AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ನೈಸ್ ರಸ್ತೆಗಳಲ್ಲಿ ವ್ಹೀಲಿಂಗ್ ಹಾವಳಿ: ಕಠಿಣ ಕ್ರಮಕ್ಕೆ ಮುಂದಾದ ಸಂಚಾರ ಪೊಲೀಸ್ ಇಲಾಖೆ

ಹಲವು ಕಡೆ ವೈಕ್ ವೀಲಿಂಗ್ ಹುಚ್ಚಾಟ ನಡೆಯುತಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ರಾಜ್ಯ ಸಂಚಾರಿ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ರಾಜ್ಯದ ನೈಸ್ ರಸ್ತೆಗಳಲ್ಲಿ ವ್ಹೀಲಿಂಗ್ ಹಾವಳಿ: ಕಠಿಣ ಕ್ರಮಕ್ಕೆ ಮುಂದಾದ ಸಂಚಾರ ಪೊಲೀಸ್ ಇಲಾಖೆ
ದ್ವಿಚಕ್ರ ವಾಹನ ವ್ಹೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಕರ್ನಾಟಕ ಸಂಚಾರ ಪೊಲೀಸ್ ಇಲಾಖೆImage Credit source: EPS
Kiran HV
| Updated By: Rakesh Nayak Manchi|

Updated on: Jul 18, 2023 | 5:16 PM

Share

ಬೆಂಗಳೂರು, ಜುಲೈ 18: ರಾಜ್ಯದ ನೈಸ್ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ವ್ಹೀಲಿಂಗ್ (Bike Wheeling) ಹಾವಳಿ ಹೆಚ್ಚಾಗಿದೆ. ಇಂತಹ ಹುಚ್ಚಾಟದ ಸಾಹಸಕ್ಕೆ ಬೈಕ್ ಸವಾರರು ಬಲಿಯಾಗುವುದರ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಇತರೆ ಪ್ರಯಾಣಿಕರಿಗೂ ಕಂಠಕ ಎದುರಾಗಿದೆ. ಇದು ಹೆಚ್ಚಾಗಿ ಬೆಂಗಳೂರು (Bengaluru) ಹಾಗೂ ಬೆಂಗಳೂರಿನ ಹೊರವಲಯದಲ್ಲಿ ನಡೆಯುತ್ತಲೇ ಇವೆ. ಪೊಲೀಸರು ಎಷ್ಟೇ ಮುನ್ನೆಚ್ಚರಿಕೆ ಕ್ರಮವಹಿಸಿ ಸಾಕಷ್ಟು ನಿಗಾ ಇರಿಸಿದರೂ ವ್ಹೀಲಿಂಗ್ ಹುಚ್ಚಾಟಕ್ಕೆ ಬಿದ್ದ ಯುವಕರ ಪುಂಡಾಟಕ್ಕೆ ಮಾತ್ರ ಬ್ರೇಕ್ ಬಿದ್ದಂತಾಗಿಲ್ಲ.

ಕಳೆದ 15 ದಿನದ ಅಂಕಿ ಅಂಶ ನೋಡಿದರೆ 8 ವ್ಹೀಲಿಂಗ್ ಪ್ರಕರಣಗಳು ದಾಖಲಾಗಿವೆ. ಆದರೆ ಇದು ಕಣ್ಣಿಗೆ ಬಿದ್ದು ಕ್ರಮಕೈಗೊಂಡ ಪ್ರಕರಣವಾಗಿವೆ. ಇದರ ಹೊರತಾಗಿ ಹಲವು ಕಡೆ ಸಾಕಷ್ಟು ವ್ಹೀಲಿಂಗ್ ಹುಚ್ಚಾಟ ನಡೆಯುತಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ರಾಜ್ಯ ಸಂಚಾರಿ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮಕ್ಕೆ ಮುಂದಾಗಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ವ್ಹೀಲಿಂಗ್ ಪುಂಡಾಟಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಯುವಕರ ಮೊಜು ಮೊಸ್ತಿ ಆಟವಾಗಿರಬೇಕು. ಆದರೆ ಅದು ಹುಚ್ಚಾಟವಾದರೆ ಜೀವಗಳಿಗೆ ಕುತ್ತು ತರುತ್ತದೆ ಅನ್ನೊದಕ್ಕೆ ಈ ಹಿಂದೆ ವ್ಹೀಲಿಂಗ್​ ವೇಳೆ ನಡೆದ ಕೃತ್ಯಗಳೇ ನೈಜ ಉದಾಹರಣೆ. ಓವರ್ ಸ್ಪೀಡ್​ನಲ್ಲಿ ಬೈಕ್ ಅನ್ನು ಒಂದೇ ಚಕ್ರದಲ್ಲಿ ಓಡಿಸುವುದು ಒಂದು ರೀತಿಯ ಹುಚ್ಚಾಟವಾದರೆ ಜೊತೆಗೆ ಹಿಂಬದಿಯಲ್ಲಿ ಯುವತಿರನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡುವುದು ಅತಿರೇಕಕ್ಕೂ ಮೀರಿದ ಪುಂಡಾಟವಾಗಿದೆ. ಇನ್ನು ಈ ರೀತಿಯ ವ್ಹೀಲಿಂಗ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತಿದ್ದು, ಇದೆಲ್ಲದಕ್ಕೂ ಅಂತ್ಯ ಹಾಡಬೇಕಾಗಿರುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವ್ಹೀಲಿಂಗ್ ವಿರುದ್ಧ ಸಮರ ಸಾರಿದ್ದು, ರಾಜ್ಯದ ಉನ್ನತ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜಗರಗಿಸುವಂತೆ ಆದೇಶಿಸಲು ಎಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಅರಮನೆ ನಗರಿಯಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಕಮಿಷನರ್ ಸೂಚನೆ; ವಿದ್ಯಾರ್ಥಿ, ಪೋಷಕರಿಗೆ ಖಡಕ್ ವಾರ್ನಿಂಗ್

ವ್ಹೀಲಿಂಗ್ ಹುಚ್ಚಾಟಕ್ಕೆ ಯುವ ಜನತೆ ತಮ್ಮ ಜೀವ ಪಣಕ್ಕಿಡುವುದರ ಜೊತೆಗೆ ಅಕ್ಕಪಕ್ಕದಲ್ಲಿ ಸಂಚರಿಸುವ ವಾಹನಗಳ ಸವಾರರ ಜೀವಕ್ಕೂ ಕುತ್ತು ತರಿತಿದ್ದಾರೆ. ವಯಸ್ಸಿನ ಹುಚ್ಚಾಟವೋ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಪಾಪ್ಯುಲಾರಿಟಿಯ ಗೀಳೋ ಗೊತ್ತಿಲ್ಲ. ಕಂಡ ಕಂಡ ಕಡೆಯಲ್ಲಿ ವ್ಹೀಲಿಂಗ್ ಮಾಡಿ ಶೋಕಿಗೆ ಬಿದ್ದು ಹಾಳಾಗುವುದರ ಜೊತೆಗೆ ಅನೇಕ ಮಂದಿಯ ಜೀವಕ್ಕೆ ಆತಂಕ ಸೃಷ್ಟಿಸುತ್ತಿದ್ದಾರೆ. ವ್ಹೀಲಿಂಗ್ ಮಾಡುವ ಯುವಕರು ಯಾವ ಸ್ಥಿತಿಯಲ್ಲಿರುತ್ತಾರೆ ಗೊತ್ತಿರುವುದಿಲ್ಲ. ಅವರು ಬಳಸುವ ಬೈಕ್​ನ ಕಂಡೀಷನ್ ಗೊತ್ತಿರುವುದಿಲ್ಲ. ಸಣ್ಣಪುಟ್ಟ ರಸ್ತೆಗಳಿಂದ ಹಿಡಿದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುವ ವ್ಹೀಲಿಂಗ್ ಕೃತ್ಯಗಳಿಗೆ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗಿವೆ. ಇವೆಲ್ಲದಕ್ಕೂ ಕಡಿವಾಣ ಹಾಕಲು ಕಾನೂನಿನ ಅಸ್ತ್ರ ಸಿದ್ಧ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್ ಇಂದಿನಿಂದ ಕಠಿಕ್ರಮಕ್ಕೆ ಖಡಕ್ ಸೂಚನೆ ನೀಡಿದ್ದಾರೆ.

ವ್ಹೀಲಿಂಗ್ ಹಾವಳಿಗಳ ಮೇಲೆ ನಿಗಾ ಇಟ್ಟು ಬ್ರೇಕ್ ಹಾಕಲು ಮುಂದಾದ ಪೊಲೀಸರು ಟೆಕ್ನಿಕಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವ್ಹೀಲಿಂಗ್ ಬೈಕ್​ಗಳನ್ನು ಪತ್ತೆ ಮಾಡಲಿದ್ದಾರೆ‌. ವ್ಹೀಲಿಂಗ್ ಕೃತ್ಯ ಎಸಗುವ ವ್ಯಕ್ತಿ ಪತ್ತೆ ಬಳಿಕ ಆತನ ಡಿಎಲ್ ಕ್ಯಾನ್ಸಲ್ ಮಾಡಿಸಲಿದ್ದಾರೆ. ಬಳಿಕ ವ್ಹೀಲಿಂಗ್​​ಗೆ ಬಳಸಿದ್ದ ಬೈಕ್​ನ ಆರ್​ಸಿ ಕ್ಯಾನ್ಸಲ್ ಮಾಡಲಿದ್ದು, ಐಪಿಸಿ ಸೆಕ್ಷನ್ ಮುಖಾಂತರ ಸವಾರರ ವಿರುದ್ಧ ಎಫ್​ಐಆರ್ ದಾಖಲಿಸಲಿದ್ದಾರೆ.

ನಿರ್ಲಕ್ಷ್ಯದ ಚಾಲನೆಯ ಪ್ರಕಾರವಾಗಿ ಐಪಿಸಿ ಸೆಕ್ಷನ್ 239 ಮೊಟಾರ್ ವೆಹಿಕಲ್ ಆ್ಯಕ್ಟ್ 184 (ಡೆಂಜರಸ್ ರೇಡ್), 189 (ಸರ್ಕಾರದ ಅನುಮತಿ ಇಲ್ಲದೇ ರೇಸಿಂಗ್) ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಸೋಶಿಯಲ್ ಮೀಡಿಯದಲ್ಲಿ ನಕಲಿ ಅಕೌಂಟ್ ಸೃಷ್ಟಿ ಮಾಡಿ ವಿಡಿಯೋ ಅಪ್ಲೋಡ್ ಮಾಡುವ ಮಂದಿ ಮೇಲೆ ಸಹ ನಿಗಾ ವಹಿಸಲಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ಸಹ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!