ಡೆಡ್ಲಿ ಮೆಟ್ರೋ ದುರಂತ: 3 ಅಧಿಕಾರಿಗಳ ಸಸ್ಪೆಂಡ್, ಇನ್ಮುಂದೆ ಫಿಲ್ಲರ್ ಕಟ್ಟುವಾಗ ಮುನ್ನೆಚ್ಚರಿಕೆ ಸಭೆ ಮಾಡ್ತೀವಿ- ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಂ

| Updated By: ಸಾಧು ಶ್ರೀನಾಥ್​

Updated on: Jan 11, 2023 | 1:38 PM

BMRCL MD: 12 ಅಡಿಗಿಂತ ಎತ್ತರದ ಟಾಲ್ ಫಿಲ್ಲರ್ ಕಟ್ಟುವಾಗ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸಭೆ ಮಾಡ್ತೀವಿ. ರೈಲ್ವೆ ಸೇರಿ ಬೇರೆಡೆ ಕೆಲಸ ನಿರ್ವಹಿಸಿದವರನ್ನೇ ನೇಮಕ ಮಾಡುತ್ತೇವೆ - ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್

ಡೆಡ್ಲಿ ಮೆಟ್ರೋ ದುರಂತ: 3 ಅಧಿಕಾರಿಗಳ ಸಸ್ಪೆಂಡ್, ಇನ್ಮುಂದೆ ಫಿಲ್ಲರ್ ಕಟ್ಟುವಾಗ ಮುನ್ನೆಚ್ಚರಿಕೆ ಸಭೆ ಮಾಡ್ತೀವಿ- ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಂ
ಡೆಡ್ಲಿ ಮೆಟ್ರೋ ದುರಂತ: ಇನ್ಮುಂದೆ ಫಿಲ್ಲರ್ ಕಟ್ಟುವಾಗ ಮುನ್ನೆಚ್ಚರಿಕೆ ಸಭೆ ಮಾಡ್ತೀವಿ- ಅಂಜುಂ ಪರ್ವೇಜ್
Image Credit source: metrorailnews.in
Follow us on

ಬೆಂಗಳೂರು: ಡೆಡ್ಲಿ ಮೆಟ್ರೋ (Namma Metro) ಕಾಮಗಾರಿ ವೇಳೆ ಬೈಹದಾಕಾರದ ಕಂಬಿ ಕುಸಿದು ತಾಯಿ ಮತ್ತು ಮಗು ಮೃತಪಟ್ಟ ಪ್ರಕರಣದ ಸಂಬಂಧ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ (BMRCL MD Anjum Parvez) ಹೇಳಿದ್ದಾರೆ. ಡೆಪ್ಯೂಟಿ ಚೀಫ್​​ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಸೆಕ್ಷನ್ ಸೂಪರ್​​ವೈಸರ್ ಅವರುಗಳ​ನ್ನು ಅಮಾನತು (Suspend) ಮಾಡಲಾಗಿದೆ ಎಂದು ಎಂಡಿ ಪರ್ವೇಜ್ ಹೇಳಿದ್ದಾರೆ.

ಇನ್ಮುಂದೆ 12 ಅಡಿಗಿಂತ ಎತ್ತರದ ಟಾಲ್ ಫಿಲ್ಲರ್ ಕಟ್ಟುವಾಗ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸಭೆ ಮಾಡ್ತೀವಿ:

ಪೊಲೀಸ್​ ತನಿಖೆ ಬಳಿಕ ನಿಜವಾದ ಕಾರಣ ಏನು ಎಂಬುದು ಗೊತ್ತಾಗುತ್ತೆ. IISCಗೆ ಪತ್ರ ಬರೆದು ಅಧ್ಯಯನ ಮಾಡಿ ವರದಿ ನೀಡುವಂತೆ ಕೇಳಿದ್ದೇವೆ. IISC ಜೊತೆಗೆ BMRCL, ರೈಟ್ಸ್​​ ಸಂಸ್ಥೆಯು ಕೂಡ ವರದಿ ನೀಡಲಿದೆ. ಘಟನೆ ಸಂಬಂಧ ಗುತ್ತಿಗೆದಾರರಿಗೂ ನೋಟಿಸ್​ ನೀಡಿದ್ದೇವೆ ಎಂದು ಪರ್ವೇಜ್ ಸ್ಪಷ್ಟಪಡಿಸಿದ್ದಾರೆ. ಗುತ್ತಿಗೆದಾರನಿಗೆ BMRCLನಿಂದ ಮತ್ತೊಂದು ನೋಟಿಸ್ ನೀಡುತ್ತಿದ್ದೇವೆ.

ಪಿಲ್ಲರ್​​ ನಿರ್ಮಾಣ ಸಮಯದಲ್ಲಿ ಎಚ್ಚರಿಕೆ ವಹಿಸುವಂತೆ ಸಲಹೆ ನೀಡ್ತೀವಿ. 12 ಅಡಿಗಿಂತ ಎತ್ತರದ ಟಾಲ್ ಫಿಲ್ಲರ್ ಕಟ್ಟುವಾಗ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸಭೆ ಮಾಡ್ತೀವಿ. ರೈಲ್ವೆ ಸೇರಿ ಬೇರೆಡೆ ಕೆಲಸ ನಿರ್ವಹಿಸಿದವರನ್ನೇ ನೇಮಕ ಮಾಡುತ್ತೇವೆ. BMRCLನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವೈಯರ್ ಕಟ್ಟಾಗಿರುವುದೇ ಘಟನೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಪಿಲ್ಲರ್​​ಗೆ ಅಳವಡಿಸಿರುವ ವೈಯರ್ ಯಾಕೆ ಕಟ್ಟಾಗಿದೆ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂದು ಬಿಎಂಆರ್​ಸಿಎಲ್​ ಎಂಡಿ ಅಂಜುಂ ಪರ್ವೇಜ್ ಘಟನೆಯ ಮಾರನೆಯ ದಿನ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ನಗರಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Wed, 11 January 23