ಬಿಎಂಟಿಸಿ ಎಂಡಿ ಸಹಿ ನಕಲು: 18 ಅಧಿಕಾರಿಗಳ ವರ್ಗ

| Updated By: ವಿವೇಕ ಬಿರಾದಾರ

Updated on: Feb 05, 2023 | 12:42 PM

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಸಹಿಯನ್ನು ನಕಲು ಮಾಡಿದ್ದ 18 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂ.ಡಿ ಸತ್ಯವತಿ ಆದೇಶ ಹೊರಡಿಸಿದ್ದಾರೆ.

ಬಿಎಂಟಿಸಿ ಎಂಡಿ ಸಹಿ ನಕಲು: 18 ಅಧಿಕಾರಿಗಳ ವರ್ಗ
ಬಿಎಂಟಿಸಿ ಬಸ್​
Follow us on

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಸಾರಿಗೆ (BMTC) ವ್ಯವಸ್ಥಾಪಕ ನಿರ್ದೇಶಕರ ಸಹಿಯನ್ನು ಅಧಿಕಾರಿಗಳು ನಕಲು ಮಾಡಿದ್ದ ಪ್ರಕರಣ ಬಯಲಾದ ಬೆನ್ನಲ್ಲೇ ಕೇಂದ್ರ ಕಚೇರಿಯಲ್ಲಿ ಮೇಜರ್ ಸರ್ಜರಿ ನಡೆದಿದೆ. ಸಹಿಯನ್ನು ನಕಲು ಮಾಡಿದ್ದ 18  ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂ.ಡಿ ಸತ್ಯವತಿ ಆದೇಶ ಹೊರಡಿಸಿದ್ದಾರೆ.

ವರ್ಗಗೊಂಡ ಅಧಿಕಾರಿಗಳು

1. ಶ್ಯಾಮಲಾ ಮುದ್ದೋಡಿ, ವಿಭಾಗೀಯ ಸಂಚಾರಿ ಅಧಿಕಾರಿ ಸಂಚಾರಿ ವಾಣಿಜ್ಯ ಶಾಖೆ

2. ಪ್ರತಿಮಾ ಎಸ್ ವಿ ವಿಭಾಗೀಯ ಸಂಚಾರಿ ಅಧಿಕಾರಿ

3. ಅನಿತಾ ಟಿ ಸಹಾಯಕ ಸಂಚಾರ ಅಧೀಕ್ಷಕಿ ಸಂಚಾರಿ ವಾಣಿಜ್ಯ ಶಾಖೆ

4. ಮೋಹನ್ ಬಾಬು, ಸಹಾಯಕ ಸಂಚಾರಿ ಅಧೀಕ್ಷಕ

5. ಸತೀಶ್- ಸಂಚಾರಿ ನಿರೀಕ್ಷಕ ಸಂಚಾರಿ ವಾಣಿಜ್ಯ ಶಾಖೆ

6. ಗುಣಶೀಲ, ಸಹಾಯಕ ಸಂಚಾರಿ ನಿರೀಕ್ಷಕಿ, ಸಂಚಾರಿ ವಾಣಿಜ್ಯ ಶಾಖೆ

7. ಪವಿತ್ರ, ಸಹಾಯಕ ಸಂಚಾರಿ ನಿರೀಕ್ಷಕಿ ಸಂಚಾರ ಆಚರಣೆ ಶಾಖೆ

8. ಲಕ್ಷ್ಮಿನಾರಾಯಣ, ಸಹಾಯಕ ನಿಯಂತ್ರಕ.

9. ರಮೇಶ್, ಸಂಚಾರಿ ನಿಯಂತ್ರಕ

10. ಗಣಪಯ್ಯ ಸಹಾಯಕ ಲೆಕ್ಕಿಗ

11. ಸುದೇವಿ, ಸಹಾಯಕಿ

12. ಬಿ ಎಸ್ ಲತಾ, ಸಹಾಯಕಿ

13. ಪ್ರಸನ್ನ ಕುಮಾರ್ ಅಂಗಡಿ, ಕಿರಿಯ ಸಹಾಯಕ

14. ಪರಮೇಶ್ವರ್ ಕುಶಲಕರ್ಮಿ

15. ಮಂಜುಳ, ನಿರ್ವಾಹಕಿ

16. ಕಾರ್ತಿಕ ಜಿ, ಕಚೇರಿ ಸಹಾಯಕ

17. ಮುನಿರಾಜ್ ಎಸ್, ಕಚೇರಿ ಸಹಾಯಕ

18. ಚೇತನ ಸಂಚಾರಿ ನಿರೀಕ್ಷಕಿ

BMTC ಗುಜರಿ ವಸ್ತುಗಳ ಮಾರಾಟದಲ್ಲಿ ಅಕ್ರಮ: ಕಳ್ಳ ಲೆಕ್ಕ ನೀಡಿದ ಅಧಿಕಾರಿಗಳು

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಸಾರಿಗೆ (BMTC)ಯಲ್ಲಿನ ಭ್ರಷ್ಟಾಚಾರ ಬಯಲಿಗೆ ಬಂದಿದೆ. ನಿಗಮದ ಗುಜರಿ ವಸ್ತುಗಳ ಮಾರಾಟದ ವೇಳೆ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ನಿಗಮದಲ್ಲಿ ಗುಜರಿ ವಸ್ತುಗಳ ಮಾರಾಟದ ವೇಳೆ ವೀಡಿಯೋ ಚಿತ್ರೀಕರಣ ಮಾಡುವುದು ಕಡ್ಡಾಯ. ಆದರೆ ಗುಜರಿ ವಸ್ತುಗಳ ತೂಕದ ವೇಳೆ ಅಧಿಕಾರಿಗಳು ಅರ್ಧ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ಮೂಲಕ ತೂಕದಲ್ಲಿ ಗೋಲ್ಮಾಲ್ ಮಾಡಿ ಗುಜರಿ ವಸ್ತುಗಳನ್ನು ಕದ್ದಿರುವ ಆರೋಪ ಕೇಳಿಬಂದಿದೆ. ಭದ್ರತಾ ಜಾಗೃತ ದಳ ವಿಭಾಗದ ಭೂತರಾಜು, ಉಪಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಪಾಪಣ್ಣ ಕೋಟ್ಯಾಂತರ ರೂಪಾಯಿ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ.

ಅರ್ಧ ವಿಡಿಯೋ ಚಿತ್ರೀಕರಣ ಮಾಡಿದಾಗ ಅಧಿಕಾರಿಗಳು ನಿಗಮಕ್ಕೆ 32,89,052 ರೂ. ಆದಾಯ ತೋರಿಸಿದ್ದರು. ಚಿತ್ರೀಕರಣ ಆಫ್ ಮಾಡಿದಾಗ ಬಿಎಂಟಿಸಿಗೆ 13,89,785 ರೂ. ಆದಾಯ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸಾಕ್ಷಿ ಸಮೇತ ಅಧಿಕಾರಿಗಳ ಮೇಲೆ ದೂರು ಇದೆ. ಈ ಬಗ್ಗೆ ಅಧಿಕಾರಿಗಳಿಗೆ ಬಿಎಂಟಿಸಿ ಕೇವಲ ನೋಟೀಸ್ ನೀಡಿ ಸುಮ್ಮನಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ