AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ, ಮಂಡ್ಯ ಭಾಗದಲ್ಲಿ ಹೆಚ್ಚಿದ ಬ್ಲ್ಯಾಕ್​ ಫಂಗಸ್​ ಆತಂಕ; ಸೋಂಕಿತರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು

ಕಲಬುರಗಿಯಲ್ಲಿ 140 ಸೋಂಕಿತರ ಪೈಕಿ, 59 ಮಂದಿ ಗುಣಮುಖರಾಗಿ ಡಿಸ್​ಚಾರ್ಜ್​ ಆಗಿದ್ದರೆ 17 ಜನ ಮೃತಪಟ್ಟಿದ್ದಾರೆ. ಮಂಡ್ಯದಲ್ಲಿ 13 ಸೋಂಕಿತರ ಪೈಕಿ ಓರ್ವ ಗುಣಮುಖರಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಕಲಬುರಗಿ, ಮಂಡ್ಯ ಭಾಗದಲ್ಲಿ ಹೆಚ್ಚಿದ ಬ್ಲ್ಯಾಕ್​ ಫಂಗಸ್​ ಆತಂಕ; ಸೋಂಕಿತರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು
ಸಾಂಕೇತಿಕ ಚಿತ್ರ
TV9 Web
| Updated By: Skanda|

Updated on: Jun 12, 2021 | 8:11 AM

Share

ಕಲಬುರಗಿ/ಮಂಡ್ಯ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಬ್ಲ್ಯಾಕ್​ ಫಂಗಸ್​ ಕಾಟ ಜೋರಾಗಲಾರಂಭಿಸಿದೆ. ಕಲಬುರಗಿ ಜಿಲ್ಲೆಯ 140 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಶಂಕಿತ ಬ್ಲ್ಯಾಕ್ ಫಂಗಸ್‌ಗೆ ಜಿಲ್ಲೆಯಲ್ಲಿ 17 ಜನ ಬಲಿಯಾಗಿದ್ದಾರೆ. ಒಟ್ಟು 140 ಪ್ರಕರಣಗಳಲ್ಲಿ 100ಜನ ಸೋಂಕಿತರು ಪುರುಷರಾಗಿದ್ದು, ಮಹಿಳೆಯರಿಗಿಂತ ಹೆಚ್ಚು ಪುರುಷರಲ್ಲೇ ಸೋಂಕು ಕಾಣಿಸಿಕೊಳ್ಳುತ್ತಿರುವುದಕ್ಕೆ ನಿಖರ ಕಾರಣಗಳೇನು ಎಂದು ತಿಳಿದುಬಂದಿಲ್ಲ. ಇತ್ತ ಮಂಡ್ಯ ಜಿಲ್ಲೆಯಲ್ಲೂ ಮತ್ತೆ ನಾಲ್ವರಿಗೆ ಬ್ಲ್ಯಾಕ್ ಫಂಗಸ್ ದೃಢಪಟ್ಟಿದ್ದು, ಒಟ್ಟು 13 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ.

ಕಲಬುರಗಿಯಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದು, ಸದ್ಯ ಬ್ಲ್ಯಾಕ್​ ಫಂಗಸ್​ ದೊಡ್ಡ ಚಿಂತೆಗೆ ಕಾರಣವಾಗಿದೆ. 140 ಸೋಂಕಿತರ ಪೈಕಿ, 59 ಮಂದಿ ಗುಣಮುಖರಾಗಿ ಡಿಸ್​ಚಾರ್ಜ್​ ಆಗಿದ್ದರೆ 17 ಜನ ಮೃತಪಟ್ಟಿದ್ದಾರೆ. ಮಂಡ್ಯದಲ್ಲಿ 13 ಸೋಂಕಿತರ ಪೈಕಿ ಓರ್ವ ಗುಣಮುಖರಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಉಳಿದ 10 ರೋಗಿಗಳಿಗೆ ಪ್ರಸ್ತುತ ವಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿನ್ನೆ (ಜೂನ್ 11) ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಳೆದ ಮೂರು ವಾರಗಳಲ್ಲಿ ಸೋಂಕಿನ ಪ್ರಮಾಣ ಶೇಕಡಾ 150ರಷ್ಟು ಹೆಚ್ಚಾಗಿದೆ. ಸೋಂಕಿತರ ಮರಣ ಪ್ರಮಾಣ ಶೇಕಡಾ 50ರಷ್ಟಿದ್ದು ದೇಶದ ನಾನಾ ಭಾಗಗಳಲ್ಲಿ ಸುಮಾರು 20 ದಿನಗಳಲ್ಲಿ 31,216 ಪ್ರಕರಣಗಳು ಪತ್ತೆಯಾಗಿ 2,109 ಮಂದಿ ಸಾವಿಗೀಡಾಗಿರುವುದು ವರದಿಯಾಗಿದೆ. ಬಹುಮುಖ್ಯವಾಗಿ ಬ್ಲ್ಯಾಕ್​ಫಂಗಸ್​ ಸೋಂಕಿನ ಚಿಕಿತ್ಸೆಗೆ ಅತ್ಯಶ್ಯಕವಾಗಿರುವ ಅಂಫೋಟೆರಿಸನ್ ಬಿ ಡ್ರಗ್ ಅಭಾವ ತೀವ್ರವಾಗಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಅಭಿಪ್ರಾಯ ತಜ್ಞರ ವಲಯದಿಂದ ಹೊರಬಿದ್ದಿದೆ.

ಗುರುವಾರದಂದು (ಜೂನ್​ 10) ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್​ಗೆ ಸಲ್ಲಿಸಿರುವ ಮಾಹಿತಿಯಲ್ಲಿ ರಾಜ್ಯದಲ್ಲಿ ಜೂನ್​ 9 ರವರಗೆ 2,282 ಬ್ಲ್ಯಾಕ್​ ಫಂಗಸ್ ಪ್ರಕರಣಗಳಿವೆ ಎಂದು ಹೇಳಿದೆ. ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎ.ಎಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠದೆದುರು ರಾಜ್ಯದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಸರ್ಕಾರದ ಪರ ನೀಡಿರುವ ಮಾಹಿತಿ ಅನ್ವಯ, 2,282 ಸೋಂಕಿತರಲ್ಲಿ 1,947 ಜನ ಚಿಕಿತ್ಸೆ ಪಡೆಯುತ್ತಿದ್ದರೆ, 102 ಜನ ಗುಣಮುಖರಾಗಿದ್ದಾರೆ. ಬ್ಲ್ಯಾಕ್​ ಫಂಗಸ್ ಸೋಂಕಿಗೆ 157 ಜನ ಬಲಿಯಾಗಿದ್ದಾರೆ ಮತ್ತು 76 ಜನರನ್ನು ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ಚಿನ್ನಪ್ಪ ಪೀಠಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ 3 ವಾರಗಳಲ್ಲಿ 31,219 ಬ್ಲ್ಯಾಕ್​ ಫಂಗಸ್ ಪ್ರಕರಣಗಳು ಮತ್ತು 2,109 ಸಾವು; ಕರ್ನಾಟಕದಲ್ಲಿ 2,282 ಕೇಸ್​, 157 ಸಾವು 

ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಗೆ ಅಗತ್ಯವಿರುವಷ್ಟು ಔಷಧ ಪೂರೈಕೆ ಆಗದಿದ್ದರೆ ಸಾವಿನ ಪ್ರಮಾಣ ಹೆಚ್ಚಳವಾಗಲಿದೆ: ಕಳವಳ ವ್ಯಕ್ತಪಡಿಸಿದ ವೈದ್ಯರು