ಬೆಂಗಳೂರು: ನಗರದಲ್ಲಿ ಒಟ್ಟು 15 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವ ಬಗ್ಗೆ ತಿಳಿದುಬಂದಿದ್ದು, 10 ಕ್ಕೂ ಅಧಿಕ ಇಮೇಲ್‌ಗಳಿಂದ ಬೆದರಿಕೆ ಬಂದಿದೆ. Proxy server ಬಳಸಿ ದುಷ್ಕರ್ಮಿಗಳು ಮೇಲ್ ಮಾಡಿದ್ದಾರೆ. 8- 10 Proxy server ಬಳಸಿರುವುದರಿಂದ ಹಲವಾರು ಲೇಯರ್‌ಗಳಿವೆ. ಒಂದು ಲೇಯರ್ ಪತ್ತೆ ಮಾಡಿದ್ರೆ, ಅದು ಇನ್ನೊಂದು ಲೇಯರ್‌ಗೆ ಕನೆಕ್ಟ್ ಆಗತ್ತೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಇಮೇಲ್ ಮೂಲ ಪತ್ತೆ ಹಚ್ಚಲು ಗೂಗಲ್ ಸಂಸ್ಥೆಗೆ ಪತ್ರ ಬರೆಯಲಾಗಿದೆ. ಐಟಿ ಆ್ಯಕ್ಟ್, 66F ಅಡಿ ಪ್ರಕರಣ ದಾಖಲಾಗಿರೋದ್ರಿಂದ ಪ್ರಕರಣಕ್ಕೆ ಗಂಭೀರತೆ ಇದೆ. ತನಿಖೆ ನಡೆಸ್ತಿರುವ ಪೊಲೀಸರಿಗೆ ಎಟಿಸಿಯಿಂದಲೂ ಸಾಥ್ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣದ ತನಿಖೆ ಎಟಿಸಿ ಹೆಗಲಿಗೆ ನೀಡಲಾಗಿದೆ. ಆ್ಯಂಟಿ ಟೆರರಿಸಂ ಸೆಲ್ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಕಸದ ರಾಶಿ ಕುಸಿದು ಇಬ್ಬರು ಸಾವು
ಸುಲ್ತಾನಪುರ ಬಳಿ ಕಸದ ರಾಶಿ ಕುಸಿದು ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. JSW ಡಂಪಿಂಗ್ ಯಾರ್ಡ್ನಲ್ಲಿ ದುರ್ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸುಲ್ತಾನಪುರದಲ್ಲಿ ಘಟನೆ ನಡೆದಿದೆ. ಕಬ್ಬಿಣ ಆಯುವ ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಚಾರಣಾಧೀನ ಕೈದಿ ಜತಿನ್ ಕುಮಾರ್ ಆತ್ಮಹತ್ಯೆಗೆ ಯತ್ನ
ಕೋರ್ಟ್ನ 5ನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಚಾರಣಾಧೀನ ಕೈದಿ ಜತಿನ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 2020ರಲ್ಲಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತನ್ನ ಮಕ್ಕಳನ್ನೇ ಹತ್ಯೆಗೈದ ಆರೋಪ ಜತಿನ್ ಮೇಲಿತ್ತು. ಹುಳಿಮಾವು ಪೊಲೀಸರಿಂದ ಬಂಧಿತನಾಗಿದ್ದ ಆರೋಪಿ ವಿಚಾರಣೆ ಹಿನ್ನೆಲೆ ಇಂದು ಕೋರ್ಟ್ಗೆ ಕರೆತರಲಾಗಿತ್ತು. ಪೊಲೀಸರಿಂದ ತಪ್ಪಿಸಿಕೊಂಡು ಜತಿನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಾಯಾಳು ಆರೋಪಿ ಜತಿನ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಿವೃತ್ತ ಸೈನಿಕನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು
ದುಷ್ಕರ್ಮಿಗಳು ನಿವೃತ್ತ ಸೈನಿಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿವೃತ್ತ ಸೈನಿಕ ಸುರೇಶ್ ಅಲಿಯಾಸ್ ಜೂಡ್ ಬರ್ಬರ ಹತ್ಯೆ ಮಾಡಲಾಗಿದೆ. ಮನೆಯಲ್ಲಿ ಒಂಟಿಯಾಗಿರುವಾಗ ಸುರೇಶ್ ಬರ್ಬರ ಕೊಲೆ ನಡೆಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಇ-ಮೇಲ್ ಪ್ರಕರಣ; VPN ಬಳಸಿ ಮೇಲ್ ಮಾಡಿರೋ ಶಂಕೆ
ಇದನ್ನೂ ಓದಿ: ಇನ್ನೂ ನಿಂತಿಲ್ಲದ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಪ್ರಕರಣ; ಬೆದರಿಕೆ ಬಂದ ಶಾಲೆಗಳ ಸಂಖ್ಯೆ 17ಕ್ಕೆ ಏರಿಕೆ