ಬೆಂಗಳೂರು, ನ.22: ಬೆಂಗಳೂರಿನ ಸಂಚಾರ ಜೀವನಾಡಿ ಬಿಎಂಟಿಸಿ (BMTC) ಇನ್ಮುಂದೆ ನೈಸ್ ರಸ್ತೆಯಲ್ಲೂ (Nice Road) ಸಂಚರಿಸಲಿದೆ. ಪ್ರಯಾಣಿಕರ ಬೇಡಿಕೆ ಮೇರೆಗೆ ನೈಸ್ ರಸ್ತೆಯಲ್ಲೂ ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ಸಾರಿಗೆ ಇಲಾಖೆ ನಿರ್ಧರಿಸಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಮಾದವಾರ ರೂಟ್ಗೆ ಹೊಸ ಮಾರ್ಗವಾಗಿ ಬಿಎಂಟಿಸಿ ಬಸ್ಗಳ ಸೇವೆ ಆರಂಭವಾಗಿದೆ. ಈ ಎರಡು ಸ್ಥಳಗಳಿಗೆ ನೈಸ್ ರೋಡ್ ಮೂಲಕವಾಗಿ ಬಿಎಂಟಿಸಿ ಬಸ್ ಸಂಚಾರ ನಡೆಸಲಿದೆ.
ದೂರದ ಊರುಗಳಿಂದ ಬೆಂಗಳೂರಿಗೆ ಬರುತ್ತಿದ್ದವರು ಮೆಜೆಸ್ಟಿಕ್ ತಲುಪಿ ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿ ಬಸ್ ಹಿಡಿದು ಸಂಚಾರ ನಡೆಸಬೇಕಿತ್ತು. ಇದಕ್ಕೆ ಕನಿಷ್ಠ 2 ಗಂಟೆ ವ್ಯರ್ಥವಾಗುತ್ತಿತ್ತು. ಸದ್ಯ ಪ್ರಯಾಣಿಕರ ಬೇಡಿಕೆ ಮೇರೆಗೆ ಹೆಚ್ಚವರಿ ರೂಟ್ ಗೆ ಬಸ್ಗಳನ್ನು ನಿಯೋಜಿಸಲಾಗಿದೆ. ಬೆಂಗಳೂರು ನಗರಕ್ಕೆ ತುಮಕೂರು, ಹಾಸನ ಭಾಗಗಳಿಂದ ಬೆಂಗಳೂರಿಗೆ ಆಗಮಿಸುವವರು ಮಾದವಾರದಿಂದಲೇ ನೇರವಾಗಿ ಎಲೆಕ್ಟ್ರಾನಿಕ್ ಸಿಟಿ ತಲುಪಲು ಅನುಕೂಲವಾಗಲಿದೆ.
ಇದನ್ನೂ ಓದಿ: ಬಿಎಂಟಿಸಿಯಿಂದಲೇ ನಗರದಲ್ಲಿ ಟ್ರಾಫಿಕ್ ಜಾಮ್, ಬೆಂಗಳೂರು ಟ್ರಾಫಿಕ್ ಪೊಲೀಸರ ಅಂಕಿ ಅಂಶ ಬಿಚ್ಚಿಟ್ಟ ರಹಸ್ಯವೇನು?
ಇನ್ನು ಬಸ್ ಒದಗಿಸುವಂತೆ ಪ್ರಯಾಣಿಕರು ಹಲವಾರು ಬಾರಿ ಮನವಿ ಪತ್ರ ಬರೆದಿದ್ದರು. ಬಿಎಂಟಿಸಿ ಬಸ್ಗಳಿಲ್ಲದೇ ಪ್ರಯಾಣಿಕರು ಟೆಂಪೋ, ಆಟೋ, ಲಾರಿಗಳಲ್ಲಿ ಸಂಚಾರ ಮಾಡ್ತಿದ್ದರು. ಸದ್ಯ ಬಿಎಂಟಿಸಿ ಬಸ್ ಗಳಿಲ್ಲದೇ ತೊಂದರೆ ಅನುಭವಿಸುತ್ತಿದ್ದ ಜನರಿಗೆ ಶುಭ ಸುದ್ದಿ ಸಿಕ್ಕಿದೆ. ಎಲೆಕ್ಟ್ರಾನಿಕ್ ಸಿಟಿ to ಮಾದವಾರ ಭಾಗಕ್ಕೆ ಬಿಎಂಟಿಸಿ ಬಸ್ ಸೇವೆ ಆರಂಭವಾಗಿದೆ. ಬೆಳಗ್ಗೆ 6:40 ರಿಂದ ರಾತ್ರಿ 8 ಗಂಟೆವರೆಗೆ ಬಿಎಂಟಿಸಿ ಬಸ್ ಗಳ ಸೇವೆ ಇರಲಿದೆ. ನವೆಂಬರ್ 20 ರಿಂದಲೇ ಈ ಬಸ್ ಸೌಲಭ್ಯ ಆರಂಭವಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಿಗ್ಗೆ 6.40, 7.10, 7.40, 8.00, 8.30, 8.50, 9.20, 9.50, 10.20, 10.50, 11.40, ಮಧ್ಯಾಹ್ನ 12.10, 12.40, 1.10, 1.50, 2.30, 3.00, 3.40, ಸಂಜೆ 4.25, 4.50, 5.20, 6.00, 6.30, 7.00, 7.30, ರಾತ್ರಿ 8.00, 9.30.
ಬೆಳಿಗ್ಗೆ 7.10, 7.40, 8.10, 8.40, 9.10, 9.40, 10.10, 10.40, 11.10, 11.40, 12.15, 12.55, ಮಧ್ಯಾಹ್ನ 1.35, 2.05, 2.45, ಸಂಜೆ 4.00, 4.30, 5.00, 5.30, 6.00, 6.15, 6.30, 7.00, 7.30, ರಾತ್ರಿ 8.00.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ