AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತೀಶ್​​ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ? ಬಿ.ಕೆ. ಹರಿಪ್ರಸಾದ್​​ಗೆ ಒಲಿದ ಅದೃಷ್ಟ?

ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪೈಪೋಟಿಗೆ ತೆರೆ ಬಿದ್ದಿದ್ದು, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ನೂತನ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಸಚಿವ ಸ್ಥಾನದ ಜೊತೆ ಅಧ್ಯಕ್ಷಗಿರಿ ಆಕಾಂಕ್ಷಿಯಾಗಿದ್ದ ಸತೀಶ್ ಜಾರಕಿಹೊಳಿಗೆ ನಿರಾಸೆಯಾಗಿದೆ. ಎರಡು ಜವಾಬ್ದಾರಿಗಳನ್ನು ಕೇಳಿರುವುದೇ ಸತೀಶ್​​ಗೆ ಮುಳುವಾಗಿರುವ ಬಗ್ಗೆ ಲೆಕ್ಕಾಚಾರಗಳು ಶುರುವಾಗಿದ್ದು, ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸತೀಶ್​​ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ? ಬಿ.ಕೆ. ಹರಿಪ್ರಸಾದ್​​ಗೆ ಒಲಿದ ಅದೃಷ್ಟ?
ಶಾಸಕ ಸತೀಶ್​​ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ?Image Credit source: deccanherald
ಪ್ರಸನ್ನ ಗಾಂವ್ಕರ್​
| Edited By: |

Updated on: Jun 03, 2026 | 11:45 AM

Share

ಬೆಂಗಳೂರು, ಜೂನ್​​ 03: ಡಿಸಿಎಂ, ಮಂತ್ರಿ ಸ್ಥಾನ ಸೇರಿ ಕೆಪಿಸಿಸಿ (KPCC) ಅಧ್ಯಕ್ಷಗಿರಿಗೂ ರಾಜ್ಯ ಕಾಂಗ್ರೆಸ್ (Congress)​​ ಪಾಳಯದಲ್ಲಿ ತೀವ್ರ ವೈಪೋಟಿ ನಡೆದಿತ್ತು. ಆದರೆ ಅದಕ್ಕೀಗ ತೆರೆಬಿದ್ದಿದೆ. ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಫಿಕ್ಸ್​​ ಎನ್ನಲಾಗಿದ್ದು, ಮಂತ್ರಿ ಸ್ಥಾನದ ಜೊತೆ ಪಕ್ಷದ ಜವಾಬ್ದಾರಿ ಕೇಳಿದ್ದ ಸತೀಶ್ ಜಾರಕಿಹೊಳಿಗೆ ಭಾರಿ ನಿರಾಸೆಯಾಗಿದೆ. ಕೆಪಿಸಿಸಿ ಅಧ್ಯಕ್ಷರ ಹುದ್ದೆ ವಹಿಸಿಕೊಳ್ಳುವಂತೆ ಹೈಕಮಾಂಡ್ ನಾಯಕರಿಂದಲೇ ಬಿ.ಕೆ. ಹರಿಪ್ರಸಾದ್‌ಗೆ ಫೋನ್‌ ಬಂದಿದ್ದು, ಹರಿಪ್ರಸಾದ್‌ಗೆ ಎಂಎಲ್‌ಸಿ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ತಿಳಿಸಿರುವ ಮಾಹಿತಿ ಇದೆ.

ಮುಖ್ಯಾಂಶಗಳು

  • ಕೆಪಿಸಿಸಿ ಅಧ್ಯಕ್ಷ ಯಾರೆಂಬುದನ್ನು ಫೈನಲ್​​ ಮಾಡಿದ ಹೈಕಮಾಂಡ್​​
  • ಬಿ.ಕೆ. ಹರಿಪ್ರಸಾದ್​​ ರಾಜ್ಯ ಕಾಂಗ್ರೆಸ್​​ ಮುಖ್ಯಸ್ಥರಾಗೋದು ನಿಶ್ಚಿತ?
  • ಶಾಸಕ ಸತೀಶ್​​ ಜಾರಕಿಹೊಳಿ ಕೈತಪ್ಪಿತಾ ಕೆಪಿಸಿಸಿ ಅಧ್ಯಕ್ಷ ಸ್ಥಾನ?

ಇನ್ನು ಬಿ.ಕೆ. ಹರಿಪ್ರಸಾದ್​​ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಸಿದ್ದರಾಮಯ್ಯ ರಾಜೀನಾಮೆ ಬಳಿಕ ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್​​ ಮುಖ್ಯಮಂತ್ರಿ ಆಗಿವುದು ನಿಶ್ಚಿತವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್​​ ಮುಖ್ಯಸ್ಥನ ಪಟ್ಟಕ್ಕಾಗಿಯೂ ತೀವ್ರ ಪೈಪೋಟಿ ನಡೆದಿತ್ತು. ಆ ಪೈಕಿ ಮುಂಚೂಣಿಯಲ್ಲಿ ಸತೀಶ್​​ ಜಾರಕಿಹೊಳಿ ಹೆಸರು ಕೇಳಿಬಂದಿತ್ತು. ಹೀಗಿದ್ದರೂ ಸಚಿವ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷಗಿರಿ ಎರಡನ್ನೂ ಅವರು ಕೇಳಿರೋದು ಹೈಕಮಾಂಡ್​​ಗೆ ತಲೆನೋವಾಗಿ ಮಾರ್ಪಟ್ಟಿತ್ತು. ಈ ನಡುವೆ ರೇಸ್​​ಗೆ ಸರ್ಪ್ರೈಸ್​​ ಆಗಿ ಹರಿಪ್ರಸಾದ್​​ ಹೆಸರೂ ಕೇಳಿಬಂದಿತ್ತು. ಆದರೆ ಈಗ ಅವರೇ ಕೆಪಿಸಿಸಿ ಅಧ್ಯಕ್ಷರಾಗೋದು ಕನ್ಫರ್ಮ್​​ ಎನ್ನಲಾಗಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಂಪುಟದಲ್ಲಿ ಪರಮೇಶ್ವರ್​ಗೆ ಮಾತ್ರ ಡಿಸಿಎಂ ಸ್ಥಾನ; ಏಕೈಕ DyCM ಆಗಿ ಪದಗ್ರಹಣ

ಸದ್ಯದ ಬೆಳವಣಿಗೆ ಬಗ್ಗೆ ಸತೀಶ್​​ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ತನಗೆ ಪಕ್ಷ ಯಾವ ಜವಾಬ್ದಾರಿ ಕೊಡುತ್ತೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅಧಿಕೃತವಾಗಿ ಮಾಹಿತಿ ಬರುವವರೆಗೂ ಕಾಯೋಣ. ಹೈಕಮಾಂಡ್ ಹೇಳಿದ್ದನ್ನ ನಾನೂ ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳಬೇಕು. ನನ್ನ ಬಗ್ಗೆ ಅಪಪ್ರಚಾರ ಮಾಡಿದವರ ಬಗ್ಗೆ ಪೊಲೀಸ್ ತನಿಖೆ ಆಗ್ತಿದೆ. ನಿಜಾಂಶ ಹೊರ ಬರುತ್ತೆ ಎಂದಿದ್ದಾರೆ. ಅಲ್ಲದೆ ಡಾ.ಜಿ.ಪರಮೇಶ್ವರ್​​ ಅವರಿಗೆ ಡಿಸಿಎಂ ಸ್ಥಾನ ಸಿಕ್ಕರೆ ಒಳ್ಳೆಯದೆ. ಅವರು ಹಿರಿಯ ದಲಿತ ನಾಯಕರು ಎಂದೂ ಸತೀಶ್​​ ಜಾರಕಿಹೊಳಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Prasanna Gaonkar
Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More