ಡಿಸೆಂಬರ್ 4ರಿಂದ ಬೆಳಗಾವಿ ಅಧಿವೇಶನ ಆರಂಭ: ಸಭಾಪತಿ ಬಸವರಾಜ್ ಹೊರಟ್ಟಿ
ಬೆಳಗಾವಿಯ ಚಳಿಗಾಲ ಅಧಿವೇಶನ ಡಿಸೆಂಬರ್ 4ರಿಂದ ಆರಂಭವಾಗಲಿದೆ. ಬೆಳಗಾವಿ ಅಧಿವೇಶನದಲ್ಲಿ ಬರೀ ಪ್ರತಿಭಟನೆ ಆಗುತ್ತೆ ಅಂತ ಜನಪ್ರತಿನಿಧಿಗಳು ಅಂದುಕೊಳ್ಳುತ್ತಾರೆ. ಬೆಳಗಾವಿ ಅಧಿವೇಶನ ಅಂದರೆ ಸ್ಟ್ರೈಕ್ ಅಧಿವೇಶನ ಎಂದು ತಿಳಿದಿದ್ದಾರೆ. ಹೀಗಾಗಿ ಈ ರೀತಿ ಆಗಬಾರದು ಎಂದು ನಾಲ್ಕು ಜನ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದರು.
ಬೆಂಗಳೂರು ನ.22: ಬೆಳಗಾವಿಯ ಚಳಿಗಾಲ ಅಧಿವೇಶನ (Session) ಡಿಸೆಂಬರ್ 4ರಿಂದ ಆರಂಭವಾಗಲಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬೆಳಗಾವಿ ಅಧಿವೇಶನದಲ್ಲಿ ಬರೀ ಪ್ರತಿಭಟನೆ ಆಗುತ್ತೆ ಅಂತ ಜನಪ್ರತಿನಿಧಿಗಳು ಅಂದುಕೊಳ್ಳುತ್ತಾರೆ. ಬೆಳಗಾವಿ ಅಧಿವೇಶನ ಅಂದರೆ ಸ್ಟ್ರೈಕ್ ಅಧಿವೇಶನ ಎಂದು ತಿಳಿದಿದ್ದಾರೆ. ಹೀಗಾಗಿ ಈ ರೀತಿ ಆಗಬಾರದು ಎಂದು ನಾಲ್ಕು ಜನ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಮಧು ಬಂಗಾರಪ್ಪ, ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆ ಆಗಬಾರದು. ರೈತರ ಜೊತೆಗೆ ಸಚಿವರು ಸಭೆ ನಡೆಸಲು ಸೂಚನೆ ನೀಡಿದ್ದೇನೆ. ಈಗಾಗಲೇ ಸುವರ್ಣಸೌಧದ ಮುಂದೆ ಟೆಂಟ್ ಹಾಕಲು ತಯಾರಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಡಿಸೆಂಬರ್ 4ರಿಂದ ಡಿಸೆಂಬರ್ 22ರವರೆಗೆ ಸಂಸತ್ ಚಳಿಗಾಲದ ಅಧಿವೇಶನ: ಪ್ರಲ್ಹಾದ ಜೋಶಿ
2022ರಲ್ಲಿ ಅಧಿವೇಶನದ ಸಮಯದಲ್ಲಿ 102ಕ್ಕೂ ಹೆಚ್ಚು ಸಂಘಟನೆ ಪ್ರತಿಭಟನೆ ಮಾಡಿದ್ದವು. ಈ ಪ್ರತಿಭಟನೆಯಿಂದ 80 ಸಾವಿರ ಜನರು ಪಾಲ್ಗೊಂಡಿದ್ದರು. ಪ್ರತಿಭಟನೆ ಮಾಡಬೇಡಿ ಅಂತ ಹೇಳಲ್ಲ. ಆದರೆ ಪ್ರತಿಭಟನೆಗೆ ಸರ್ಕಾರವೇ ಸಹಕರಿಸುವ ರೀತಿ ಟೆಂಟ್ ಹಾಕಿ ಪ್ರತಿಭಟನೆಗೆ ವ್ಯವಸ್ಥೆ ಮಾಡುವುದು ಸರಿಯಲ್ಲ. ಇದಕ್ಕೆಲ್ಲ ದುಂದು ವೆಚ್ಚ ಆಗುತ್ತೆ, ಹೀಗಾಗಿ ಇದೆಲ್ಲ ಆಗಬಾರದು ಎಂದು ಎಚ್ಚರಿಕೆ ನೀಡಿದರು.
ಜಪ್ರತಿನಿಧಿಗಳು ಅಧಿವೇಶನದಲ್ಲಿ ಸರಿಯಾದ ರೀತಿಯಲ್ಲಿ ನಡೆಯಬೇಕು. ಇದು ಉತ್ತರ ಕರ್ನಾಟಕದ ಜನರ ಅಭಿಪ್ರಾಯ ಸಹ ಹೌದು. ರೈತರ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಸಭೆ ಕರೆಯಿರಿ. ರೈತರ ಬೇಡಿಕೆ ಏನಿದೆ ಅಂತ ಸಭೆಯಲ್ಲಿ ಚರ್ಚೆ ಮಾಡಿ ಬಗೆಹರಿಸಬೇಕು. ಪ್ರತಿಭಟನೆ ಮಾಡಿದಾಗ ರೈತರಿಗೆ ಕೇವಲ ಶೇ 10 ರಷ್ಟು ಮಾತ್ರ ಸಮಸ್ಯೆ ಬಗೆಹರಿದಿದೆ. ಪ್ರತಿಭಟನೆ ಮಾಡುವಂತಹ ವಾತಾವರಣ ಸರ್ಕಾರ ನಿರ್ಮಾಣ ಮಾಡಬಾರದು. ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಲು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Wed, 22 November 23