ವಿದ್ಯಾರ್ಥಿ ಪಾಸ್ ಸಂಜೆ 7.30 ರ ನಂತರ ಮಾನ್ಯವಿಲ್ಲವೆಂದು ಕಂಡಕ್ಟರ್ ಟಿಕೆಟ್ ನೀಡಬಾರದು: ಬಿಎಂಟಿಸಿ
ವಿದ್ಯಾರ್ಥಿಗಳ ಬಿಎಂಟಿಸಿ ಪಾಸ್ ಸಂಜೆ 7.30 ರ ನಂತರ ಮಾನ್ಯವಿಲ್ಲವೆಂದು ಬಸ್ ನಿರ್ವಾಹಕರು ವಿದ್ಯಾರ್ಥಿಗಳಿಗೆ ಟಿಕೆಟ್ ನೀಡಬಾರದು ಎಂದು ಬಿಎಂಟಿಸಿ ಸೂಚೆನೆ ನೀಡಿದೆ.
ಬೆಂಗಳೂರು: ವಿದ್ಯಾರ್ಥಿಗಳ ಬಿಎಂಟಿಸಿ (BMTC) ಪಾಸ್ ಸಂಜೆ 7.30 ರ ನಂತರ ಮಾನ್ಯವಿಲ್ಲವೆಂದು ಬಸ್ ನಿರ್ವಾಹಕರು (Conductor) ವಿದ್ಯಾರ್ಥಿಗಳಿಗೆ (Students) ಟಿಕೆಟ್ ನೀಡಬಾರದು ಎಂದು ಬಿಎಂಟಿಸಿ ಸೂಚೆನೆ ನೀಡಿದೆ. ವಿದ್ಯಾರ್ಥಿಗಳು ಸಂಜೆ 7.30 ರ ನಂತರ ಬಿಎಂಟಿಸಿ ಬಸ್ನಲ್ಲಿ ಸಂಚಾರಿಸುವಾಗಿಲ್ಲ ಎಂದು ಬಸ್ ನಿರ್ವಾಹಕರು ಟಿಕೆಟ್ ನೀಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಹೀಗಾಗಿ ವಿದ್ಯಾರ್ಥಿಗಳು ಬಿಎಂಟಿಸಿ ಕಚೇರಿಗೆ ದೂರು ಸಲ್ಲಿಸಿದ್ದರು.
ವಿದ್ಯಾರ್ಥಿಗಳ ದೂರನ್ನು ಪರಿಶೀಲಿಸಿ ವಿದ್ಯಾರ್ಥಿಗಳು ಬಿಎಂಟಿಸಿ ಪಾಸ್ ಉಪಯೋಗಿಸಿಕೊಂಡು ಯಾವ ಸಮಯದಲ್ಲಿ ಬೇಕಾದರೂ ಪ್ರಯಾಣಿಸಬಹುದು. ಹೀಗಾಗಿ ನಿರ್ವಾಹಕರು ಟಿಕೆಟ್ ತೆಗೆದುಕೊಳ್ಳುವಂತಿಲ್ಲ ಎಂದು ಬಿಎಂಟಿಸಿ ಆದೇಶ ಹೊರಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ