ಅರ್ಚಕರಿಗೆ ಗುಡ್ ನ್ಯೂಸ್; ಕರ್ನಾಟಕ ಭಾರತ್ ಗೌರವ್ ಕಾಶಿ ಗಯಾ ಯೋಜನೆಯಡಿ ಅರ್ಚಕರ ಕುಟುಂಬಸ್ಥರಿಗೂ ಉಚಿತ ಯಾತ್ರೆ ಭಾಗ್ಯ
‘ಕರ್ನಾಟಕ ಭಾರತ್ ಗೌರವ್ ಕಾಶಿ ಗಯಾ’ (Karnataka Bharat Gaurav Kashi Gaya) ಈ ಯೋಜನೆಯಡಿ ಅರ್ಚಕರ ಜೊತೆಗೆ ಅರ್ಚಕರ ಕುಟುಂಬಸ್ಥರೂ ಕೂಡ ಉಚಿತವಾಗಿ ಕಾಶಿ ಯಾತ್ರೆ ಕೈಗೊಳ್ಳಬಹುದು. ಅರ್ಜಕರ ಕುಟುಂಬದ ತಂದೆ/ ತಾಯಿ/ ಮಡದಿ/ ಮಕ್ಕಳು ಹೀಗೆ ಕುಟುಂಬದ ಒಬ್ಬರಿಗೆ ಉಚಿತ ಯಾತ್ರೆಗೆ ಅವಕಾಶ ನೀಡಲಾಗಿದೆ.
ಬೆಂಗಳೂರು, ನ.22: ರಾಜ್ಯ ಸರ್ಕಾರ (Karnataka Government) ಅರ್ಚಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಅರ್ಚಕರ ಹೆಂಡತಿ, ಮಕ್ಕಳಿಗೂ ಕಾಶಿಯಾತ್ರೆ ಭಾಗ್ಯ ಕಲ್ಪಿಸಿದೆ. ಈ ಮೂಲಕ ಅರ್ಚಕರ ಮತ್ತೊಂದು ಮನವಿಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಅವರು ತಥಾಸ್ತು ಎಂದಿದ್ದಾರೆ. ‘ಕರ್ನಾಟಕ ಭಾರತ್ ಗೌರವ್ ಕಾಶಿ ಗಯಾ’ (Karnataka Bharat Gaurav Kashi Gaya) ಈ ಯೋಜನೆಯಡಿ ಅರ್ಚಕರ ಜೊತೆಗೆ ಅರ್ಚಕರ ಕುಟುಂಬಸ್ಥರೂ ಕೂಡ ಉಚಿತವಾಗಿ ಕಾಶಿ ಯಾತ್ರೆ ಕೈಗೊಳ್ಳಬಹುದು.
ಕರ್ನಾಟಕ ಭಾರತ್ ಗೌರವ್ ಕಾಶಿ ಗಯಾ ದರ್ಶನ ಯೋಜನೆಯಡಿ ಪ್ರವರ್ಗ ಸಿ ಬರುವ ದೇವಾಲಯಗಳ ಅರ್ಚಕರು/ ನೌಕರರಿಗೆ ಈಗಾಗಲೇ ಮುಜರಾಯಿ ಇಲಾಖೆ ಉಚಿತ ಕಾಶಿಯಾತ್ರೆ ಭಾಗ್ಯ ಕಲ್ಪಿಸಿದೆ. ಪ್ರತಿ ಟ್ರಿಪ್ ನಲ್ಲಿ 60 ಜನರಂತೆ, ವರ್ಷಕ್ಕೆ 1200 ಅರ್ಚಕರು / ನೌಕರರು ಹೋಗಬಹುದು. ಈ ಯೋಜನೆಯಡಿ ಉಚಿತವಾಗಿ ಕಾಶಿ ಯಾತ್ರೆ ಮಾಡಬಹುದು. ಈಗಾಗಲೇ ಮೊದಲ ಬ್ಯಾಚ್ ಉಚಿತವಾಗಿ ಕಾಶಿ ಯಾತ್ರೆಗೆ ಹೊರಟಿದೆ. ಎರಡನೇ ಬ್ಯಾಚ್ ಕಾಶಿಯಾತ್ರೆಗೆ ಮುಂದಿನ ತಿಂಗಳು ಹೊರಡಲಿದೆ. ಇದರ ನಡುವೆ ಈಗ ಮುಜರಾತಿ ಇಲಾಖೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.
ಮುಜರಾಯಿ ಇಲಾಖೆ ಮುಂದೆ ಅರ್ಚಕರು ಬೇಡಿಕೆ ಇಟ್ಟಿದ್ದರು. ಒಬ್ಬರಿಗೆ ಕಾಶಿ ಯಾತ್ರೆಗೆ ಹೊರಡಲು ತೊಂದ್ರೆಯಾಗುತ್ತೆ. ಕುಟುಂಬದವರನ್ನ ಕರೆದುಕೊಂಡು ಹೋಗಲು ಹಣ ಖರ್ಚಾಗುತ್ತೆ. ಕುಟುಂಬದ ಯಾರಾದ್ರೂ ಒಬ್ಬರನ್ನ ಉಚಿತವಾಗಿ ಕರೆದೊಯ್ಯಲು ಅವಕಾಶ ಕೊಡಬೇಕೆಂದು ಅರ್ಚಕರು& ನೌಕರರು ಮನವಿ ಮಾಡಿದ್ದರು. ಅರ್ಚಕರ ಈ ಮನವಿಗೂ ಕೂಡ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಒಪ್ಪಿಗೆ ಸೂಚಿಸಿದ್ದಾರೆ. ಕುಟುಂಬದ ತಂದೆ/ ತಾಯಿ/ ಮಡದಿ/ ಮಕ್ಕಳು ಹೀಗೆ ಕುಟುಂಬದ ಒಬ್ಬರಿಗೆ ಉಚಿತ ಯಾತ್ರೆಗೆ ಅವಕಾಶ ನೀಡಿದ್ದಾರೆ. ಅರ್ಚಕರ ಜೊತೆ ಕುಟುಂಬದ ಒಬ್ಬರು ಉಚಿತವಾಗಿ ಕಾಶಿಯಾತ್ರೆ ಮಾಡಬಹುದು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ