ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ದೇಹದಾರ್ಢ್ಯಪಟು ಶವ ಪತ್ತೆ
ಕೆ.ಆರ್.ಪುರಂ ಬಳಿಯ ಹೀರಂಡಹಳ್ಳಿಯಲ್ಲಿ ಕಾಲೇಜು ಓದುವುದರ ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದ ಶ್ರೀನಾಥ್ ಎಂಬ ಯುವಕನು ನಿನ್ನೆ(ಜ.10) ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ.
ಬೆಂಗಳೂರು: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಿವಾಸಿಯಾಗಿರುವ ಶ್ರೀನಾಥ್. ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಡಿ ಫಾರ್ಮ್ ಓದುತ್ತಿದ್ದು, ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದ ಶ್ರೀನಾಥ್. ವಾಸವಿದ್ದ ಕೊಠಡಿಯಲ್ಲಿ ನಿನ್ನೆ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯೂ, ಕೊಲೆಯೋ ತಿಳಿದು ಬಂದಿಲ್ಲ. ಮಗನನ್ನ ಕಳೆದುಕೊಂಡು ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಜಿಮ್ ಮಾಡುವ ಕನಸು ಕಂಡಿದ್ದ ಮೃತ ಶ್ರೀನಾಥ್ ಗೌಡ. ಮನೆಯಿಂದ ಮೂರು ಲಕ್ಷ ರೂಪಾಯಿ ತಂದಿದ್ದನಂತೆ. ಸ್ನೇಹಿತನ ಜೊತೆ ಮನೆ ಮಾಡಿಕೊಂಡು ವಾಸವಾಗಿದ್ದ ಶ್ರೀನಾಥ್. ಎಲ್ಲ ಚೆನ್ನಾಗಿರುವಾಗಲೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಆತನ ಕೊಠಡಿಯಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಡೆತ್ ನೋಟ್ ಪತ್ತೆಯಾಗದ ಹಿನ್ನಲೆ ಮೃತನದ್ದು ಆತ್ಮಹತ್ಯೆಯಲ್ಲ ಕೊಲೆ ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನು ಈ ಕುರಿತು ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯ ನಂತರ ಸತ್ಯಾಂಶ ಹೊರಬರಬೇಕಿದೆ.
ಖಾಸಗಿ ಕಾಲೇಜಿನ ವಿದ್ಯಾರ್ಥಿ ನೇಣಿಗೆ ಶರಣು; ಜಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು: ಎಲ್ ಎಲ್ ಬಿ ಫೈನಲ್ ಇಯರ್ ಓದುತ್ತಿದ್ದ ರಿಜ್ವಾನ್(25) ಎಂಬ ಯುವಕ ಕೆ.ಜಿ ಹಳ್ಳಿಯ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಒಂದೂವರೆ ವರ್ಷದ ಹಿಂದೆ ಮದ್ವೆಯಾಗಿದ್ದ ರಿಝ್ವಾನ್. ಆರ್.ಟಿ ನಗರದಲ್ಲಿರುವ ಪೊಷಕರ ಜೊತೆಯಲ್ಲಿ ಪತ್ನಿ ವಾಸವಿದ್ದಳು. ಒಂಟಿಯಾಗಿ ಕೆಜಿ ಹಳ್ಳಿಯಲ್ಲಿ ವಾಸವಿದ್ದ ಮೃತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣದ ಬಗ್ಗೆ ಪೊಲೀಸರ ತನಿಖೆ ಮಾಡುತ್ತಿದ್ದಾರೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ:Lyme Disease: ಲೈಮ್ ಕಾಯಿಲೆಯು ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆ ಅಪಾಯ ಹೆಚ್ಚಿಸುತ್ತದೆ: ಅಧ್ಯಯನ
ಅಪಾರ್ಟ್ಮೆಂಟ್ಗಳಲ್ಲಿ ಶೂ ಕಳ್ಳನ ಹಾವಳಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬೆಂಗಳೂರು: ಹೊರಮಾವು ಬಳಿ ಇರುವ ವಜ್ರ ಹಾಗೂ ನಭಾ ವೈಭವ್ ಅಪಾರ್ಟ್ಮೆಂಟ್ನಲ್ಲಿ ದುಬಾರಿ ಬೆಲೆಯ ಶೂ ಕದ್ದು ಪರಾರಿಯಾಗುತ್ತಿದ್ದ ಕಳ್ಳ. ಅಪಾರ್ಟ್ಮೆಂಟ್ನ ಪ್ರತಿ ಪ್ಲಾಟ್ಗೆ ಹೋಗಿ ಅನಾಯಾಸವಾಗಿ ಶೂ ಕದಿಯುತ್ತಿದ್ದು ಗೋಣಿಚೀಲದಲ್ಲಿ ಶೂಗಳನ್ನ ತುಂಬಿ ಸೆಕ್ಯೂರಿಟಿ ಗಾರ್ಡ್ನ ಚೇರ್ ಬಳಸಿ ಗೋಡೆ ಹಾರಿ ಎಸ್ಕೇಪ್ಯಾಗುತ್ತಿದ್ದ ಕಳ್ಳನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ನಿವಾಸಿಗಳು ಆನ್ ಲೈನ್ನಲ್ಲಿ ದೂರು ಸಲ್ಲಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 am, Wed, 11 January 23