ಆಗಸ್ಟ್ ಒಳಗೆ ಮಹಿಳೆಯರ ಕೈ ಸೇರಲಿದೆ ‘ಶಕ್ತಿ’ ಸ್ಮಾರ್ಟ್ ಕಾರ್ಡ್, ಟ್ಯಾಪ್‌ & ಟ್ರಾವೆಲ್​ಗೆ ಚಿಂತನೆ

| Updated By: ಆಯೇಷಾ ಬಾನು

Updated on: Jul 20, 2023 | 4:13 PM

ನಮ್ಮ ಮೆಟ್ರೋನಲ್ಲಿ ಬಳಕೆ ಆಗುತ್ತಿರುವ ಟ್ಯಾಪ್ & ಟ್ರಾವೆಲ್ ಮಾದರಿಯನ್ನ ಬಿಎಂಟಿಸಿಗೆ ತರಲು ಚಿಂತನೆ ನಡೆದಿದ್ದು ಬಸ್ ಹತ್ತುವಾಗ ಬಾಗಿಲಲ್ಲಿ ಅಳವಡಿಸೋ ಯಂತ್ರಕ್ಕೆ ಟ್ಯಾಪಿಂಗ್ ಇಳಿಯುವಾಗ ಮತ್ತೊಮ್ಮೆ ಕಾರ್ಡ್​ನ ಟ್ಯಾಪ್ ಮಾಡಿ ಇಳಿಯಬೇಕು.

ಆಗಸ್ಟ್ ಒಳಗೆ ಮಹಿಳೆಯರ ಕೈ ಸೇರಲಿದೆ ‘ಶಕ್ತಿ’ ಸ್ಮಾರ್ಟ್ ಕಾರ್ಡ್, ಟ್ಯಾಪ್‌ & ಟ್ರಾವೆಲ್​ಗೆ ಚಿಂತನೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಆಗಸ್ಟ್​ನಲ್ಲಿ ಮಹಿಳೆಯರಿಗೆ ‘ಶಕ್ತಿ’ ಸ್ಮಾರ್ಟ್ ಕಾರ್ಡ್ ವಿತರಿಸಲು ಈಗಾಗಲೇ ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಳ್ತಿದೆ. ‌ಇತ್ತ ಟಿಕೆಟ್ ವಿತರಣೆ ಮಾಡಲು ಕಂಡಕ್ಟರ್​ಗಳಿಗೆ ಸಮಸ್ಯೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಕಿರಿಕಿರಿ ತಪ್ಪಿಸೋದಕ್ಕೆ ಸ್ಮಾರ್ಟ್ ಕಾರ್ಡ್​ ನೀಡಲು ಬಿಎಂಟಿಸಿ ಪ್ಲಾನ್ ಮಾಡಿದೆ.

ಮೆಟ್ರೋ ಮಾದರಿ ಅನುಸರಿಸಲು ಬಿಎಂಟಿಸಿ ಮುಂದಾಗಿದ್ದು ಉಚಿತ ಪ್ರಯಾಣಕ್ಕೆ ಟಿಕೆಟ್ ರಹಿತ ಸಂಚಾರದ ಪ್ಲಾನ್ ಮಾಡಲಾಗಿದೆ. ಟ್ಯಾಪ್ & ಟ್ರಾವೆಲ್ ಸ್ಮಾರ್ಟ್​ಕಾರ್ಡ್ ವಿತರಣೆಗೆ ಚಿಂತನೆ ನಡೆಸಲಾಗಿದೆ. ಆದ್ರೆ ಮತ್ತೊಂದೆಡೆ ಇದರಿಂದ ಲಾಭಕ್ಕಿಂತಲೂ ನಷ್ಟ ಹೆಚ್ಚು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಏನಿದು ಟ್ಯಾಪ್‌ & ಟ್ರಾವೆಲ್‌?

ನಮ್ಮ ಮೆಟ್ರೋನಲ್ಲಿ ಬಳಕೆ ಆಗುತ್ತಿರುವ ಟ್ಯಾಪ್ & ಟ್ರಾವೆಲ್ ಮಾದರಿಯನ್ನ ಬಿಎಂಟಿಸಿಗೆ ತರಲು ಚಿಂತನೆ ನಡೆದಿದ್ದು ಬಸ್ ಹತ್ತುವಾಗ ಬಾಗಿಲಲ್ಲಿ ಅಳವಡಿಸೋ ಯಂತ್ರಕ್ಕೆ ಟ್ಯಾಪಿಂಗ್ ಇಳಿಯುವಾಗ ಮತ್ತೊಮ್ಮೆ ಕಾರ್ಡ್​ನ ಟ್ಯಾಪ್ ಮಾಡಿ ಇಳಿಯಬೇಕು. ರಷ್ ಇದ್ದಾಗ ದಾಖಲೆ ಪರಿಶೀಲಿಸಿ ಟಿಕೆಟ್ ನೀಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಕಂಡಕ್ಟರ್​ಗೆ ಆಗೋ ಸಮಸ್ಯೆ ತಪ್ಪಿಸುವುದಕ್ಕೆ ಬಿಎಂಟಿಸಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಟ್ಯಾಪ್ ಮಾಡಿದಾಗ ಎಲ್ಲಿಂದ ಎಲ್ಲಿಗೆ ಪ್ರಯಾಣ ಎಂಬ ಮಾಹಿತಿ ಶೇಖರಿಸುತ್ತೆ.. ಎನ್ಸಿಎಂಸಿ ಕಾರ್ಡ್ ಬಿಎಂಟಿಸಿಯಲ್ಲಿ ಅಳವಡಿಸಿಕೊಳ್ಳಲು ಈಗಾಗಲೇ ಕೇಂದ್ರ ಸಾರಿಗೆ ‌ಇಲಾಖೆಗೆ ಅನುಮತಿ ಕೇಳಿದ್ದಿವೀ ಅನುಮತಿ ಸಿಕ್ಕ ನಂತರ ಅದನ್ನು ನಾವು ಜಾರಿ ಮಾಡ್ತಿವಿ ಎಂದು ಜಾಗೃತ ಮತ್ತು ಭದ್ರತಾದಳದ ಅಧಿಕಾರಿ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: Raichur News: ಟಿಕೆಟ್ ನೀಡಲು ಸೀಟ್​ ಮೇಲೆ ಹತ್ತಿ ಕೂತ ಕಂಡಕ್ಟರ್, ಶಕ್ತಿ ಯೋಜನೆಯಿಂದ ಭಾರೀ ಫಜೀತಿ

‘ಸ್ಮಾರ್ಟ್’ ಹೊರೆ?

ಬಿಎಂಟಿಸಿ ಪ್ಲಾನ್ ಲಾಭಕ್ಕಿಂತ ನಷ್ಟ ಮಾಡುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಪ್ರತಿ ಯಂತ್ರಕ್ಕೆ ಕನಿಷ್ಠ 5 ರಿಂದ 6 ಸಾವಿರ ರೂಪಾಯಿ ವೆಚ್ಚವಾಗುತ್ತಂತೆ. ಬಸ್​ಗೆ ಎರಡು ಬಾಗಿಲಿದ್ದಲ್ಲಿ ಎರಡೂ ಕಡೆ ಯಂತ್ರ ಅಳವಡಿಸಬೇಕು ಯಂತ್ರ ಅಳವಡಿಕೆಗೇ ಸುಮಾರು 7 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗುತ್ತೆ ಮಹಿಳೆಯರು ಟ್ಯಾಪ್ ಮಾಡಿ ಹತ್ತೋದಕ್ಕೆ ಸಮಯವೂ ವ್ಯರ್ಥವಾಗುತ್ತೆ. ಬಸ್​ಗಳು ರಶ್ ಇದ್ದಾಗ ಜನರಿಗೂ ಇದರಿಂದ ಕಿರಿಕಿರಿ ಆಗುವ ಸಾಧ್ಯತೆ ಇದೆ. ಬಸ್ ಇಳಿಯುವಾಗ ಟ್ಯಾಪ್ ಮಾಡದೇ ಹೋಗುವ ಸಾಧ್ಯತೆಗಳೂ ಹೆಚ್ಚಿರುತ್ತದೆ. ಉಚಿತ ಸಂಚಾರದ ಟಿಕೆಟ್ ಮೌಲ್ಯ ಗೊತ್ತಾಗದಿದ್ರೆ ಲೆಕ್ಕ ಕೊಡಲಾಗಲ್ಲ. ಶಕ್ತಿ ಯೋಜನೆ ಹಣ ಬೇಕು ಅಂದ್ರೆ ಸರ್ಕಾರಕ್ಕೆ ಲೆಕ್ಕವನ್ನ ಕೊಡಲೇಬೇಕು‌‌. ಹಾಗಾಗಿ ಈ ಬಗ್ಗೆ ಎಲ್ಲಾ ಸಾಧಕಭಾದಕಗಳನ್ನು ಬಿಎಂಟಿಸಿ ಪರಿಶೀಲನೆ ನಡೆಸುತ್ತಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಆಗಸ್ಟ್ ನಿಂದ ಸ್ಮಾರ್ಟ್ ಕಾರ್ಡ್ ಪ್ರಯಾಣಿಕರ ಕೈ ಸೇರಬಹುದು. ಇದಕ್ಕೆ ಮಹಿಳಾ ಪ್ರಯಾಣಿಕರು ಕೂಡ ಸಂತೋಷ ವ್ಯಕ್ತಪಡಿಸುತ್ತಾರೆ.

ಒಟ್ನಲ್ಲಿ ‌ಈಗಾಗಲೇ ಕಾಂಗ್ರೆಸ್ ನ ಶಕ್ತಿ ಯೋಜನೆಯಿಂದ ಬಿಎಂಟಿಸಿ ಬಸ್ಸುಗಳಲ್ಲಿ ಕಿಕ್ಕಿರಿದು ಮಹಿಳಾ ‌ಪ್ರಯಾಣಿಕರು ಸಂಚಾರ ಮಾಡ್ತಿದ್ದು ಕಂಡಕ್ಟರ್ ಗಳಿಗೆ ಟಿಕೆಟ್ ಕೊಡಲು ಆಗ್ತಿಲ್ಲ. ಮತ್ತು ಸರಿಯಾದ ಲೆಕ್ಕ ಕೂಡ ಸಿಗ್ತಿಲ್ಲ ಅನ್ನೋ ಕಾರಣಕ್ಕೆ ಈ ಸ್ಮಾರ್ಟ್ ಕಾರ್ಡ್ ಗಳ ಮೊರೆ ಹೋಗ್ತಿದೆ ಬಿಎಂಟಿಸಿ. ಆದರೆ ‌ಕೇಂದ್ರ ಸಾರಿಗೆ ಇಲಾಖೆ ಅನುಮತಿ ನೀಡುತ್ತಾ ಅಂತ ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ