ಬೆಂಗಳೂರು: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಬ್ಲಡ್ ಸಮಸ್ಯೆ ಎದುರಾಗಿದೆ. ಬ್ಲಡ್ ಬ್ಯಾಂಕ್‌ಗಳು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿವೆ. ಸಪ್ಟೆಂಬರ್ ತಿಂಗಳಿನಿಂದ ನವೆಂಬರ್ ವರೆಗೂ ಚೇತರಿಕೆ ಕಂಡಿದ್ದ ಬ್ಲಡ್ ಬ್ಯಾಂಕ್‌ಗಳು ಮತ್ತೆ ಸಮಸ್ಯೆ ಎದುರಿಸುತ್ತಿವೆ. ಡಿಸೆಂಬರ್ ತಿಂಗಳಿನಿಂದ ಬ್ಲಡ್ ಡೊನೇಟ್ ಪ್ರಮಾಣದಲ್ಲಿ ಭಾರೀ ಇಳಿಕೆ ಉಂಟಾಗಿದೆ. ಕೊರೊನಾ ಹೆಚ್ಚಾದ ಹಿನ್ನೆಲೆ ಬ್ಲಡ್ ಸಿಗದೆ ಬ್ಲಡ್ ಬ್ಯಾಂಕ್‌ಗಳು ಖಾಲಿಯಾಗ್ತಿದೆ ಎಂದು ಹೇಳಲಾಗಿದೆ. ಈ ಮೊದಲು ತಿಂಗಳಿಗೆ 3 ಸಾವಿರ ಯೂನಿಟ್ ಬ್ಲಡ್ ಕಲೆಕ್ಟ್ ಆಗುತ್ತಿತ್ತು. ಆದರೆ ಈಗ 800 ಯೂನಿಟ್ ಬ್ಲಡ್ ಕೂಡ ಸಿಗ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ರೋಗಿಗಳಿಗೆ ತಕ್ಷಣಕ್ಕೆ ಬ್ಲಡ್ ಬೇಕು ಅಂದ್ರೆ ಅರೆಂಜ್ ಮಾಡೋದು ಕಷ್ಟ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬ್ಲಡ್ ಸಿಗದೆ ಪರದಾಟ ಉಂಟಾಗಿದೆ ಎಂದು ತಿಳಿದುಬಂದಿದೆ. ತುರ್ತು ರಕ್ತದ ಅವಶ್ಯಕತೆ ಇರುವ ರೋಗಿಗಳು, ಅಪಘಾತಕ್ಕೊಳಗಾದ ವ್ಯಕ್ತಿಗಳು ಮುಂತಾದವರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆದರೆ, ಇದೀಗ ರಕ್ತದಾನ ಮಾಡುವ ಪ್ರಮಾಣ ಮತ್ತೆ ಇಳಿಕೆ ಆಗಿದ್ದು ಬ್ಲಡ್ ಬ್ಯಾಂಕ್ಗಳಲ್ಲಿ ಸಮಸ್ಯೆ ಎದುರಾಗಿದೆ.
ರಕ್ತದಾನ ಪ್ರಮಾಣ ಇಳಿಕೆಗೆ ಕಾರಣವೇನು?
ಆರೋಗ್ಯವಂತರು ರಕ್ತದಾನ ಮಾಡುವಂತೆ ಮನವಿ
ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತದ ಕೊರತೆ ಹಿನ್ನೆಲೆ ಆರೋಗ್ಯವಂತರು ರಕ್ತದಾನ ಮಾಡುವಂತೆ ಬ್ಲಡ್ ಬ್ಯಾಂಕ್‌ಗಳು ಮನವಿ ಮಾಡಿವೆ. ರೆಡ್ ಕ್ರಾಸ್ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ರಕ್ತ ಸಿಗುತ್ತಿಲ್ಲ. ಹೀಗಾಗಿ ತೀರಾ ಎಮರ್ಜೆನ್ಸಿ ಇದ್ದವರಿಗೆ ಮಾತ್ರ ಬ್ಲಡ್ ಸಿಗುತ್ತಿದೆ. ಸಮಸ್ಯೆ ಹೇಗೆ ನಿಭಾಯಿಸೋದು ಎಂದು ಬ್ಲಡ್ ಬ್ಯಾಂಕ್ ಗಳಿಗೆ ಚಿಂತೆಯಾಗಿದೆ.
ಕಳೆದ ವರ್ಷ ಕೊವಿಡ್ ಸಂದರ್ಭದಲ್ಲಿ ಕೂಡ ಇದೇ ಸಮಸ್ಯೆ ಎದುರಾಗಿತ್ತು. ಸ್ವಲ್ಪ ಚೇತರಿಕೆ ಕಾಣುವಷ್ಟುವರಲ್ಲಿ ಮತ್ತೆ ರಕ್ತಕ್ಕೆ ಕೊರತೆ ಎದುರಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ವ್ಯಾನ್ ನಿಲ್ಲಿಸಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ತುರ್ತಾಗಿ ಬ್ಲಡ್ ಸಿಗದೆ ಯಾರಿಗೆಲ್ಲ ಸಮಸ್ಯೆ ಆಗ್ತಿದೆ?
ಇದನ್ನೂ ಓದಿ: ರಕ್ತದಾನ ಮಾಡುವ ಅಭ್ಯಾಸ ಇದೆಯೇ? ಇದರ ಹಿಂದಿನ ಆರೋಗ್ಯ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ
ಇದನ್ನೂ ಓದಿ: Blood Pressure: ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಇಲ್ಲಿದೆ ಮಾಹಿತಿ
Published On - 9:59 am, Mon, 24 January 22