BMTC Accident: ಬಿಎಂಟಿಸಿ ಬಸ್​ ಹರಿದು ಬೈಕ್​ ಸವಾರ ಸ್ಥಳದಲ್ಲೇ ಸಾವು

ಬಿಎಂಟಿಸಿ ಬಸ್​ ಹರಿದು ಬೈಕ್​ ಸವಾರ ಮೃತಪಟ್ಟ ಘಟನೆ ಬೆಂಗಳೂರಿನ ಸರ್ಜಾಪುರದ ಯಮರೆ ಬಳಿ ನಡೆದಿದೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿದ್ದು ಮೃತದೇಹ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

BMTC Accident: ಬಿಎಂಟಿಸಿ ಬಸ್​ ಹರಿದು ಬೈಕ್​ ಸವಾರ ಸ್ಥಳದಲ್ಲೇ ಸಾವು
ಬಿಎಂಟಿಸಿ ಬಸ್​ ಹರಿದು ಬೈಕ್​ ಸವಾರ ಸ್ಥಳದಲ್ಲೇ ಸಾವು
Follow us
TV9 Web
| Updated By: ಆಯೇಷಾ ಬಾನು

Updated on:Sep 15, 2022 | 11:55 AM

ಆನೇಕಲ್: ಬಿಎಂಟಿಸಿ ಬಸ್​ ಹರಿದು ಬೈಕ್​ ಸವಾರ ಮೃತಪಟ್ಟ ಘಟನೆ ಬೆಂಗಳೂರಿನ ಸರ್ಜಾಪುರದ ಯಮರೆ ಬಳಿ ನಡೆದಿದೆ. ಬೈಕ್​ಗೆ​​ ಡಿಕ್ಕಿಯಾಗಿ ಬಸ್​ ಸವಾರನ ಮೇಲೆ ಹರಿದಿದೆ.​​ ಇದರಿಂದ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿದ್ದು ಮೃತದೇಹ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡಿದ್ದ ಶಾಲಾ ಬಾಲಕ ಕೊನೆಯುಸಿರು

ಖಾಸಗಿ ಶಾಲೆಯ ಬಸ್ ಗೆ ಸರ್ಕಾರಿ ಶಾಲೆ ಬಾಲಕ ಬಲಿಯಾಗಿದ್ದಾನೆ. ಸೆ. 14ರ ಬೆಳಗ್ಗೆ ಮುನ್ನೆಕೊಳಲು ಸರ್ಕಾರಿ ಶಾಲೆಯ ವಿದ್ಯಾರ್ಥಿ ನಿತೀಶ್(6) ಶಾಲೆಗೆ ನಡೆದುಕೊಂಡು ಹೋಗುವಾಗ ರಾಯನ್ ಇಂಟರ್ ನ್ಯಾಷನಲ್ ಶಾಲೆ ಬಸ್ ಡಿಕ್ಕಿ ಹೊಡೆದಿತ್ತು. ಈ ವೇಳೆ ಕುಟುಂಬಸ್ಥರು ಆಸ್ಪತ್ರೆಗಳನ್ನು ಅಲೆದಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಇಂದು ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ.

ಶಾಲಾ ವಾಹನ ಡಿಕ್ಕಿಯಾಗಿ ಬಾಲಕನ ತಲೆಗೆ ಗಾಯ ಆಗಿತ್ತು. ಬಾಲಕನ ಚಿಕಿತ್ಸೆಗಾಗಿ ಮೂರು ಆಸ್ಪತ್ರೆಗಳಿಗೆ ಪೋಷಕರು ಅಲೆದಾಡಿದ್ದರು. ಮೂರು ಆಸ್ಪತ್ರೆಗಳಲ್ಲೂ ಬಾಲಕನಿಗೆ ಚಿಕಿತ್ಸೆ ನೀಡದ ವೈದ್ಯರು. ಮತ್ತೊಂದು ಆಸ್ಪತ್ರೆಗೆ ತೆರಳುತ್ತಿದ್ದಾಗ ಟ್ರಾಫಿಕ್ ಜಾಮ್​​ ಸಮಸ್ಯೆ ಎದುರಾಗಿತ್ತು. ಆದ್ರೆ ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣಗಳಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.

ಮಗುವನ್ನು ಗಮನಿಸದೆ ಬೀಗ ಹಾಕಿಕೊಂಡು ಹೋದ ಅಂಗನವಾಡಿ ಶಿಕ್ಷಕಿ

ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯ ನಿರ್ಲಕ್ಷ್ಯದಿಂದಾಗಿ ಮಗುವೊಂದು ಶೌಚಾಲಯ ದಲ್ಲಿಯೇ ಕಾಲ‌ಕಳೆದಿರುವ ಘಟನೆ ಕೋಲಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಆರೋಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗನವಾಡಿ ಶಿಕ್ಷಕಿ ಸುಧಾ ಹಾಗೂ ಸಹಾಯಕಿ ಶಾರದ ಎಂಬುವರ ಎಡವಟ್ಟಿನಿಂದಾಗಿ, ಗಜೇಂದ್ರ ಎಂಬ ಮಗು ಕೆಲ ಗಂಟೆಗಳ ಕಾಲ ಶೌಚಾಲಯದಲ್ಲಿಯೇ ಬಂಧಿಯಾಗಿದ್ದಾನೆ. ಅಂಗನವಾಡಿಗೆ ಹೋಗಿದ್ದ ಮಗು ಮನೆಗೆ ಬರುವ ವೇಳೆ‌ ಶೌಚಾಲಯಕ್ಕೆ ಹೋಗಿದ್ದು, ಅದನ್ನ ನೋಡದೆ ಶಿಕ್ಷಕಿ ಹಾಗೂ ಸಹಾಯಕಿ ಅಂಗನವಾಡಿ ಶೌಚಾಲಯಕ್ಕೆ ಬೀಗಜಡಿದುಕೊಂಡು ಬಂದಿದ್ದಾರೆ. ನಂತರ ಉರಲ್ಲೆಲ್ಲಾ ಮಗನಿಗಾಗಿ ಹುಡುಕಾಡಿದ ಪೋಷಕರು, ಕೊನೆಗೆ ಅಂಗನವಾಡಿ ಬಳಿ ಬಂದಾಗ. ಶೌಚಾಲಯದಲ್ಲಿ ಮಗು ಅಳುತ್ತಿರುವುದು ಕಂಡು ಬಂದಿದ್ದು, ಶೌಚಾಲಯದಲ್ಲಿ ಮಗು ಪತ್ತೆಯಾಗಿದ್ದಾನೆ. ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಬೇಜವಾಬ್ದಾರಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಮಗುವನ್ನು ಶೌಚಾಲಯದಿಂದ ಹೊರಗೆ ಕರೆತಂದ ವಿಡಿಯೋ ವೈರಲ್ ಆಗಿದೆ.

Published On - 11:37 am, Thu, 15 September 22