Bengaluru: ಬೆಂಗಳೂರಿನಲ್ಲಿ ಜನನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ 85 ಶ್ವಾನಗಳು ಬಲಿ, ವೈದ್ಯರ ಮೇಲೆ ಗಂಭೀರ ಆರೋಪ
ಸೋಂಕುಗಳನ್ನು ತಡೆಯುವ ಮತ್ತು ರೋಗ ನಿರೋಧಕ ವ್ಯಾಕ್ಸೀನ್ ಗಳು ಸಿಗದೆ ಹಲವಾರು ಶ್ವಾನಗಳು ಬಲಿಯಾಗಿವೆ. ಪಶೋಸಂಗೋಪನಾ ಇಲಾಖೆಯ ವೈದ್ಯರೆ ಈ ಶ್ವಾನಗಳ ಸಾವಿಗೆ ಮುಖ್ಯ ಕಾರಣ. ಕಡ್ಡಾಯ ವ್ಯಾಕ್ಸಿನೇಷನ್ ಇಲ್ಲದೆ ಕನಿಷ್ಠ 85 ಶ್ವಾನಗಳು ಬಲಿಯಾಗಿವೆ ಎಂದು ಡೆಕ್ಕನ್ ಹೆರಾಲ್ಡ್ ಪ್ರತಿಕೆ ವರದಿಯಲ್ಲಿ ನೆವೀನಾ ಕಾಮತ್(activist) ತಿಳಿಸಿದ್ದಾರೆ
ಬೆಂಗಳೂರು: ಕಡ್ಡಾಯ ವ್ಯಾಕ್ಸಿನೇಷನ್ ಇಲ್ಲದೆ ಕನಿಷ್ಠ 85 ಶ್ವಾನಗಳು ಬಲಿಯಾಗಿವೆ ಎಂದು ಡೆಕ್ಕನ್ ಹೆರಾಲ್ಡ್ ಪ್ರತಿಕೆ ವರದಿಯಲ್ಲಿ ನೆವೀನಾ ಕಾಮತ್(activist) ತಿಳಿಸಿದ್ದಾರೆ. ನೆವೀನಾ ಕೊಟ್ಟ ದೂರಿನ ಪ್ರಕಾರ ಬೆಂಗಳೂರು ದಕ್ಷಿಣ ವಲಯದಲ್ಲಿ ಶ್ವಾನಗಳಿಗೆ ಜನನ ನಿಯಂತ್ರಣ ಶಸ್ತ್ರ ಚಿಕಿತ್ಸೆ ನಂತರ ಸರಿಯಾದ ವೈದ್ಯಕೀಯ ಸಹಾಯ ಸಿಗದೆ ವೈದ್ಯರ ನಿರ್ಲಕ್ಯಕ್ಕೆ ಬಲಿಯಾಗುತ್ತಿದೆ ಎಂದಿದ್ದಾರೆ. ಈಗಾಗಲೇ ಸೋಂಕುಗಳನ್ನು ತಡೆಯುವ ಮತ್ತು ರೋಗ ನಿರೋಧಕ ವ್ಯಾಕ್ಸೀನ್ ಗಳು ಸಿಗದೆ ಹಲವಾರು ಶ್ವಾನಗಳು ಬಲಿಯಾಗಿವೆ. ಪಶೋಸಂಗೋಪನಾ ಇಲಾಖೆಯ ವೈದ್ಯರೆ ಈ ಶ್ವಾನಗಳ ಸಾವಿಗೆ ಮುಖ್ಯ ಕಾರಣ ಎಂದು ಆರೋಪಿಸಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಪಶೋಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ ಎಂ.ಜಿ ಹಳ್ಳಿ ಶಿವರಾಂ ಅವರೆ ನೇರ ಹೊಣೆ ಎಂದು ಗಂಭೀರ ಆರೋಪ ಮಾಡಿದ್ದಾರೆ ನೆವೀನಾ ಕಾಮತ್.
“ಡಾ. ಶಿವರಾಂ ನಾಯಕತ್ವದಲ್ಲಿ ಕೆಲಸ ಮಾಡುತ್ತಿದ್ದ ತಂಡದವರು ಶಸ್ತ್ರ ಚಿಕಿತ್ಸೆ ಬಳಲಿಕೆ ಶ್ವಾನಗಳ ಕಾಳಜಿ ಸರಿಯಾಗಿ ವಹಿಸದೆ ತಂದು ಬೀದಿಯಲ್ಲಿ ಬಿಟ್ಟಿರುವದರಿಂದ ಶವನಗಳು ಸಾಯುತ್ತಿವೆ ಎಂದು ಶ್ವಾನಗಳಿಗೆ ಆಹಾರ ನೀಡುವವರು ನನಗೆ ತಿಳಿಸಿದ್ದಾರೆ. ಇದಲ್ಲದೆ ಬಿಬಿಎಂಪಿ ಎಬಿಸಿ(ಶ್ವಾನ) ನಿಯಮ, 2001 ಕಾಯ್ದೆ ಅಡಿಯಲ್ಲಿ ಬರುವ ನಿಯಮಗಳನ್ನು ಪಾಲಿಸದೆ 85 ಶ್ವಾನಗಳು ಬಲಿಯಾಗಿವೆ“, ಎಂದಿದ್ದಾರೆ ನೆವಿನಾ.
ದವಡೆ ಹಲ್ಲಿನ ಕಾಯಿಲೆ ಇರುವ ಶ್ವಾನಗಳನ್ನು ಜನನ ನಿಯಂತ್ರಣ ಶಸ್ತ್ರಚಿಕಿತ್ಸೆಗಾಗಿ ಚಾಮರಾಜಪೇಟೆಯಲ್ಲಿರುವ ಅನಿಮಲ್ ಬರ್ತ್ ಕಂಟ್ರೋಲ್ ಸೆಂಟರ್ ಗೆ ಕರೆದೊಯ್ಯಲಾಗುತ್ತದೆ. ಈ ಶ್ವಾನಗಳು ಬೀದಿಗೆ ಮರಳಿದ ಕೆಲವು ವಾರಗಳಲ್ಲಿ ಸಾಯುತ್ತಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿದರೂ ಏನು ಪ್ರಯೋಜನವಾಗಿಲ್ಲ ಎಂದು ನೆವಿನಾ ತಿಳಿಸಿದ್ದಾರೆ.
ಇದನ್ನೂ ಓದಿ: ಕಾರಿಗೆ ನಾಯಿ ಡಿಕ್ಕಿ, 70 ಕಿ.ಮೀ ಪ್ರಯಾಣದ ಬಳಿಕ ಬಂಪರಿನೊಳಗೆ ಶ್ವಾನ ಪ್ರತ್ಯಕ್ಷ
ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ(Prevention of Animal Act)ಯಲ್ಲಿ ದಾಖಲಿಸಿಕೊಂಡಿದ್ದಾರೆ. “ದೂರುದಾರರು ಸಾವಿನ ನಿಖರವಾದ ಎಣಿಕೆಯನ್ನು ನೀಡಿಲ್ಲ. ನಾವು ಸಂಬಂಧಪಟ್ಟ ಅಧಿಕಾರಿಯನ್ನು ವಿಚಾರಣೆಗೆ ಕರೆಯುತ್ತೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಡೆಕ್ಕನ್ ಹೆರಾಲ್ಡ್ ಪ್ರತಿಕೆ ವರದಿಯಲ್ಲಿ ಹೇಳಿದ್ದಾರೆ.
Published On - 11:18 am, Sun, 5 February 23