Chikmagalur Politics: ಜ 14ಕ್ಕೆ ಜೆಡಿಎಸ್ನಿಂದ ಕಾಂಗ್ರೆಸ್ಗೆ ವೈಎಸ್ವಿ ದತ್ತ
YSV Datta: ಹೆಚ್ಡಿ ದೇವೇಗೌಡರ ‘ಮಾನಸಪುತ್ರ’ನೆಂದೇ ಖ್ಯಾತಿಯಾಗಿದ್ದ ವೈಎಸ್‍ವಿ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ.
ಬೆಂಗಳೂರು: ಶಾಸಕ H.ನಾಗೇಶ್, YSV ದತ್ತಾ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 14ರಂದು ಮುಳಬಾಗಿಲು ಶಾಸಕ ಹೆಚ್.ನಾಗೇಶ್ ಹಾಗೂ YSV ದತ್ತಾ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಹೆಚ್.ನಾಗೇಶ್ ಮುಳಬಾಗಿಲು ಕ್ಷೇತ್ರದ ಟಿಕೆಟ್ ಕೊಡಿ ಎಂದು ಕಾಂಗ್ರೆಸ್ಗೆ ಕೇಳಿದ್ದಾರೆ. ಆದ್ರೆ ಮುಳಬಾಗಿಲು ಬೇಡ, ಮಹದೇವಪುರ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ರಾಜ್ಯ ಕಾಂಗ್ರೆಸ್ ವರಿಷ್ಠರು ತಿಳಿಸಿದ್ದಾರೆ. ಕಾಂಗ್ರೆಸ್ ವರಿಷ್ಠರ ಮಾತಿಗೆ ಶಾಸಕ ಹೆಚ್.ನಾಗೇಶ್ ಒಪ್ಪಿಗೆ ನೀಡಿದ್ದಾರೆ. ಮಹಾದೇವಪುರ ಕ್ಷೇತ್ರಕ್ಕೆ ಹೆಚ್ ನಾಗೇಶ್ ಕಾಂಗ್ರೆಸ್ ಅಭ್ಯರ್ಥಿ ಆಗುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಕಡೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಆಗಿರುವ ವೈಎಸ್ ವಿ ದತ್ತ ಅವರು ಭಿನ್ನಾಭಿಪ್ರಾಯಗಳ ನಡುವೆಯೂ ಟಿಕೆಟ್ ಸಿಗುವ ಭರವಸೆ ಹೊಂದಿದ್ದಾರೆ.
ಜೆಡಿಎಸ್ನಿಂದ ಕಾಂಗ್ರೆಸ್ಗೆ YSV ದತ್ತಾ
ಹೆಚ್ಡಿ ದೇವೇಗೌಡರ ‘ಮಾನಸಪುತ್ರ’ನೆಂದೇ ಖ್ಯಾತಿಯಾಗಿದ್ದ ವೈಎಸ್‍ವಿ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ವೈಎಸ್‍ವಿ ದತ್ತಾ ಜೆಡಿಎಸ್ ತೊರೆಯುತ್ತಿರುವುದು ಅಧಿಕೃತವಾದ ಬಳಿಕ ಜೆಡಿಎಸ್ ಕೆಲ ನಾಯಕರು ಆಕ್ರೋಶ ಹೊರ ಹಾಕಿದ್ದರು. ದೇವೇಗೌಡರ ಜೊತೆ ತಂದೆ-ಮಗನಂತೆ ಇದ್ದು ಎಲ್ಲವನ್ನೂ ಸಂಪಾದಿಸಿ, ಖ್ಯಾತಿ ಪಡೆದು ಈಗ ಪಕ್ಷ ತೊರೆಯುವ ಮೂಲಕ ದ್ರೋಹ ಮಾಡುತ್ತಿದ್ದಾರೆ ಎಂಬ ಕೂಗುಗಳು ಕೇಳಿ ಬಂದಿದ್ದವು.
ಇದನ್ನೂ ಓದಿ: ಶೀಘ್ರವೇ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತೇನೆ: ಬೆಂಗಳೂರಿನಲ್ಲಿ ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿಕೆ
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೊತ್ತೂರು ಮಂಜುನಾಥ್ ಅವರು ಕೆಲವು ಕಾರಣಗಳಿಂದ ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಆಗ ಕಾಂಗ್ರೆಸ್ ಪಕ್ಷ ನಾಗೇಶ್ ಅವರನ್ನು ಬೆಂಬಲಿಸಿತ್ತು. ಈ ಕಾರಣದಿಂದ ನಾಗೇಶ್ ಗೆಲುವು ಸಾಧಿಸಿದ್ದರು. ಮೈತ್ರಿ ಸರಕಾರದ ಅವಧಿಯಲ್ಲಿ ಸರಕಾರವನ್ನು ಬೆಂಬಲಿಸಿದ್ದ ನಾಗೇಶ್ ಬಳಿಕ ಆಪರೇಷನ್ ಕಮಲದ ಮೂಲಕ ಹುಟ್ಟಿಕೊಂಡ ಬಿಜೆಪಿ ನೇತೃತ್ವದ ಸರ್ಕಾರದ ಬೆಂಬಲಕ್ಕೆ ನಿಂತರು. ಈ ವೇಳೆ ಅವರನ್ನು ಮಂತ್ರಿ ಮಾಡಿ ಅಬಕಾರಿ ಖಾತೆಯನ್ನೂ ನೀಡಲಾಗಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:14 am, Wed, 11 January 23