ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ದಾಖಲಾಗಿದ್ದವರ ಪೈಕಿ ಶೇ.30ರಷ್ಟು ಸೋಂಕಿತರಿಗೆ ಸಂಪೂರ್ಣ ದೃಷ್ಟಿ ಹಾನಿ -ಮಿಂಟೋ ಆಸ್ಪತ್ರೆ ವರದಿ

| Updated By: ಆಯೇಷಾ ಬಾನು

Updated on: Aug 09, 2021 | 7:20 AM

Black Fungus Effects On Eyes: ಕೊರೊನಾ 2ನೇ ಅಲೆ ವೇಳೆ ಲೆಕ್ಕಕ್ಕೇ ಬಾರದಷ್ಟು ಜನ ಸಾವಿನ ಮನೆ ಸೇರಿದ್ರು. ಆ ನಿರ್ದಯಿ ಕೊರೊನಾ ಹಾಗೂ ಬ್ಲಾಕ್‌ ಫಂಗಸ್‌ ಮುಂದೆ ಮಂಡಿಯೂರಿ ಸೋಲೊಪ್ಪಿಕೊಂಡಿದ್ರು. ಆದ್ರೆ ಅವೆಲ್ಲವನ್ನೂ ಕಣ್ಮಾರೆ ಕಂಡಿದ್ರೂ ಸಹ ನಮ್ಮ ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ. ಆದ್ರೆ ಬ್ಲ್ಯಾಕ್‌ ಫಂಗಸ್‌ಗೆ ತುತ್ತಾಗಿದ್ದವರ ಪೈಕಿ ಅದೆಷ್ಟೋ ಜನ ದೃಷ್ಟಿಹೀನರಾಗಿದ್ದಾರೆ.

ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ದಾಖಲಾಗಿದ್ದವರ ಪೈಕಿ ಶೇ.30ರಷ್ಟು ಸೋಂಕಿತರಿಗೆ ಸಂಪೂರ್ಣ ದೃಷ್ಟಿ ಹಾನಿ -ಮಿಂಟೋ ಆಸ್ಪತ್ರೆ ವರದಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ 2ನೇ ಅಲೆ(Corona 2nd Wave) ಕಂಡು ಕೇಳರಿಯದಂಥಾ ಸಂಕಷ್ಟವನ್ನ ತಂದೊಡ್ಡಿತ್ತು. ಆಸ್ಪತ್ರೆಗಳು ಫುಲ್.. ಬೆಡ್‌ಗಳು ಫುಲ್‌.. ಆಕ್ಸಿಜನ್‌ ಸಿಗದೆ, ಸ್ಮಶಾನದಲ್ಲಿ ಜಾಗ ಸಿಗದೆ.. ಸಾವು ನೋವುಗಳು.. ಅಬ್ಬಬ್ಬ.. ಒಂದಾ ಎರಡಾ.. ಆ ಪರಿಸ್ಥಿತಿ ಮಾತ್ರ ಹೇಳತೀರದು. ಅಷ್ಟರ ಮಟ್ಟಿಗೆ ಕೊರೊನಾ 2ನೇ ಅಲೆ ಜನರನ್ನ ಹಿಂಡಿ ಹಿಪ್ಪೆ ಮಾಡಿಬಿಟ್ಟಿತ್ತು. ಅಷ್ಟೇ ಅಲ್ಲ ಕೊರೊನಾ ಸೋಂಕಿತನ ಜೊತೆಗೆ ಬ್ಲಾಕ್‌ ಫಂಗಸ್‌ ಕೂಡ ಜನರ ಜೀವ ಹಿಂಡಿತ್ತು. ಬ್ಲ್ಯಾಕ್ ಫಂಗಸ್.. ವೈಟ್‌ ಫಂಗಸ್.. ಯೆಲ್ಲೋ ಫಂಗಸ್‌ ಜನರನ್ನ ಇನ್ನಿಲ್ಲದಂತೆ ಕಾಡಿತ್ತು. ಕೊರೊನಾ ಬಂದು ಹೋಯ್ತು ಅಂತ ನೆಗ್ಲೆಕ್ಟ್‌ ಮಾಡೋ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಕೊರೊನಾ ಬಂದೋರಿಗೆ ಬ್ಲ್ಯಾಕ್‌ ಫಂಗಸ್‌ ಬಂದೇ ಬರುತ್ತೆ ಅನ್ನುವಷ್ಟರ ಮಟ್ಟಿಗೆ ಕರಿ ಮಾರಿಗೆ ತುತ್ತಾದೋರ ಸಂಖ್ಯೆಯೂ ಹೆಚ್ಚಾಯ್ತು. ಈ ಸಂದರ್ಭದಲ್ಲಿ ಕೇವಲ ಮಿಂಟೋ ಆಸ್ಪತ್ರೆಯಲ್ಲೇ(Minto Hospital) ದಾಖಲಾದ ಪ್ರಕರಣಗಳನ್ನ ಕೇಳಿದ್ರೆ ಗಾಬರಿಯಾಗುತ್ತೆ.

ಶೇ.30ರಷ್ಟು ಸೋಂಕಿತರಿಗೆ ಸಂಪೂರ್ಣ ದೃಷ್ಟಿ ಹಾನಿ
ನಗರದ ಪ್ರತಿಷ್ಠಿತ ಸರ್ಕಾರಿ ಕಣ್ಣಿನ ಆಸ್ಪತ್ರೆಯಾದ ಮಿಂಟೋ ಆಸ್ಪತ್ರೆಯಲ್ಲಿ ಕೊರೊನಾ 2ನೇ ಅಲೆ ವೇಳೆ ಬರೋಬ್ಬರಿ 203 ಸೋಂಕಿತರು ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೊಳಲಾಗಿದ್ರು. ಇವ್ರ ಪೈಕಿ ಶೇಕಡಾ 30ರಷ್ಟು ಅಂದ್ರೆ ಬರೊಬ್ಬರಿ 41 ಸೋಂಕಿತರ ದೃಷ್ಟಿಗೆ ಹಾನಿಯಾಗಿತ್ತು. 20 ಸೋಂಕಿತರಿಗೆ ಎಷ್ಟೇ ಚಿಕಿತ್ಸೆ ಕೊಟ್ರೂ ದೃಷ್ಟಿ ವಾಪಸ್‌ ಬರಲೇ ಇಲ್ಲ. ಇನ್ನುಳಿದ 20 ಜನರು ಆಸ್ಪತ್ರೆಗೆ ದಾಖಲಾಗುವಾಗಲೇ ಅರ್ಧದಷ್ಟು ದೃಷ್ಟಿ ಕಳೆದುಕೊಂಡಿದ್ರು. ಇನ್ನುಳಿದ ಓರ್ವ ವ್ಯಕ್ತಿಗೆ ಎಷ್ಟರ ಮಟ್ಟಿಗೆ ತೀವ್ರತೆ ಉಂಟಾಗಿತ್ತು ಅಂದ್ರೆ ಆತನ ಎರಡು ಕಣ್ಣು ಗುಡ್ಡೆಗಳಲ್ಲೇ ವಿಧಿಯಿಲ್ಲದೆ ತೆಗೆಯಬೇಕಾಯಿತು. ಮಿಂಟೋ ಆಸ್ಪತ್ರೆ ನಿರ್ದೇಶಕರೇ ನೀಡಿರೋ ಮಾಹಿತಿ ಪ್ರಕಾರ 5ರಲ್ಲಿ 1 ಭಾಗದ ಸೋಂಕಿತರು ತಮ್ಮ ದೃಷ್ಟಿಯನ್ನ ಕಳೆದುಕೊಂಡಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ 3ನೇ ಅಲೆ ಸಹ ಬರೋ ಸಂಭವವಿದೆ. ಜನಸಾಮಾನ್ಯರು ಈ ಕ್ಷಣದಿಂದ್ಲೇ ಎಚ್ಚೆತ್ತುಕೊಳ್ಳಬೇಕಿದೆ. ಕಣ್ಣುಗಳು ಉರಿಯೋದು, ಕಣ್ಣುಗುಡ್ಡೆ ಮುಂದೆ ಬರೋದು ಹಾಗೂ ರೆಪ್ಪೆಗಳು ಮುಚ್ಚಿದಂತಾಗೋದು. ಇದ್ಯಾವುದೇ ಲಕ್ಷಣಗಳು ನಿಮಗೆ ಕಂಡು ಬಂದ್ರೂ ತಕ್ಷಣವೇ ವೈದ್ಯರನ್ನ ಸಂಪರ್ಕಿಸಬೇಕು. ಈ ರೋಗಲಕ್ಷಣಗಳೇ ಬ್ಲ್ಯಾಕ್‌ ಫಂಗಸ್‌ ಕಣ್ಣುಗಳಿಗೆ ಹರಡಿದೆ ಅನ್ನೋ ಮುನ್ಸೂಚನೆ ಆಗಿದೆ. ಮತ್ತೊಂದು ಆಘಾತಕಾರಿ ಅಂಶ ಅಂದ್ರೆ ಬರೀ ಬ್ಲ್ಯಾಕ್ ಫಂಗಸ್‌ ಬಂದು ಸಾವನ್ನಪ್ಪುವ ಸಂಭವ ಶೇಕಡಾ 50ರಷ್ಟಿದ್ರೆ, ಕೊರೊನಾ ಸಮೇತ ಬ್ಲ್ಯಾಕ್ ಫಂಗಸ್ ಬಂದ್ರೆ ಸಾವಿನ ಸಂಭವ ಶೇಕಡಾ 80ರಷ್ಟಿದೆ ಎನ್ನಲಾಗಿದೆ. ಒಟ್ನಲ್ಲಿ ಅದೇನೆ ಇರ್ಲಿ 3 ಅಲೆ ಭೀತಿಯೂ ಎದುರಾಗಿದ್ದು, ಹೀಗಾಗಿ ಜನರು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದ್ರೆ ಸಂಕಷ್ಟ ಎದುರಿಸೋದ್ರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: ಕಲಬುರಗಿ, ಮಂಡ್ಯ ಭಾಗದಲ್ಲಿ ಹೆಚ್ಚಿದ ಬ್ಲ್ಯಾಕ್​ ಫಂಗಸ್​ ಆತಂಕ; ಸೋಂಕಿತರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು