ಪ್ರತಿ ತಾಲೂಕಲ್ಲಿ ಖಾದಿ ವ್ಯಾಪಾರಸ್ಥರನ್ನು ಗುರುತಿಸಿ ಉತ್ತೇಜನ ನೀಡಬೇಕು ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ವಿಕಲಚೇತನರಿಗೆ ಸಲಕರಣೆ ನೀಡಲು ಕಳೆದ ವರ್ಷ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿತ್ತು. ಅದರಂತೆ ಜ. 22ರಂದು ಅಸೆಸ್ಮೆಂಟ್ ಶಿಬಿರ ನಡೆಸಿ, 1.20 ವಿಕಲಚೇತನರನ್ನು ಗುರುತಿಸಲಾಗಿತ್ತು. ಅವರಿಗೆ ಮೋದಿ ಜನ್ಮದಿನದಂದು ಕುವೆಂಪು ರಂಗಮಂದಿರದಲ್ಲಿ ಉಚಿತವಾಗಿ ಸಲಕರಣೆ ವಿತರಣೆ ಮಾಡಲಾಗುತ್ತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:05 pm, Thu, 15 September 22