Power Cut: ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ
ಬೆಂಗಳೂರಿನ ಓಬಜ್ಜಿಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸವಳಂಗ ಸ್ಟೇಷನ್ನ ಎಲ್ಲ 11 ಕೆವಿ ಫೀಡರ್ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (Karnataka Power Transmission Corporation Limited – KPTCL) ಹಲವಾರು ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರವೂ ಸೇರಿದಂತೆ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ವಿವಿಧೆಡೆ ಇಂದು (ಸೆ.15) ವಿದ್ಯುತ್ ಪೂರೈಕೆ ವ್ಯತ್ಯಯಗೊಳ್ಳಲಿದೆ ಎಂದು ಬೆಸ್ಕಾಂ (Bangalore Electricity Supply Company Limited – BESCOM) ತಿಳಿಸಿದೆ. ಮಳೆಯಿಂದಾಗಿ ವಿವಿಧೆಡೆ ದುರಸ್ತಿ ಕಾಮಗಾರಿಗಳನ್ನು ನಿರ್ವಹಿಸಲು ಸಾಧ್ಯವಾಗಿರಲಿಲ್ಲ. ವಿಳಂಬಗೊಂಡಿರುವ ಕಾಮಗಾರಿಗಳನ್ನು ಇದೀಗ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದಲ್ಲಿ ಇಡೀ ತಿಂಗಳು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಬೆಸ್ಕಾಂ ಹೇಳಿದೆ.
ಬೆಂಗಳೂರಿನ ಕೆಂಗೇರಿ, ದಾವಣಗೆರೆ, ತುಮಕೂರು ಜಿಲ್ಲೆಯ ಮಧುಗಿರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹಲವು ಪ್ರಮುಖ ಕಾಮಗಾರಿಗಳನ್ನು ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಅರಂಭಿಸಲಿವೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಿನ ಓಬಜ್ಜಿಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸವಳಂಗ ಸ್ಟೇಷನ್ನ ಎಲ್ಲ 11 ಕೆವಿ ಫೀಡರ್ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ.
66ಕೆವಿ ಮಾರ್ಗಗಳು
ಮಧುಗಿರಿ, ಪುಲಮಘಟ್ಟ, ಕೊರಟಗೆರೆ 1 ಮತ್ತು 2, ಸಿರಾ 1 ಮತ್ತು 2, ನಿಟ್ರಹಳ್ಳಿ, ಮಿಡಗೇಶಿ, ಪಾವಗಡ ಎಲ್ 1 ಮತ್ತು ಎಲ್ 2, ನಾಗಲಮಡಿಕೆ, ವೈ.ಎನ್.ಹೊಸಕೋಟೆ, ಶೈಲಾಪುರದಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಡೌನ್ಸ್ಟ್ರೀಮ್ ಸ್ಟೇಷನ್ಗಳು (66 ಕೆವಿ)
ಮಧುಗಿರಿ, ಬಡವನಹಳ್ಳಿ, ಹೊಸಕೆರೆ, ಐ.ಡಿ.ಹಳ್ಳಿ, ಕೋಡಿಗೇನಹಳ್ಳಿ, ನಿಟ್ರಹಳ್ಳಿ, ಪುರವರ, ಪುಲಮಠ, ಹೊಳವನಹಳ್ಳಿ, ಮಧುಗಿರಿಯ 220 ಕೆವಿ ಟ್ರಾನ್ಸ್ಫಾರ್ಮರ್, ಶೈಲಾಪುರ, ವೈ.ಎನ್.ಹೊಸಕೋಟೆ, ನಾಗಲಮಡಿಕೆ, ಲಿಂಗದಹಳ್ಳಿ, ಮಂಗಳವಾಡ, ಪಾವಗಡ, ವೆಂಕಟಾಪುರ, ತೇರಿಯೂರು ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಅರೇನಹಳ್ಳಿ, ನಿರಂತರ ಜ್ಯೋತಿ, ಭೂತನಹಳ್ಳಿ, ಚಿನಕವಜ್ರ, ಡಿ.ವಿ.ಹಳ್ಳಿ, ಕಂಬತ್ತನಹಳ್ಳಿ, ಸಿದ್ದಾಪುರ, ದಬ್ಬಘಟ್ಟ, ಜಡೆಗೊಂಡನಹಳ್ಳಿ, ತಿಮ್ಲಾಪುರ, ರಂಗಾಪುರ, ಕವನದಾಳ, ಸಿದ್ದದರಗಲ್ಲು, ಜಯನಗರ (ಅಗ್ರಿ), ಜೆ.ವಿ.ಎನ್. ಪಾಳ್ಯ, ಕೂನಹಳ್ಳಿ, ಬಡವನಹಳ್ಳಿ (ಪಟ್ಟಣ), ದೊಡ್ಡೇರಿ, ಕಾರ್ಪೇನಹಳ್ಳಿ, ಚಂದ್ರಗಿರಿ, ಬನ್ನಗರಹಳ್ಳಿ, ಪೂಜಾರಹಳ್ಳಿ, ರಂಟವಾಳಲು, ಕೋಟಗರಲಹಳ್ಳಿ, ಬಸವನಹಳ್ಳಿ, ಸಜ್ಜಮ್ಮನಹಳ್ಳಿ, ಬಡಿಗೇನಹಳ್ಳಿ, ಬಡಿಗೇನಹಳ್ಳಿ ತಾಂಡ್ಯಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿವೆ.
ಶಿವನಗೆರೆ, ತೊಣಚಗೊಂಡನಹಳ್ಳಿ, ಕಿಟ್ಟಗಲಿ, ಬಿ ಬೆಟ್ಟ, ಚಿಕ್ಕವಳ್ಳಿ, ಹೊಳವನಹಳ್ಳಿ, ತಗರಿಘಟ್ಟ, ಹುಲಿಕುಂಟೆ, ಸುವರ್ಣಮುಕ್ಕಿ, ಗೋದ್ರಹಳ್ಳಿ, ಕೆಮೆನಹಳ್ಳಿ, ಸೋಂಪುರ, ಕೊಡ್ಲಹಳ್ಳಿ, ಬಿ.ಡಿ.ಪುರ, ಎಚ್.ವಿ.ಪಾಳ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕೆ.ಟಿ.ಹಳ್ಳಿ, ದೇವಲಕೆರೆ, ವಡನಕಲ್, ಸಿ.ಎಚ್.ಪಾಳ್ಯ, ಕೋಟಗುಡ್ಡ, ಮರಿದಾಸನಹಳ್ಳಿ, ಬೂದಿಬೆಟ್ಟ, ಬೆಳ್ಳಿಬಟ್ಲು, ಬಿ.ಹೊಸಹಳ್ಳಿ, ಎತ್ತಿನಹಳ್ಳಿ, ಗುಜ್ಜನಾಡು, ಹನುಮಂತನಹಳ್ಳಿ, ಭೀಮನಕುಂಟೆ, ದೊಡ್ಡಹಳ್ಳಿ, ಎಸ್.ಎನ್.ಹಳ್ಳಿ, ಹೊಸದುರ್ಗ, ತಿಪ್ಪಗನಹಳ್ಳಿ, ವೈ.ಎನ್.ಹೊಸಕೋಟೆ, ಜಿ.ಟಿ.ಹಳ್ಳಿ, ಜಲೋದ್, ಸ್ಟೇಷನ್ ಆಕ್ಸೆಲರಿ, ಭೀಮನಕುಂಟೆ ಮತ್ತು ಎಚ್.ವಿ.ಸ್ಟೋನ್ ಕ್ರಷರ್, ಹುಸೇನಪುರ, ಎಸ್.ಆರ್.ಪುರ, ಹೊಸಹಳ್ಳಿ, ಬಿ.ಕೆ.ಹಳ್ಳಿ, ತಿರುಮಣಿ, ಭೂಪುರ, ವಳ್ಳೂರು, ರಿಯಾಪ್ಟೆ, ಕೊಡಮೊಡುಗು, ಅರಸೀಕೆರೆ, ಮಂಗಳವಾಡ, ಮರೂರು, ಕಿರಾರ್ಲಹಳ್ಳಿ, ಕನ್ನಮಡಿ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.
ಹನುಮಸಾಗರ, ಅರಸೀಕೆರೆ, ಉದ್ದಗಟ್ಟೆ, ಬೊಮ್ಮಟನಹಳ್ಳಿ, ನೀಲಮ್ಮನಹಳ್ಳಿ, ಚಿಕ್ಕನಾಯಕನಹಳ್ಳಿ, ಪಾಲವಳ್ಳಿ, ಬೈರಾಪುರ, ಬ್ಯಾಡನೂರು, ಬುದ್ದರೆಡ್ಡಿಹಳ್ಳಿ, ಪೊನ್ನಸಮುದ್ರ, ಪಾವಗಡ, ಸಿ.ಕೆ.ಪುರ, ಗಂಗಾಸಾಗರ, ಚಂದ್ರಬಾವಿ, ರೆಡ್ಡಿಹಳ್ಳಿ, ಮೆಡಿಗೇಶಿ, ಮಲ್ಲನಾಯಕನಹಳ್ಳಿ, ಹನುಮಂತಪುರ, ಲಕ್ಷ್ಮಿಪುರ, ಜಯನಗರ ಚರ್ಚ್ ನಿಂದ ಶಕ್ತಿ ನಗರದ ಓವರ್ ಹೆಡ್ ವಾಟರ್ ಟ್ಯಾಂಕ್, ಕೊಲ್ಕುಂಟೆ, ಗಿರಿಯಾಪುರ, ಕೈದಾಳ್, ಹದಡಿ, ಕಲ್ಬಂಡೆ, ಕುಕ್ಕುವಾಡ, ಲೋಕಿಕೆರೆ, ಕನಗೊಂಡನಹಳ್ಳಿ ಮಟ್ಟಿ, ನಾಗರಸನಹಳ್ಳಿ, ಹೂವಿನಮಡು, ಕೊಲ್ಲೇನಹಳ್ಳಿ, ಬಲ್ಲೂರು ಮತ್ತು ಸುತ್ತಮುತ್ತಲಿನ ಗ್ರಾಮಗಳು, ಕುಕ್ಕುವಾಡ, ಶ್ಯಾಗಲೆ, ತ್ಯಾವಣಗಿ, ಸಂತೇಬೆನ್ನೂರು, ಬಸವಾಪಟ್ಟಣ ಮಸ್ಸ್, ಹರಿಹರ ಪಟ್ಟಣ, ಕೆಎಚ್ ಬಿ ಕಾಲೋನಿ, ಕೈಗಾರಿಕಾ ಪ್ರದೇಶ, ಕರ್ಲಹಳ್ಳಿ, ಹರಿಹರ ಗ್ರಾಮೀಣ, ದೊಗ್ಗಳ್ಳಿ, ನೀರಗುಂದ, ಅದಿರಿಕಟ್ಟೆ, ಆಲದಹಳ್ಳಿ, ಹುನವಿನೋಡು, ದೊಡ್ಡಘಟ್ಟ, ಜಾನಕಲ್ ಕೂಡ ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ.
ನಾಳೆ ವಿದ್ಯುತ್ ಕಡಿತ
ನಾಳೆ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಠಾಣೇಕಲ್ಲು, ಕಾಂತಾಪುರ, ದೇವಪುರ, ಮಜ್ಜನಹಳ್ಳಿ, ಅತ್ತಿಗೆಮಗೆ, ಹೊನ್ನೇನಹಳ್ಳಿ, ದುಗ್ಗವಾರ, ಗುಳಿಹಟ್ಟಿ, ಬೋಚೇನಹಳ್ಳಿ, ಸೀರನಕಟ್ಟೆ, ರಂಗಪ್ಪ ದೇವಸ್ಥಾನ, ಎಸ್.ಕೆ.ಹಳ್ಳಿ, ಕೆಂಕೆರೆ, ನಾಕಿಕೆರೆ, ಪೂಜಾರಹಟ್ಟಿ ಮದದಕೆರೆ, ವೇದಾವತಿ ವಾಟರ್ ವರ್ಕ್ಸ್, ಕಪ್ಪಗೆರೆ, ಕೊರಟಗೆರೆ, ಸಿದ್ದರಾಮನಗರ, ಕಂಗುವಳ್ಳಿ, ಕೆಲ್ಲೋಡು, ರಂಗವ್ವನಹಳ್ಳಿ, ಪೀಲಾಪುರ, ದೇವಿಗೆರೆ, ಕಬ್ಬರಿಪೇಟೆ ನಗರ ಬಿ.ವಿ.ನಾಗರ ಮಾವಿನಕಟ್ಟೆ, ಅತ್ತಿಘಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸೋಮೇನಹಳ್ಳಿ, ಶ್ರೀರಾಂಪುರ, ಸ್ನೇರಾಳಕೆರೆ, ಕಬ್ಬಾಳ, ಬಲ್ಲಾಳಸಮುದ್ರ, ಗರಗ, ಬೆಳಗೂರು, ಕೋಡಿಹಳ್ಳಿ, ಕಲ್ಕೆರೆ, ತೊಣಚೇನಹಳ್ಳಿ, ಗವಿರಂಗಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Published On - 11:11 am, Thu, 15 September 22