Bangalore Kambala: 8 ಕೋಟಿಗೂ ಅಧಿಕ ಖರ್ಚಿನಲ್ಲಿ ಸಿದ್ಧವಾದ ಕಂಬಳಕ್ಕೆ ಕ್ಷಣಗಣನೆ; ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಹೇಳಿದಿಷ್ಟು

ಶಾಸಕ ಅಶೋಕ್ ರೈ ಮಾತನಾಡಿ, ಬೆಂಗಳೂರು ಕಂಬಳ ನಮ್ಮ ಕಂಬಳ ಹೆಸರಿನಲ್ಲಿ ಈ ಕಂಬಳ ಆಯೋಜಿಸಲಾಗಿದೆ. ಕಂಬಳದಲ್ಲಿ ಎಲ್ಲಾ ಜಾತಿ ಧರ್ಮದ ಜನರು ಭಾಗಿಯಾಗ್ತಾರೆ. 228 ಜೊತೆ ಕೋಣಗಳು ರಿಜಿಸ್ಟರ್ ಆಗಿವೆ. ಕಂಬಳದಲ್ಲಿ 200 ಕೋಣಗಳು ಭಾಗಿಯಾಗಲಿವೆ ಎಂದರು.

Bangalore Kambala: 8 ಕೋಟಿಗೂ ಅಧಿಕ ಖರ್ಚಿನಲ್ಲಿ ಸಿದ್ಧವಾದ ಕಂಬಳಕ್ಕೆ ಕ್ಷಣಗಣನೆ; ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಹೇಳಿದಿಷ್ಟು
ಪ್ರಾತಿನಿಧಿಕ ಚಿತ್ರ
Follow us
Poornima Agali Nagaraj
| Updated By: Digi Tech Desk

Updated on:Nov 23, 2023 | 12:13 PM

ಬೆಂಗಳೂರು, ನ.22: ನ.25 ಮತ್ತು ನ.26ರಂದು ನಡೆಯಲಿರುವ ಕಂಬಳ ಸ್ಪರ್ಧೆಗೆ ಇಡೀ ಬೆಂಗಳೂರು ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಕಂಬಳ ಆಯೋಜಿಸಲಾಗಿದ್ದು (Bengaluru Kambala) ಈ ಕಾರ್ಯಕ್ರಮಕ್ಕೆ ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಕಂಬಳದ ಟ್ರ್ಯಾಕ್​ಗೆ ರಾಜಮಹಾರಾಜ ಕೆರೆ ಎಂದು ಹೆಸರಿಟ್ಟಿದ್ದೇವೆ. ಸಭಾಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟಿದ್ದೇವೆ. ಸಾಂಸ್ಕೃತಿಕ ವೇದಿಕೆಗೆ ಚಾಮರಾಜ ಒಡೆಯರ್ ಅವರ ಹೆಸರನ್ನ ಇಟ್ಟಿದ್ದೇವೆ. ಎರಡರಿಂದ ಮೂರು ಲಕ್ಷ ಜನರು ಬರುವ ಸಾಧ್ಯತೆ ಇದೆ ಎಂದು ಕಂಬಳ ಸಮಿತಿ ಸುದ್ದಿಗೋಷ್ಠಿ ಕರೆದು ವಿಸೃತ ಮಾಹಿತಿ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಅವರು, ತುಳುನಾಡಿನಲ್ಲಿ ಕಂಬಳ ಜಾನಪದ ಕ್ರೀಡೆಯಾಗಿದೆ. ಇದನ್ನು ನಮ್ಮ ಹಿರಿಯ ನಾಗರೀಕರು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ನಮ್ಮ ಊರಿನಲ್ಲಿ ಕಂಬಳ ಮಾಡುತ್ತಿದ್ವಿ. ಅದು ಯಾವಾಗಲೂ ಯಶಸ್ವಿಯಾಗುತ್ತಿತ್ತು. ಬೆಂಗಳೂರಿನಲ್ಲಿ ಕಂಬಳ‌ ಮಾಡುವ ಬಗ್ಗೆ ತುಂಬ ಬೇಡಿಕೆ ಇತ್ತು. ಇದು ನಮ್ಮ ಕನಸ್ಸು ಕೂಡ ಆಗಿತ್ತು. ಬೆಂಗಳೂರಿನಲ್ಲಿ ನಮ್ಮವರು ಒಟ್ಟು 18 ಲಕ್ಷ ಜನರು ಇದ್ದಾರೆ. ನಮ್ಮ ಕಂಬಳ ಪಕ್ಷತೀತಾ ಕಂಬಳ‌. ಯಾವ ಪಕ್ಷವು ನಡೆಸುತ್ತಿಲ್ಲ. ನಮ್ಮ ಕಂಬಳ ಸಮಿತಿಯವರು ಈ ಕಂಬಳ ಮಾಡುತ್ತಿದ್ದೇವೆ. ಬೆಂಗಳೂರು ಎಲ್ಲಾ ಸಂಘ – ಸಂಸ್ಥೆಗಳ ಅಭಿಪ್ರಾಯ ತೆಗೆದುಕೊಂಡು ಕಂಬಳ ಆಯೋಜಿಸುತ್ತಿದ್ದೇವೆ. ಒಟ್ಟು 128 ಜೋಡಿ ಕೋಣಗಳು ನಾಳೆ ಹೊರಟು ಸಂಜೆ ಹಾಸನಕ್ಕೆ ತಲುಪಲಿವೆ. ಹೆಚ್​ಡಿ ರೇವಣ್ಣನವರು ಹಾಸನದಲ್ಲಿ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿಂದ ಬೆಂಗಳೂರು ಪ್ಯಾಲೇಸ್ ಬರಲಿದೆ.

ಕಂಬಳಕ್ಕೆ ಹುಲಿವೇಶದ ಮೆರಗು

ರಾಜಮಹಾರಾಜ ಕೆರೆ ಎಂದು ಹೆಸರಿಟ್ಟಿದ್ದೇವೆ. ಸಭಾಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟಿದ್ದೇವೆ. ಸಾಂಸ್ಕೃತಿಕ ವೇದಿಕೆಗೆ ಚಾಮರಾಜ ಒಡೆಯರ್ ಅವರ ಹೆಸರನ್ನ ಇಟ್ಟಿದ್ದೇವೆ. ನಮ್ಮ ಕಂಬಳಕ್ಕೆ ಎಲ್ಲರ ಸಹಕಾರವಿದೆ. ಎರಡರಿಂದ ಮೂರು ಲಕ್ಷ ಜನರು ಬರುವ ಸಾಧ್ಯತೆ ಇದೆ. ಅರ್ಜುನ್ ಜನ್ಯ ಹಾಗೂ ಗುರುಕಿರಣ್ ಅವರ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ಹುಲಿವೇಶವು ಇರಲಿದೆ. ಕಾಂತರ ಸಿನಿಮಾ ಬಳಿಕ ಕಂಬಳದ ಬಗ್ಗೆ ಆಸಕ್ತಿ ಹೆಚ್ಚಿದೆ. ಹೀಗಾಗಿ ಕಂಬಳವನ್ನ ಎಲ್ಲ ಜನರು ಕಣ್ತುಂಬಿಕೊಳ್ಳಬಹುದು ಎಂದರು.

ಇದನ್ನೂ ಓದಿ: Bengaluru Kambala: ದಾಖಲೆ ಬರೆಯಲು ಸಜ್ಜಾಗುತ್ತಿದೆ ಬೆಂಗಳೂರು ಕಂಬಳ, ಇಲ್ಲಿದೆ ಸಂಪೂರ್ಣ ವಿವರ

ಇನ್ನು ಶಾಸಕ ಅಶೋಕ್ ರೈ ಮಾತನಾಡಿ, ಬೆಂಗಳೂರು ಕಂಬಳ ನಮ್ಮ ಕಂಬಳ ಹೆಸರಿನಲ್ಲಿ ಈ ಕಂಬಳ ಆಯೋಜಿಸಲಾಗಿದೆ. ಕಂಬಳದಲ್ಲಿ ಎಲ್ಲಾ ಜಾತಿ ಧರ್ಮದ ಜನರು ಭಾಗಿಯಾಗ್ತಾರೆ. 228 ಜೊತೆ ಕೋಣಗಳು ರಿಜಿಸ್ಟರ್ ಆಗಿವೆ. ಕಂಬಳದಲ್ಲಿ 200 ಕೋಣಗಳು ಭಾಗಿಯಾಗಲಿವೆ. ವೆಟನರಿ ಇಲಾಖೆಯಿಂದ ಎಲ್ಲಾ ಪರ್ಮಿಷನ್ ತೆಗೆದುಕೊಂಡಿದ್ದೇವೆ. ಕೋಣಗಳ ಆಹಾರ ಮತ್ತು ನೀರಿನ ಬಗ್ಗೆ ಕೋಣಗಳ ಯಜಮಾನರು ನೋಡಿಕೊಳ್ಳುತ್ತಾರೆ. ಇಂದು ಮೂರು ಗಂಟೆಗೆ ಟ್ರಯಲ್ ನಡೆಯಲಿದೆ. ಕಂಬಳದ ಟ್ರಾಕ್ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬಂದಿವೆ. ಈ ಕೋಣಗಳಲ್ಲಿ 50 ಬಗೆಯ ಕೋಣಗಳ ರೆಕಾರ್ಡ್ ಮಾಡಿವೆ. ಬೆಂಗಳೂರಿನ ಕಂಬಳಕ್ಕೆ ಹೊಸ ಕೋಣಗಳನ್ನ ಖರೀದಿ ಮಾಡಲಾಗಿದೆ. 180 ಸ್ಟಾಲ್ ಗಳನ್ನ ಹಾಕಲಾಗಿದೆ. ಎರಡು ದಿನ ನಿರಂತರವಾಗಿ ನಡೆಯಲಿದೆ ಎಂದರು.

ಕಂಬಳಕ್ಕೆ ಸಾರ್ವಜನಿಕರಿಗೆ ಫ್ರೀ

ಎಲ್ಲರೂ ಬಂದು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಗ್ಯಾಲರಿ ವ್ಯವಸ್ಥೆಯು ಇರಲಿದೆ. ಸಾರ್ವಜನಿಕರು ಈ ಕಂಬಳಕ್ಕೆ ಬರಲಿದ್ದಾರೆ. ವಿವಿಐಪಿ, ವಿಐಪಿಗೆ ಸೆಪೆರೇಟ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ಟಿಕೆಟ್ ಇಲ್ಲ. ಫ್ರೀಯಾಗಿ ಬಂದು ನೋಡಬಹುದು. ಕಂಬಳದಲ್ಲಿ ಗೆದ್ದವರಿಗೆ ಮೊದಲ ಪ್ರೈಸ್ 16 ಗ್ರಾಂ ಚಿನ್ನ 1 ಲಕ್ಷ ನಗದು ನೀಡಲಾಗುತ್ತದೆ. ದ್ವಿತೀಯ ಸ್ಥಾನಕ್ಕೆ 8 ಗ್ರಾಮ್ ಚಿನ್ನ, 50 ಸಾವಿರ ಕೊಡಲಾಗುತ್ತದೆ. ತೃತೀಯ ಸ್ಥಾನಕ್ಕೆ 4 ಗ್ರಾಂ ಚಿನ್ನ 25 ಸಾವಿರ ನಗದನ್ನ ಬಹುಮಾನವಾಗಿ ನೀಡಲಾಗುತ್ತೆ. ಬಂದವರಿಗೆ ಊಟದ ವ್ಯವಸ್ಥೆ ಕೂಡ ಇರಲಿದೆ ಎಂದು ವಿವರಿಸಿದರು.

ಎಲ್ಲರೂ ಕುಟುಂಬ ಸಮೇತವಾಗಿ ಬಂದು ವೀಕ್ಷಿಸಬಹುದು. ಇಂದು ಸಂಜೆ ರೋಟ್ ಮ್ಯಾಪ್ ಹಾಕಲಾಗುತ್ತದೆ. ಈ ಕಂಬಳವನ್ನ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಪರಿಚಯಿಸುತ್ತಿದ್ದೇವೆ. 24 ರಂದು ಶುಕ್ರವಾರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್, ಬಸವರಾಜ್ ಬೊಮ್ಮಯಿ, ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಶಾಸಕರು, ಸಚಿವರುಗಳು ಬರಲಿದ್ದಾರೆ. ಸರ್ಕಾರದಿಂದ ಒಂದು ಕೋಟಿ ಅನುದಾನ ಕೊಟ್ಟಿದ್ದಾರೆ. ಆದರೆ 7 ರಿಂದ 8 ಕೋಟಿ ಖರ್ಚಾಗುತ್ತಿದೆ. ಸರ್ಕಾರ‌ ಕೊಟ್ಟಿರುವ ಅನುದಾನವನ್ನ ಬಾಡಿಗೆ, ಕೆರೆ ಹಾಗೂ ಕೋಣಗಳ ಯಜಮಾನರಿಗೆ ಕೊಟ್ಟಿದ್ದೀವಿ. ಉಳಿದ ಹಣವನ್ನ ಸಂಘ- ಸಂಸ್ಥೆಗಳಿಂದ ಸಂಗ್ರಹಿಸಲಾಗಿದೆ. ಮಂಗಳೂರಿನ 80 % ರಷ್ಟು ಸಿನಿಮಾ ನಟಿ – ನಟಿಯರು ಕಂಬಳಕ್ಕೆ ಬರಲಿದ್ದಾರೆ. ಅನುಷ್ಕ ಶೆಟ್ಟಿ ಬರ್ತಾರೆ. ಶಿವಣ್ಣ, ಸುದೀಪ್, ಉಪೇಂದ್ರ, ಅಶ್ವಿನಿ ಪುನೀತ್ ರಾಜ್ ಕುಮಾರ್ ಬರ್ತಾರೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:25 pm, Wed, 22 November 23

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ