ಇನ್ಮುಂದೆ ಈ ಎರಡು ಹೊಸ ಮಾರ್ಗಗಳಲ್ಲೂ ಸಂಚರಿಸಲಿವೆ BMTC ಬಸ್​​: ಇಲ್ಲಿದೆ ಮಾಹಿತಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಒತ್ತಾಯದ ಮೇರೆಗೆ ಎರಡು ಹೊಸ ಬಸ್ ಮಾರ್ಗಗಳಲ್ಲಿ ಬಸ್​ ಓಡಿಸಲು ಮುಂದಾಗಿದೆ.

ಇನ್ಮುಂದೆ ಈ ಎರಡು ಹೊಸ ಮಾರ್ಗಗಳಲ್ಲೂ ಸಂಚರಿಸಲಿವೆ BMTC ಬಸ್​​: ಇಲ್ಲಿದೆ ಮಾಹಿತಿ
ಬಿಎಂಟಿಸಿ
Follow us
|

Updated on: Jul 18, 2023 | 3:24 PM

ಬೆಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ‘ಶಕ್ತಿ’ ಯೋಜನೆ (Shakti Yojana) ಜಾರಿಯಾದಾಗಿನಿಂದ ಸರ್ಕಾರಿ ಬಸ್‌ಗಳಲ್ಲಿ (Government Bus) ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆ ಹೆಚ್ಚಿನ ಬಸ್‌ಗಳನ್ನು ರಸ್ತೆಗೆ ಇಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹೀಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಪ್ರಯಾಣಿಕರ ಒತ್ತಾಯದ ಮೇರೆಗೆ ಎರಡು ಹೊಸ ಬಸ್ ಮಾರ್ಗಗಳಲ್ಲಿ ಬಸ್​ ಓಡಿಸಲು ಮುಂದಾಗಿದೆ. ಹೌದು ಮೊದಲ ಮಾರ್ಗವು ಶಿವಾಜಿನಗರದಿಂದ ಯಲಹಂಕ ಸ್ಯಾಟಲೈಟ್ ಟೌನ್‌ಗೆ ಮತ್ತು ಎರಡನೇ ಮಾರ್ಗವು ಶಿವಾಜಿನಗರದಿಂದ ಬ್ಯಾಟರಾಯನಪುರಕ್ಕೆ ಸಂಪರ್ಕ ಕಲ್ಪಿಸಲಿದೆ. ಶಿವಾಜಿನಗರದಿಂದ ಈ ಎರಡು ಮಾರ್ಗಗಳಲ್ಲಿ ನಾನ್ ಎಸಿ ಬಸ್ಸುಗಳು ಮಾತ್ರ ಸಂಚರಿಸುತ್ತವೆ.

ಬಿಎಂಟಿಸಿ ಬಸ್ ಸಂಖ್ಯೆ 290-EB ಶಿವಾಜಿನಗರ ಬಸ್ ನಿಲ್ದಾಣದಿಂದ ಹೊರಟು ಯಲಹಂಕ ಸ್ಯಾಟಲೈಟ್ ಟೌನ್ ತಲುಪಲಿದೆ. ಟ್ಯಾನರಿ ರಸ್ತೆ, ನಾಗವಾರ, ಆರ್‌ಕೆ ಹೆಗಡೆ ನಗರ, ಚೊಕ್ಕನಹಳ್ಳಿ, ಅಗ್ರಹಾರ ಲೇಔಟ್ ಮತ್ತು ಕೋಗಿಲು ಕ್ರಾಸ್‌ನಲ್ಲಿಯೂ ಬಸ್ ನಿಲುಗಡೆಯಾಗಲಿದೆ.

ಬಸ್ ಸಂಖ್ಯೆ 290-EB ಶಿವಾಜಿನಗರದಿಂದ 9:35, 1:05, 5:00 ಗಂಟೆಗೆ ಹೊರಡಲಿದೆ. ಮತ್ತು ಯಲಹಂಕ ಸ್ಯಾಟಲೈಟ್ ಟೌನ್​ನಿಂದ 8:20, 11:35, 3:30ಕ್ಕೆ ಹೊರಡಲಿದೆ.

ಇದನ್ನೂ ಓದಿ: BMTC: ವ್ಹೀಲ್​ಚೇರ್ ಬಳಸುವ ವಿಶೇಷ ಚೇತನರಿಗೂ ಬಿಎಮ್​ಟಿಸಿ ಬಸ್​ಗಳಲ್ಲಿ ಪ್ರಯಾಣಿಸುವ ಅವಕಾಶ?

ಶಿವಾಜಿನಗರ ಬಸ್ ನಿಲ್ದಾಣದಿಂದ ಬ್ಯಾಟರಾಯನಪುರಕ್ಕೆ ಹೋಗುವ ಎರಡನೇ ಮಾರ್ಗದಲ್ಲಿ ಸಾಗುವ ಎರಡು ಬಸ್‌ಗಳಿಗೆ ಬಸ್ ಸಂಖ್ಯೆ 290-S. ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಟ್ಯಾನರಿ ರಸ್ತೆ, ನಾಗವಾರ, ಥಣಿಸಂದ್ರ, ಮೇಸ್ತ್ರಿ ಪಾಳ್ಯ, ಶ್ರೀರಾಂಪುರ ಮತ್ತು ಜಕ್ಕೂರು ಲೇಔಟ್‌ನಲ್ಲಿಯೂ ನಿಲುಗಡೆಯಾಗಲಿವೆ.

ಈ ಮಾರ್ಗದ ಬಸ್‌ಗಳು ಶಿವಾಜಿನಗರದಿಂದ 5:45, 6:50, 8:05, 9:20, 11:00, 4:05, 5:25, 7:00, 7:55, 9:30 ಗಂಟೆಗೆ ಮತ್ತು ಬ್ಯಾಟರಾಯನಪುರದಿಂದ 5:45, 6:50, 8:05, 9:20, 11:00, 4:10, 5:45, 6:40, 8:15, 9:10 ನಿಮಿಷಕ್ಕೆ ಹೊರಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ